ಇಂದು ಮುಂಜಾವಿನಿಂದ ಸಂಜೆಯವರೆಗೂ
ನಮ್ಮೊಡನಿದ್ದು, ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿ
ಮಾರ್ಗದರ್ಶನ ನೀಡಿ, ದಿನದ ಕಾರ್ಯಕ್ರಮವನ್ನು
ಯಶಸ್ವಿಯಾಗಿ ನಡೆಸಿಕೊಟ್ಟು
ಈಗ ತುರ್ತು ಕೆಲಸದ ಮೇಲೆ ನಿರ್ಗಮಿಸುತ್ತಿರುವ
ಸನ್ಮಾನ್ಯ ‘ದಿವಸ್ಪತಿ ಹೆಗಡೆ’ಯವರಿಗೆ ನಮ್ಮ ನಿಮ್ಮೆಲ್ಲರ
ಅನಂತಾನಂತ ಪ್ರಣಾಮಗಳು ಹಾಗೂ ನಾಳೆಯೂ ಇದೇ ರೀತಿ
ನಮ್ಮ ಮೇಲೆ ದಯೆಯಿಟ್ಟು ಮುಂಜಾವಿನಿಂದಲೇ
ನಮ್ಮೊಡನಿರಬೇಕೆಂದು
ಸವಿನಯ ಪ್ರಾರ್ಥನೆಗಳು.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)