Home / Poem

Browsing Tag: Poem

ಹೋದೆಯ ಎಂದರೆ ಗವಾಕ್ಷಿಯಿಂದ ಬಂದೇನೆಂದಿತು ಒಂದು! ಸಕ್ಕರೆ ಡಬ್ಬವ ಕವಚಿ ಹಾಕಿತು ಹಾಲಿನ ಮುಚ್ಚಳ ತೆರೆದು ಬಿಸಾಕಿತು ಬೆಕ್ಕಿನ ಬಾಲವ ಎಳೆದು ನೋಡಿತು ಮನೆಯೊಳಗೆಲ್ಲಾ ಸುಳಿದು ನೋಡಿತು ಶಾಲೆಯಿಂದ ಬಂದ ಪುಟ್ಟನ ಸ್ವರ ಕೇಳಿ ಒಡನೆಯೇ ಅದು ಓಡಿ ಹೋಯಿತು...

ದೇಹ ಗಳಿಯುತ್ತಿರಲು ಮನಕೆ ಯೌವನವಯ್ಯ ಮನಕೆ ಯೌವನವಿರಲು ಆಸೆಗಳು ಹೆಚ್ಚಯ್ಯ, ಸಾಧಿಸುವ ಶಕ್ತಿಗಳು ಭೋಗಿಸುವ ಶಕ್ತಿಗಳು ಕುಂದುತ್ತ ಬರಬರಲು ನೊಂದು ಸಾಯುವೆವಯ್ಯ. ನರೆಸುಕ್ಕುಗಳ ನೋಡಿ ಮೋಸ ಹೋಗಲು ಬೇಡ ಮನಕೆ ಸುಕ್ಕುಗಳಿಲ್ಲ ಹಿರಿಯತನ ಮುನ್ನಿಲ್ಲ. ಸ...

ಓದದೇ ಬರೇದೇ ಅರೆಘಳಿಗೆ, ಬದುಕಲಾರೆ ಗುರುವೆ, ಸದಾ ನಿನ್ನ ಚರಣದಾಸನು, ಅನಾವರತದಿ ಗುರುವೆ. ಕೃತಕ ನಗೆ, ಸದಾ ಹಗೆ, ನಿತ್ಯ ಸ್ಫೋಟ, ಭೀತಿ ಗುರುವೆ, ನೆಮ್ಮದಿ ಜೀವಕೆ, ಜ್ಞಾನವೊಂದೇ ತಾರಕ ಮಂತ್ರ ಗುರುವೆ. ಓದಿಲ್ಲದೇ ಕುರುಡು ನಾಯಿ ಸಂತೆಗೆ, ಬಂದಂಗೆ...

ಸೂರ್ಯ ನೋಡು ನಿನ್ಹಾಗಲ್ಲ ಎಷ್ಟು ಜಾಣ ಕತ್ತಲಾಗೋದರ ಒಳಗೆ ಮನೆಗೆ ಸೇರ್‍ಕೋಳ್ತಾನೆ ಒಂದು ದಿನಾನು ಲೇಟ್ ಮಾಡೋದಿಲ್ಲ ಕತ್ತಲಾದ ಮೇಲೆ ಒಂದು ಕ್ಷಣವು ಆಕಾಶದಲ್ಲಿರೋದಿಲ್ಲ. *****...

ಈ ಜಂಗಳ್ಯಾಗೆ ಎಲ್ಲದಾನವ್ನು ಮನಸ್ಯಾ ಅಂಬೋನು ಕೆಲವು ಕಾಗದಾ ತಿಂಬೋ ಕತ್ತೆಗ್ಳು ಕೆಲವು ಮೈಗೆ ಮಣ್ಣುಮೆತ್ತಿಗೆಂಡು ಮಣ್ಣುತಿಂಬೋ ಮುಕ್ಕುಗ್ಳು ಕೆಲವು ಹೆಣಾತಿನ್ನೋ ಹದ್ದುಗಳು ಕೆಲವು ಮಾಂಸಾ ಮೂಸೋ ನಾಯಿಗಳು ಕೆಲವು ದುರ್ವಾಸನೆ ಗಟಾರದೊಳಗೇ ಹೊರಳೋ ಹ...

ಎಲ್ಲಾ ಥೇಟ್ ನಿನ್ನ ಹಾಗೆಯೇ ಇವಳು ಸೊಂಟ ಹೊಟ್ಟೆಯ ಸುತ್ತಳತೆ ಬಿಟ್ಟರೆ – ಇರಲಿ ಬಿಡು ನನ್ನ ಮಕ್ಕಳಿಗೆ ಅಮ್ಮ ಅಲ್ಲವೆ ನೀನು. ಮಾತು ಕಡಿಮೆ ಮೌನಿ ಯಾವತ್ತೂ ಕಣ್ಣಂಚಿನ ನಗೆಯವಳು – ಹೋಗಲಿ ಬಿಡು ನನ್ನ ಕಿರಿಕಿರಿಗೆ ಕೆಂಡವಾಗುವಿಯಲ್ಲವ...

ಜಡ ಮಾನಸವ ತಟ್ಟಿ ಚೇತನವ ಬಿತ್ತರಿಸಿ ಸಾಗುತಿಹ ಓ ಯಾತ್ರಿಕ ತಾಳಣ್ಣ ನಾ ಬರುವೆ ಹಿಂದಿಷ್ಟು ಸೋತಿರುವೆ ದಿಬ್ಬಗಳ ಹಾಯ್ವತನಕ ಮುಳ್ಳೆಷ್ಟೊ ತುಳಿದಿಹೆನು ಕಲ್ಲೆಷ್ಟೊ ಎಡವಿದೆನು ಹಸಿವಿನಿಂ ಸೊರಗುತಿಹೆನು ನಿಲ್ಲಣ್ಣ ನಿಲ್ಲಣ್ಣ ನಿನ್ನಂಥ ಪಯಣಿಗರ ಹಾದಿ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...