Home / Poem

Browsing Tag: Poem

೧ ಒಂದೂರು ಊರೊಳಗೊಂದು ದುರ್ಗ ದುರ್ಗ ದೊಳಗೊಂದು ಅರಮನೆ ಅರಮನೆ ಯೊಳಗೊಂದು ಮನೆ ಮನೆ ಗೇಳು ಬಾಗಿಲು ಹದಿನಾಲ್ಕು ಕಿಟಕಿ ಪಲ್ಲಂಗದ ಮೇಲೆ ರಾಜಕುಮಾರಿ ಒಂಟಿ ನಿದ್ದೆ ಹೋಗಿದ್ದಾಳೆ ನಿದ್ರಿಸುವ ಸುಂದರಿ ಅಮವಾಸ್ಯೆ ರಾತ್ರಿ ಮೂರನೇ ಝಾವ ಮನೆಯೊಳಗೆ ಮೌನವೋ...

ಬೊಬ್ಬಿಡುವ ಶರದಿ ನಾನಲ್ಲ ಸದ್ದಿಲ್ಲದೆ ಹರಿವ ನದಿಯೂ ಅಲ್ಲಾ ಬಳ್ಳಿ ಕುಸುಮ ಕೋಮಲೆ ನಾನಲ್ಲ ನಾನು ನಾನೇ ಗೆಳೆಯ ನಾನು ನಾನೇ, ನಾನು ನಾನೇ ಮನದಾಳದ ಭಾವಗಳೆಲ್ಲ ಉರಿವ ಕೆಂಡವಲ್ಲ ಬೆಳದಿಂಗಳ ತಂಪೂ ಅಲ್ಲಾ ಕೆಂಪು ಕೆಂಡ ತಂಪಿನ ಮಧ್ಯೆದೊಳಗಿನ ಭಾವ ನಾನು...

ತಿಕ್ಕಿ ತೀಡಿ ಕಸಗುಡಿಸಿ ನೀರೆರೆಚಿ ಹದ ಮಾಡಿ ಮಣ್ಣು ಬಿಳುಪು ನುಣ್ಣಗಿನ ರಂಗೋಲಿ ಹಿಟ್ಟು ತೋರು-ಹೆಬ್ಬೆರಳಿನ ಮಧ್ಯೆ ನಾಜೂಕು ಬೊಟ್ಟು! ಚುಕ್ಕೆ ಚುಕ್ಕೆಗಳ ಎಣಿಸಿ ಸಮಾನಾಂತರದಿ ಬಿಡಿಸಿ ಆಚೀಚೆ ರೇಖೆ ಜಾರದಂತೆ ಒರೆಸಿ ಒಂದಿನಿತೂ ಲೆಕ್ಕ ತಪ್ಪುವಂತಿ...

ನನ್ನ ಮನೆಯ ಪಕ್ಕದಲ್ಲೊಂದು ದರಿದ್ರ ಕಾಲೇಜು ಆದ ಮೇಲೆ ಏನು ಹುಡುಗ ಹುಡುಗಿಯರ ದೊಡ್ಡ ಪೌಜು; ತಡೆಯಲಾರದ ಗೌಜೇ ಗೌಜು ಪಾಪಾ ಎನು ಮಾಡುತ್ತದೆ ಕಾಲೇಜು ಇದಕ್ಕೆ ಕಾರಣವೇನಿದ್ದರೂ ಕಾಲ + ಏಜು. *****...

ಒಸರಿ ಕೊಸರಿ ಕಸುವಿನಿಂದ ಹಾರಲೆನ್ನ ಜೀವನ ಕಸಕು ಮಸಕು ದೂರ ಸರಿಸಿ ಅಳಿಯಲೆನ್ನ ಬಂಧನ ಸತ್ಯಸುಧೆಯ ಉಸಿರಿನಿಂದ ಕಾಣಲೆನಗೆ ಮುಂದನ ಶ್ರೀಯ ಮೋಹ, ಶ್ರೇಯ ದಾಹ ಅಳಿಯಲದೇ ನಂದನ ರಕ್ತ ಉಕ್ಕಿ, ಶಕ್ತಿ ಮಿಕ್ಕಿ ಕೋಡಿಯೊಡೆದು ಓಡಲಿ ಕಾಮ ಮೋಹ ಸಿರಿಯು ಸ್ವಾರ...

ಕಿರಣಮಾಲೆ ಕೊರಳಲಿ ತಳೆದ ದೇವನೆ ನೀಡೋ ನಿಜ ದರ್ಶನ ಹೇ ಭಾಸ್ಕರನೆ ಜಗಜಗಿಸುವ ಕಿರಣಜಾಲ ಹೊಳೆವ ಹೊನ್ನ ತಳಿಗೆ ಬೆಳಗಿ ನಡುವೆ ನಿಂತಿದೆ ಸರಿಸಿ ಸತ್ಯ ಮರೆಗೆ ನಿಜವ ತಿಳಿವ ಹಂಬಲ ತುಡಿದಿದೆ ಎದೆ ತುಂಬ, ಸರಿಸಿ ಹೊನ್ನಿನಂಬುಗಳನು ತೋರೋ ನಿಜಬಿಂಬ *****...

ಅವ್ವನ ಸೀರೆ ಮಡಚಲಾರೆ ಅಪ್ಪನ ರೊಕ್ಕ ಎಣಿಸಲಾರೆ ಏನದು? ನೀ ಹೇಳು….. ನೀ ಹೇಳು ಸೀಟಿಗಂಟಿಸಿ ಕೂರಿಸಿದ್ದ ಗಲಾಟೆ ಮಕ್ಕಳು ಮುಖ ಕಿವುಚಿ ಪ್ರಶ್ನೆ ಮರೆಸಲು ಕಪ್ಪು ಆಕಾಶದಲ್ಲಿ ಎಷ್ಟೊಂದು ಹೊಳೆಯುವ ತಾರೆಗಳು ನೋಡಮ್ಮ ಮೇಲೆ ಮೇಲೆರಲಿ ನಮ್ಮ ವಿಮ...

ಜೀವದ ಹಕ್ಕಿ ಪಲ್ಲವಿಸುತಿದೆ ಬಿರಿ ಬಿರಿದ ಕೊರಳಿನಿಂದ, ಅಲೆವ ಮೋಡಗಳ ಕೈ ಬೀಸಿ ತಡೆಯುತಿದೆ ಅನುಪಲ್ಲವಿಗೆ ದೈನ್ಯದಿಂದ ||ಪ|| ಮೌನ ಮೌನದ ಮಾತಿನ ಮಾತನು ಮೀರಿನಿಂತ ಕೂಗು, ನಿನದ ನಿನದದ ಬಾಳ ತರಂಗದ ತಂತುತಂತಿನಾ ಕೊರಗು | ಚಿಂದಿ ಚಿಂದಿಯ ಹಸಿರು ವಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...