Home / Poem

Browsing Tag: Poem

ರೊಕ್ಕದ ಲೀಲೆಯು ದೊಡ್ಡದೋ ಜಗದಿ ರೊಕ್ಕದ ಮಹಿಮೆಯು ದೊಡ್ಡದೋ ಕಾಮದ ದಾಹಾ ಕರುಳಿನ ದಾಹ ಹಸಿವು ನೀರಡಿಕೆಗಳ ದಾಹವುಂಟು ನೋಡುವ ಮೂಸುವ ತಿನ್ನುವ ಸವಿಯುವ ಕೇಳುವ ದಾಹಾ ದೇಹಕ್ಕುಂಟು ಪ್ರೀತಿಯ ದಾಹಾ ಸ್ನೇಹದ ಮೋಹಾ ನಾನೂ ನೀನೂ ಜೀವಕೆ ಜೀವ ಎಲ್ಲ ದಾಹಗಳ...

ಆರದಿರಲಿ ಆಸೆ ಉರಿಗೆ ಬೀಳದಿರಲಿ ಕನಸು, ನೋಯದಿರಲಿ ಭಾರ ಹೊತ್ತ ಬಡವರ ಹೂಮನಸು. ಯಾರ ಅನ್ನ ಎಲ್ಲೋ ಬೆಳೆವ ರೈತನ ಬಲದಾನ ಯಾರ ಭಾರ ಏಕೋ ಹೊರುವ ಕೂಲಿಯವನ ಮಾನ ಬೀದಿ ಗುಡಿಸಿ ಕೊಳೆನೆಲದಲಿ ಮಲಗುವವನ ನೇಮ ಕಾಯುತ್ತಿವೆ ನಮ್ಮ, ಅವರೆ ಈ ನಾಡಿನ ಪ್ರಾಣ ಗು...

ಕೇಳಿದ್ದೆವು ಗಗನಸಖಿಯರೆಂದಷ್ಟೆ ಯಾವ ಮಾಯಾಲೋಕದವರಿವರು- ತೆಳ್ಳನೆಯ ದೇಹ ಗುಲಾಬಿ ಬಣ್ಣ ಮೈಗೊತ್ತಿದ ಸೀರೆ ಎತ್ತಿಕಟ್ಟಿದ ಕೂದಲು ತಿಳಿನಗೆ ಹೊಳಪು ಕಣ್ಣು ತುದಿಗಾಲಲಿ ನಡೆವ ನವಿಲೆಯರು ಬೆಡಗು ಬಿನ್ನಾಣಗಿತ್ತಿಯರು ಮೆಲ್ಲಗೆ ಕೈ ಮುಗಿದು ಸ್ವಾಗತಿಸಿ ...

ಹೊಳೆಯ ಆ ದಂಡೆಯಲಿ ಸುಂದರ ಜನ ಕಣ್ಣ ಕುಕ್ಕುತ್ತಾರೆ ತುಂಬಿ ಹರಿವ ಹೊಳೆ ಸಿಹಿ ನೀರು ಅವರ ಹೊಲಗದ್ದೆಗಳಿಗೆ ಅಲ್ಲಿ ಮೀಯುವ ಮೀನು ಅವರ ಗಂಗಾಳಕೆ ಆ ಹಸಿರು ಕಾಡು ಅಲ್ಲಿ ಜಿಗಿದಾಡುವ ಜಿಂಕೆ ಕುಣಿವ ನವಿಲು ಉಲಿವ ಹಕ್ಕಿಗಳು ಅವರ ಸಂತೋಷಕೆ ಕಣ್ಣು ಕುಕ್ಕ...

ಹರಿಯುವ ಹೊಳೆಗೂ ಸುರಿಯುವ ಮಳೆಗೂ ಏನೇನಿದೆಯೋ ಸಂಬಂಧ! ಬೆಳಕಿನ ಹನಿಗೂ ಹಕ್ಕಿಯ ದನಿಗೂ ಇಲ್ಲವೆ ಹೇಳಿ ಒಳಬಂಧ? ನಾರುವ ಕಸಕೂ, ಹೂ ಪರಿಮಳಕೂ ಇದ್ದೇ ಇದೆ ಬಿಡಿ ಮಾತುಕಥೆ; ಹಣ್ಣಿನ ಒಳಗೇ ಬೀಜವಿಡಲು ಮರ ಉಪಾಯವಲ್ಲದೆ ಇದ್ದೀತೇ? ಕುಡಿಯಲು ಬಾರದ ಕಡಲಿನ ...

ಎಡಬಲದಿ ನೀನಿರಲು ತೊಡಕುಗಳು ಎನಗುಂಟೆ? ಬಿಡೆ ನಿನ್ನ ನಿಲ್ಲು ದೊರೆಯೇ ಕಡು ಬಾಧೆಗಳು ಬಂದು ಹುಡುಕಿ ತಂದುವು ನಿನ್ನ ಅಡಿಗೆರಗಿ ನುತಿಸುವೆನು ತಾಳು ಶ್ರೀ ಹರಿಯೆ ಎನ್ನ ಒಳ ಹೊರಗೆಲ್ಲಾ ನಿನ್ನ ರಾಜ್ಯವೆ ನೋಡ ಇನ್ನಾವ ಕೊರತೆ ಎನಗೆ ಕಣ್ಣು ಸಾಲವೊ ನಿನ...

ದೇವಲೋಕದ ಹೂವು ಭೂಲೋಕಕಿಳಿದಂತೆ ಭಾವವೆನ್ನೊಳಗೆ ಬಂತು ಸಾವಿಗಂಜಲು ಬೇಡ ಪರರಿಗಳುಕಲು ಬೇಡ ನೋವುಂಟೆ ಬಕುತರಿಗೆ? ಹಸುಳೆ ಕೇಳೆಂದು ಸಾಲು ದೀವಿಗೆಯಂತೆ ತಾರೆ ನೆಲಕಿಳಿದಂತೆ ಪೊಳೆವ ಮಾಣಿಕ್ಯದಂತೆ ಕೋಲು ಮಿಂಚೊಡೆದಂತೆ ಫಕ್ಕನೇ ನಕ್ಕಂತೆ ಬೆಳಕು ನೋಡೆಲ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...