Home / Poem

Browsing Tag: Poem

ಕವಿಯ ಕಣ್ಣೊಂದು ಪ್ರಿಜಂ ಜಗಕೆಲ್ಲ ಹಾಕಿದಂತೆ ಮೆಸ್ಮರಿಜಂ ಹಿಡಿದಂತೆ ವಿಚಿತ್ರ ರಾವುಗನ್ನಡಿ ಕಪ್ಪು ಬಿಳುಪುಗಳ ಚಿತ್ರಗಳಿಗೆ ಮೂಡುವವೋ ಕೊಂಬುಬಾಲ ಕೋರೆ ಹಲ್ಲುಗಳು ಬಣ್ಣ ಬಣ್ಣ ಮುಖವಾಡಗಳು ವೇಷಭೂಷಣಗಳು ಸರಳ ರೇಖೆಯೊಳಗಿಂದ ಹಾಯುವ ಬಿಳಿಕಿರಣಗಳು ವಕ...

ಕಳೆದ ಕಾಲವ ಗುಣಿಸಿ ಏಕೆ ಕೊರಗುವೆ ಬರಿದೆ ಮೂಡುತಿದೆ ಕನಸು ತೆನೆಯೊಡೆವ ಚಿತ್ರ ಬೆಳಕು ನೆರಳಿನ ಹವಳ ಕರಿಮಣಿಯ ಪಾತ್ರದಲಿ ಹಾಯುತಿದೆ ಈ ನೆಲದ ಭಾಗ್ಯಸೂತ್ರ ಯಾರ ಹಮ್ಮಿಗೊ ನಮ್ಮ ಅಭಿಮಾನ ಮಣಿಸಿ ಕೈಗಳೂ ಕಾಲಾಗಿ ನಡೆದ ದೈನ್ಯ ಮುಗಿದು ಬಂದಿದೆ ನಮ್ಮ ಬ...

ಮಸಿ ಬಟ್ಟೆ ಆ ಹುಡುಗ ಆ ಹುಡುಗ ಮಸಿ ಬಟ್ಟೆ ಬರಿಗಾಲಲಿ ಬೀದಿ ಬೀದಿ ಸುತ್ತುತ್ತಾ ‘ಸಾಕು’ ಎಂದೆಸೆದದ್ದ ಎತ್ತಿಕೊಳ್ಳುತ್ತಾನೆ ಹುಡುಕಿ ತುತ್ತಿನಂತೆ ಕುಡಿದು ಬಿಸುಟ ಖಾಲಿ ಬಾಟಲು ಕತ್ತರಿಸಿ ಒಗೆದ ‘ಡೈರಿ’ ಹಾಲಿನ ಪಾಕೆಟ್ಟು ತುಕ್ಕು ಹಿಡಿದ ಸೈಕಲ್ಲಿ...

ಸಾವಿರ ನೇತ್ರದ ಸಾವಿರ ಪಾತ್ರದ ಸಹಸ್ರಶೀರ್ಷ ಪುರುಷನೆ ನೀ ಸಾವಿರ ದನಿಗಳ ಗಾನದ ಮೇಳಕೆ ಆಧಾರದ ಶ್ರುತಿಯಾಗಿಹೆ ನೀ ಸಾಗುತ್ತಿರೆ ದೊರೆ ನೀ ರಥದಲ್ಲಿ ಬೆಳುದಿಂಗಳ ಹೊಳೆ ಹರಿಯುವುದು, ನಿನ್ನ ಮೈಯ ಆಭರಣಗಳಾಗಿ ಚಿಕ್ಕೆ ಚಿಕ್ಕೆಯೂ ಮೆರೆಯುವುದು ಆಗಸದಿಂದ...

ಅದೊ ನೋಡು! ಹೊಲದಲ್ಲಿ ನೇಗಿಲನು ಬಲ್ವಿಡಿದು ಮೈಬೆವರಿನಿಂದುತ್ತ ಮಣ್ ನೆನೆವರಂ ದುಡಿದು ಹೆರವರಿಗೆ ಹೊನ್ ಬೆಳೆಯ ತೆಗೆಯೆ ಜೀವವ ತೇದು ನೇಗಿಲಿನ ರೇಖೆಯಿಂ ದುಡಿವ ಬಾಳ್ ನೆತ್ತರಿಂ ಭಾರತ ಭವಿಷ್ಯವನು ಬರೆವನವನು ನೆಲತಾಯ ನಲ್ಗುವರ-ಬಡ ರೈತನು. ಮತ್ತದೋ...

ಅಮ್ಮಾ ಅಮ್ಮಾ ಮೋಡವ ಮುಟ್ಟಿ ನೋಡಲು ಹೇಗಿರತೆ? ಬೆಣ್ಣೆಯ ಹಾಗೆ ಮಿದುವಾಗಿರತೇ-ನಿನ್ನ ಕೆನ್ನೆಯ ಹಾಗೆ ನುಣುಪಾಗಿರತೇ? ಹಾಸಿಗೆಯಂತೆ ಮೆತ್ತಗಿರತ್ತೇ–ಬಿದ್ದು ಹೊರಳಾಡಬಹುದೇ ಉರುಳಾಡಬಹುದೇ? ಇರುಳೆಲ್ಲಾ ನಾವದರಲಿ ಮಲಗಿರಬಹುದೇ ಚದ್ದರ ಬಿಟ್ಪು ...

ಕವಿತೆಯ ಕಟ್ಟುವ ಜಂಬದ ಕೋಳೀ! ಬಾ ಬಾ ಎನ್ನುತ ಕೂಗಿದನು ಅವನೇ ನನ್ನನ್ನು ಕರೆದವೆನೆನ್ನುತ ಜವದೊಳು ದನಿಹಿಡಿದೋಡಿದೆನು ಏನಿದು ನಿನ್ನೀ ಆರ್ಭಟವೆನ್ನುತ ನಸುನಗೆಯಿಂದಲಿ ಕೇಳಿದನು ನಾನೇನುತ್ತರ ಕೊಡದಿರೆ ಮರುಕದಿ ಗಡುವನು ನಿಯಮಿಸಿ ಕಳುಹಿದನು ಗಡುವಿಗ...

ಜಯ ಜಯ ಜಯ ಕನ್ನಡ ರಾಜೇಶ್ವರಿ ಶರಣು ಬಂದೆ ಪಾದಕೆ ಭುವನೇಶ್ವರಿ ಪಂಪನ ನುಡಿಮಿಂಚಿನ ಮಣಿಮಾಲೆಗೆ ನಾರಣಪ್ಪ ಕಡೆದ ಭಾವಜ್ವಾಲೆಗೆ ಶಿಲೆಯೆ ಅರಳಿ ನಗುವ ಕಲೆಯ ಲೀಲೆಗೆ ಯಾರು ಸಮವೆ ತಾಯಿ ನಿನ್ನ ಚೆಲುವಿಗೆ? ಶಂಕರ ರಾಮಾನುಜರಲಿ ಸುಳಿಯುವೆ ಮಧ್ವರ ನವಚಿಂತ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...