
ಬಗೆಬಗೆಯ ಬಗೆಗಳ ಹಗೆಯಲ್ಲಿ ಬಗೆಹರಿಯದಾಗಲು ನಿನ್ನ ನಗೆಮೊಗದ ಮುಖಾಂತರ ನಿನ್ನೆದೆಯ ಗೂಡುಸೇರುವುದು ನನ್ನ ಆಶೆ. ಎಂತೆಂತಹ ಚಿಂತೆಗಳ ಸಂತೆಯಲ್ಲಿ ಹಾದಿ ದೊರೆಯದಾಗಲು ನಿನ್ನ ಭವ್ಯ ಮುಖದ ಮುಖಾಂತರ ನಿನ್ನ ಭವಿಷ್ಯದ ಮುಗಿಲಲ್ಲಿ ಹಾರುವುದು ನನ್ನ ನಿರಾಶ...
ಭರತನಿದ್ದ ಬಾಹುಬಲಿಯಿದ್ದ ಗೊಮ್ಮಟನಿರಲಿಲ್ಲ ಜಿನನಿರಲಿಲ್ಲ ಭರತ ಬಾಹುಬಲಿಯ ಮಧ್ಯೆ ಯುದ್ಧ ನಡೆದಿತ್ತು ಅಣ್ಣತಮ್ಮನ ನಡುವೆ ಗೊಮ್ಮಟನಿರಲಿಲ್ಲ ಜಿನನಿರಲಿಲ್ಲ ಗಧಾಯುದ್ಧ ಖಡ್ಗ ಯುದ್ಧ ಸಕಲಾಸ್ತ್ರ ಯುದ್ಧ ನಡೆದಿತ್ತು ಸಹಸ್ರವರ್ಷ ಗೊಮ್ಮಟನಿರಲಿಲ್ಲ ಜ...
ಸೀತೆಯರ ದಂಡು ದಾಪುಗಾಲು ಹಾಕುತ್ತ ಹೊರಟಿತ್ತು ನೊಗ ಹೊತ್ತು ಹೈಟೆಕ್ ಚುನಾವಣೆಗಳ ಭದ್ರಕೋಟೆಯ ಭೇದಿಸಿ, ಪಂಚ ಮಹಿಳೆಯರು ಮುಖ್ಯ ಮಂತ್ರಿಗಳು ಸ್ತ್ರೀಲೋಕದ ಕಷ್ಟಗಳು ಬಗೆ ಹರಿದಾವೆ? ಸೀತೆಯರಿಗಾದ ಅನ್ಯಾಯ ಸದನದಲಿ ಸದ್ದಾಗಿ ಧ್ವನಿಯೆತ್ತಿ ಕೇಳಿಯಾರೆ?...
ಕೋಗಿಲೆ ಕೊರಗುತಿದೆ ನವಿಲು ಮರುಗುತಿದೆ ಕನ್ನಡ ನಾಡಲ್ಲಿ; ಸಿರಿ ಗಂಧದ ಬೀಡಲ್ಲಿ ! ಜಿಂಕೆ ಓಡದಿದೆ ಹಕ್ಕಿ ಹಾರದಿದೆ ಕನ್ನಡ ಬಾನಲ್ಲಿ ; ತಿಳಿ ಗನ್ನಡ ನೀಲಿಯಲಿ ಸಹ್ಯಾದ್ರಿಯ ಹಸಿರು ಕಳಕೊಂಡಿದೆ ಉಸಿರು ನಂದನ ವನದಲ್ಲಿ ; ಚೆಲುವ ಕನ್ನಡ ನೆಲದಲ್ಲಿ ಗ...
ಮೂಲ: ಸಮರೇಂದ್ರಸೇನ್ ಗುಪ್ತ ಬದಿಗೆ ನಿಲ್ಲಿ ಅಂತ ಪೋಲೀಸು ಹೇಳಿದ, ನಿಂತೆ ಬದಿಯಲ್ಲಿ. ಪ್ರಮುಖ ವ್ಯಕ್ತಿ ಯಾರೋ ಹೋಗಲಿರುವಂತಿತ್ತು ರಸ್ತೆಯಲ್ಲಿ; ಬಸ್ಸು ಕಾರುಗಳನ್ನು ರಿಕ್ಷಾ ಸ್ಕೂಟರ್ಗಳನ್ನು ತಡೆಯಲಾಗಿತ್ತು. ನಾನು ಇದ್ದದ್ದೊ ಆ ರಸ್ತೆ ಬದಿಯಲ್...
ರಸ್ತೆ ಬದಿಯಲ್ಲಿ ಮುದುರಿ ಮಲಗಿರುವ ಮುದುಕನಿಗೆಷ್ಟು ಪ್ರಾಯ? ಅರಿತವರ್ಯಾರು? ಅರಿತರೂ ಹೇಳುವವರ್ಯಾರಿದ್ದಾರೆ ಹೇಳಿ? ಹಿಂದಿಲ್ಲ, ಮುಂದಿಲ್ಲ ಕೇಳುವವರಾರಿಲ್ಲ ಅವನ ವ್ಯಥೆ ಒಮ್ಮೊಮ್ಮೆ ಗೊಣಗುತ್ತಾನೆ ತನ್ನಷ್ಟಕ್ಕೆ ಅದ್ಯಾವ ಕಥೆಯೋ ಆತನದ್ದು? ನಗುತ್...
ಕ್ಷುಬ್ಧ ಸಾಗರದಂತೆ ಅಲ್ಲೋಲಕಲ್ಲೋಲ ನನ್ನಂತರಂಗದಲ್ಲಿ ಹೃದಯವಿಂದು ಕುದಿಯುತಿದೆ ಉಕ್ಕುತಿದೆ ಬತ್ತುತಿದೆ ಒಂದೊಂದು ನನ್ನಾತ್ಮ ಬಿಂದು ಯಾವ ತಪ್ಪಿಗೆ ಯಾವ ಶಿಕ್ಷೆಯಿದೊ ಕಾಣೆನು ಸರ್ವ ಕ್ಷಮೆ ಯಾಚಿಸಲು ನಾನಿಂದು ಸಿದ್ಧನು ಏನ ಮಾಡಲು ಹೊರಟು ಏನಾಯಿತ...













