ಇವರು ಗಾಳಿಗುದುರೆಯೇರಿ
ಸವಾರಿ ಹೊರಟವರು
ಕೈಗೆಟುಕದ ಆಕಾಶವ
ಸವರಲೆತ್ನಿಸಿದವರು
ಸಾಧನೆಯ ಹಿಂದೆ ಬಿದ್ದು;
ಎದ್ದು ಕನಸು ಹೆಣೆದವರು
ಗುರಿಯೊಂದೇ ನೆಲೆಯಾಗಿ
ಲಕ್ಷ ಆಸೆಗಳ ಅಲಕ್ಷ್ಯವಾಗಿಸಿದವರು
ಬೆಳಕಿನ ಕೊನೆಯಲಿ ಬಂದ
ಅಂಧಕಾರದ ಹೊಡೆತಕ್ಕೆ ಮರುಗಿದವರು
ಕತ್ತಲಿನ ನೆರಳಿನಲ್ಲಿ ಬೆಳಕಿನ
ಸೆಲೆಯನ್ನು ಕಂಡವರು
ಕೈಮೀರಿ ಹೋದ ಕಾಲಕ್ಕೆ
ಕಲ್ಲು ಹೊಡೆದವರು
ಕಾಲು ಹಿಡಿದೆಳೆವ ಶಕ್ತಿಯ
ಹಿಡಿದು ಬಡಿದವರು
ಈಜಲಾಗದ ಕಡಲಿನ
ಎದುರು ಸೆಣಸಿದವರು
ಬಾಳೆಂಬ ನೌಕೆಯನು
ದಡಕ್ಕೆ ಮುಟ್ಟಿಸಿದವರು.
*****


















