ಬದುಕಿ ನಾಳದಲಿ ಮನಸೊಂದೇ ಮಿತ್ರ
ಬದುಕಿನಲ್ಲಿ ಬಾಳಿರಳಿ ಮನವೂ ಪವಿತ್ರ
ಇನ್ನೊಂದು ಬೇಡದಿರಲಿ ಇಂದ್ರಿಯಗಳು
ಇನ್ನೊಂದು ಕಾಡದಿರಲಿ ಭಾವೇಂದ್ರಿಯಗಳು
ದೇವರೆ ನಮಗೆ ಜಿವ್ಹೆ ನೀಡಿದ ನಲ್ಲವೆ!
ನಮ್ಮ ದನಿಗಳು ಕೇಳಲಾರನೇನು!
ಕಣ್ಣುಗಳು ದೇವರು ಪ್ರಧಾನಿಸದನಲ್ಲವೆ!
ಹಾಗಾದರೆ ಆ ರೂಪ ನೋಡಲಾರನೇನು!
ಜೀವನ ಸಂಕೋಲೆಗಳು ಎನ್ನ ಕಾಡಿವೆ
ಮನ ಬುದ್ಧಿಗಳು ನಿತ್ಯ ಬಾಡಿವೆ
ದೇವನನ್ನು ಕಾಣದಂತೆ ನನ್ನ ಮಾಡಿವೆ
ಹಗಲಿರುಳು ತನ್ನ ಗಾನವೊಂದೇ ಹಾಡಿವೆ
ಎಂದಿಗಾಗುವದೋ ಕೃಷ್ಣನ ದರ್ಶನ
ಎಂದಿಗೂ ಮಹಾ ಮಹಿಮನ ಸಂದರ್ಶನ
ಲೋಕ ರೂಪಿಯಲಿ ಬೆರೆತು ಕರಗಿದೆ ಕ್ಷಣ ಕ್ಷಣ
ಇದಕೆ ಬೇಕೆ ಇನ್ನೊಂದು ನಿದರ್ಶನ
ಬರುವುದೆಲ್ಲ ಬರಲಿ ನಾನು ಸ್ವಾಗತಿಸುವೆ
ಆದರೆ ದೇವನ ರೂಪ ನಿತ್ಯ ಸ್ತುತಿಸುವೆ
ಹಗಲಿರುಳು ಪರಮಾತ್ಮನಿಗೆ ಕಾತರಿಸುತ್ತಿರುವೆ
ಮಾಣಿಕ್ಯ ವಿಠಲನ ತೀರುವೆ
*****
















