Home / Poem

Browsing Tag: Poem

ಆಕಾಶಮಾರ್ಗದಲ್ಲಿ ಗಾಂಧಿಹೊರಟಿದ್ದು ಕಂಡೆ ಇದು ಡಿಸೆಂಬರ ಚಳಿಗಾಲ ಬೆಚ್ಚಗೆ ಹೊದ್ದುಕೊಂಡು ನಡಿಬಾರ್‍ದಾ ಹುಚ್ಚಪ್ಪಾ ಎಂದೆ ಎಲ್ಲಿಯ ಚಳಿ ಎಲ್ಲಿಯ ಮಳೆ ಎಲ್ಲರೆದೆ ಹೊತ್ತಿ ಉರಿಯುವಾಗ ನನ್ನದೇನು ಬಿಡು….. ಎನೇನೋ ಗೊಣಗುತ್ತಾ ವಿಮಾನ ಹಿಂದಿಕ್ಕ...

ಕೆಳದಿ ಕೇಳೆನ್ನೊಲವಿನಾ ಗಾಥೆಯ ಕಣ್ಣದೀಪ್ತಿಯಿನಿಯನೊಲಿಸಿದಾ ಪರಿಯ ಮೂಡಲದರುಣಗಿರಿ, ಪಡುವಲದ ಶಶಿಶಿಖರ, ಪಂಚ ಭೂತಗಳಲೆಲ್ಲ….. ನನಗೊಲಿದವನ ರೂಹು, ಲತೆ ಲತೆಗಳಲರಲರು, ಸುಮ ಸುಮದ ಘಮದಲ್ಲಿ, ಸೊಗಸ ಕನಸಿನಿನಿಯನ…. ರೂಪ…. ತೇಜರಾ...

ನೀ ಮೊನ್ನೆ ಅಚಾನಕ್ಕಾಗಿ ಪತ್ರ ಬರೆದೆ ಅದರ ತೇವ ನನ್ನ ತೋಯಿಸಿತು ಕಣ್ಣು ನೀರಿನ ಕೊಳವಾಯ್ತು ಮಂಕಾದೆ. ಯಾಕೆ ಹೀಗೆ ಮೋಡದಲಿ ತೇಲಿ ತೇಲಿ ಬಂದೆ ಬರ್‍ರನೆ ಮಳೆ ಸುರಿಸಿ ಮನೆ ಮಠ ಮನಸ್ಸನ್ನೆಲ್ಲಾ ರಾಡಿ ನೆನಪಿನ ಊಟೆಗಳಿದ್ದವು ನನ್ನಲಿ. ಗಾಳಿ ಮಳೆ ಚಳಿ...

ಮರಗಳೆಲೆಗಳ ನಡುವೆ ತೂರಿ, ಅಲೆಗಳ ಮೇಲೆ ಬೆಳ್ಳಿಯೆರಕವ ಹೊಯ್ದ ಚಂದಿರನ ಬೆಳಕಿನಲಿ ತೊರೆಯ ಹೃದಯವು ಅರಳಿ, ಚಿಮ್ಮಿ, ಕುಣಿಯುವಹಾಗೆ ಮನಸು ಕುಣಿಯುತಲಿಹುದು ನಿನ್ನ ನುಡಿ ನನಸಿನಲಿ ನಾ ಮುಂದೆ ಸಾಗುತಿರೆ! ಹಿಗ್ಗಿನಲಿ ಕುಣಿಯುತ್ತ, ನಿನ್ನ ಕಂಡೊಡನೆನ್ನ...

ಎಲ್ಲಾದರೂ ಇರು ಎಂತಾದರೂ ಇರು ನೀ ಎಂದೆಂದಿಗೂ ಭಾರತೀಯನಾಗಿರು ಭಾರತೀಯತೆ ಸತ್ಯ ಭಾರತೀಯತೆ ನಿತ್ಯ ಭಾರತಾಂಬೆ ಓ ಮುದ್ದಿನ ಮಗು ಭಾರತೀಯತೆ ನಿನ್ನಲ್ಲಿದರೆ ಭಾರತಾಂಬೆಯ ಹೆಮ್ಮಯ ಪುತ್ರ ಭಾರತಾಂಬೆಗೆ ನೀ ಕಲ್ಪತರು ನೀ ನಡೆದಾಡುವ ನೆಲವೆಲ್ಲ ಭಾರತೀಯತೆ ...

ಎಲ್ಲಿ ಹೋದಳು ಕತೀಜ, ನನ್ನ ಮಗಳು ಮೀನು ತರುತ್ತೇನೆಂದು ಹೋದವಳು ಬೇಗನೆ ಬರುವೆ ಎಂದವಳು? ಸಂಜೆಯಾಯಿತು ಕೊನೆಯ ಬಸ್ಸೂ ಹೊರಟು ಹೋಯಿತು ಏನು ನೋಡುತ್ತ ನಿಂತಳೊ ಏನೊ- ಸಂತೆಯ ದೀಪಗಳಲ್ಲಿ ಹೊಳೆಯುವ ಬಣ್ಣದ ಲಂಗ ಪೇಟೆಯವರು ಹಾಕುವಂಥ ಚಪ್ಪಲಿ ಹೊಸ ನಮೂನೆ...

ಚಳಿ ಎನ್ನುವ ಹುಳಿಗೆ ಪ್ರೇಮ ಕನಸಿನ ಉಪ್ಪು ಹಚ್ಚಿ ಮೆದ್ದಾಗ ಚಿಮ್ಮುವ ನೀರಿನಂತೆ ಮೈ ನಿಮಿರುವ ನಿನ್ನ ಮಾತು ರಗ್ಗಿನೊಳಗೆ ಕಾವೇರಿಸುವದು. *****...

ಅಷ್ಟಾವಕ್ರ ರೂಪ ಯಾರೋ ಇತ್ತ ಶಾಪ ತನ್ನಿರುವಿಕೆಗೆ ಮಳೆರಾಯನ ಸಾಕ್ಷಿಗೆ ಕರೆಕರೆದು ಅರ್ಥವಿಲ್ಲದ್ದೇ ವಟಗುಟ್ಟಿ ಪಾಪ ಗಂಟಲೇ ಬರಿದು! ಎದೆಯಾಳದ ಮಾತು ಹೇಗೆ ಹೇಳುವುದು? ಆದರೂ ಯಾರಿಗೇನು ಕಡಿಮೆ? ಅಲ್ಪವೇ? ಉಭಯಚರವೆಂಬ ಹಿರಿಮೆ? ಭೂಮಿಯಲೇ ಇದ್ದರೂ ನೀ...

ಹೇಳಿ ಕೇಳಿ ನಾನು ಒಬ್ಬ ಕವಿ ಹೊಗಳಿಕೆ ತೆಗಳಿಕೆಯ ವಿಮರ್ಶೆಗಳನ್ನು ಒಂದರಲ್ಲಿ ಕೇಳಿ ಇನ್ನೊಂದರಲ್ಲಿ ಬಿಟ್ಟು ಬಿಡುವುದಕ್ಕಾಗಿ ದೇವರು ನನಗೆ ಕೊಟ್ಟಿದ್ದಾನೆ ಎರಡು ಕಿವಿ. *****...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...