Home / Kannada Poetry

Browsing Tag: Kannada Poetry

ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ ಧಾವಿಸುತ್ತಿವೆ ನಮ್ಮ ಗಳಿಗೆಗಳು ಗುರಿ ಕಡೆಗೆ ; ಮುಂಚೆ ಸರಿದುದರ ಎಡೆದೊರೆತು ಹಿಂದಿನ ಕ್ಷಣಕೆ ಒಂದೆ ಸಮ ಸ್ಪರ್ಧೆಯಲಿ ಮುಂದೊಡುತಿವೆ ಜೊತೆಗೆ. ಕಣ್ತೆರೆದ ಬದುಕು ಬೆಳಕಿನ ಪಾತ್ರದಲಿ ಚಲಿಸಿ, ತೆವಳುತ್ತ ...

ಗಂಡ-ಹೆಂಡತಿ ಇಬ್ಬರೂ, ಬಿಡದೆ ಯಾವಾಗಲೂ ಒಟ್ಟೊಟ್ಟಿಗೆ ಸ್ಕೂಟರಲ್ಲಿ ಸುತ್ತುತ್ತಾರೆ. ಕಂಡವರಿಗೆ ಅಸೂಯೆ ತರುವಂತಹ ಅವರಿಬ್ಬರ ಒಗ್ಗಟ್ಟಿನ ಗುಟ್ಟು ಪರಸ್ಪರರ ಮೇಲಿನ ಅಪ ನಂಬಿಕೆ. ತಾನಿಲ್ಲದಾಗ ಗಂಡ- ಬೇರೆಯವಳನ್ನು ಕರೆದೊಯ್ಯ ಬಹುದೆಂಬ ಹೆದರಿಕೆ ಹೆಂ...

ಅದು ಸಮಯ ಇದು ಸಮಯ ಕನಸುಮಯ ಈ ಸಮಯ ಎಬ್ಬಿಸಬೇಡಿ ಇದು ಹಗಲು ಸಮಯ ಇದು ಇರುಳು ಸಮಯ ಹಗಲಿರುಳ ನಡುವೆ ಸಂಧ್ಯೆ ಸಮಯ ಇದು ಮಳೆಯ ಸಮಯ ಇದು ಬಿಸಿಲ ಸಮಯ ಮಳೆ ಬಿಸಿಲ ಮಧ್ಯೆ ಚಳಿ ಸಮಯ ಇದು ಮೊಗ್ಗು ಸಮಯ ಇದು ಮುಗುಳು ಸಮಯ ಮೊಗ್ಗು ಮುಗುಳ ನಡುವೆ ಭ್ರಮರ ಸಮ...

ನನ್ನನ್ನು ಮೊದಲು ನಿನ್ನ ಗುಲಾಮನಾಗಿಸಿದ ದೈವ ನನಗೊಂದು ಕಟ್ಟಳೆಯನ್ನು ವಿಧಿಸಿತು, ನಿನ್ನ ಪ್ರಿಯ ಸುಖ ಸಮಯದಲ್ಲಿ ತಲೆಹಾಕದೆ ನೀನೆ ಕರೆಸುವ ತನಕ ತೆಪ್ಪನಿರು ಎಂದಿತು. ನಾನು ಸೇವಕ ತಾನೆ ? ಒಡೆಯ ವಿಧಿಸಿದ ವಿರಹ- ಕಾರಾಗೃಹದ ವಾಸ ಒಪ್ಪಿ ಬಾಳುತ್ತೇನ...

ಗಟ್ಟಿ ಮೇಳ ಗಟ್ಟಿ ಮೇಳ ಎಂದು ಪುರೋಹಿತರು ತೋರು ಬೆರಳೆತ್ತಿ ಆಡಿಸತೊಡಗಿದಾಗ, ವಾದ್ಯಗಳು ಮೊಳಗಿ ತಾರಸ್ಥಾಯಿಯಲ್ಲಿ- ಅಗ್ನಿ ದೇವ ಪ್ರಜ್ವಲಿಸಿ, ಮಂತ್ರ ಘೋಷಗಳ ಭೋರ್ಗರೆತದಲ್ಲಿ ನೂರಾರು ಮನಗಳು ಹರಸಿ, ಕೈಯೆತ್ತಿ ಸಾವಿರಾರು ಅಕ್ಷತೆ ಕಾಳಿನ ಹೂಮಳೆ ಸ...

ಆರುಣಿಯ ನೋಡಿದಿರಾ ನಮ್ಮ ಮುದ್ದು ಆರುಣಿಯ ಗುರುಗಳ ನೆಚ್ಚಿನ ಮೆಚ್ಚಿನ ಆರುಣಿ ಗುರುಪತ್ನಿಯ ಅತಿ ಪ್ರೀತಿಯ ಆರುಣಿ ಗುರುಧಾಮದ ಕಣ್ಮಣಿ ಆರುಣಿ ಹಸುಗಳ ಮೇಯಿಸುವ ಆರುಣಿ ಹೂಗಳ ಹೆಕ್ಕುವ ಆರುಣಿ ವೇದಗಳನೋದುವ ಆರುಣಿ ಸೌದೆಯನೊಡೆಯುವ ಆರುಣಿ ಮೊದಲು ಮಾತಾ...

ಎಷ್ಟೊಂದು ಸುಲಭ ಇದು ಸುಳ್ಳು ಹೇಳುವುದು ನಾನೇ ನಿನ್ನನ್ನು ಕರೆದು ನೀನೇ ಕರೆದೆ ಎನ್ನುವುದು. ಆಸೆ ತುಂಬಿಟ್ಟುಕೊಂಡು ಏನೂ ಬೇಡ ಎನ್ನುವುದು ಹಸಿವೆಗೆ ಬೇಯುತ್ತಾ ಉಂಡಂತೆ ನಟಿಸುವುದು, ಕೊನೆಗೆ ದಾಹವಾದರೂ ಉಗುಳು ನುಂಗುವುದು ಈ ಸುಳ್ಳು ನಿಷ್ಪಾಪಿ ನ...

ಎಷ್ಟಾದರೂ ನಾನು ನಿನ್ನ ಗುಲಾಮ ತಾನೆ ? ಕಾಯುವೆನು ನಿನ್ನ ಬಿಡುವಿಗೆ, ನಿನ್ನ ಇಚ್ಛೆಗೆ; ನನ್ನ ಕಾಲ ಅಮೂಲ್ಯವೇನಲ್ಲ ಪ್ರಭು, ನೀನೆ ಕಾರ್ಯವೊಂದನು ನನಗೆ ಆದೇಶಿಸುವವರೆಗೆ. ನಿನಗಾಗಿ ಕಾಯುತ್ತೆ ಗಡಿಯಾರ ನೋಡುತ್ತ ಕೊನೆಯಿರದ – ಗಂಟೆ –...

ನೀನು ದಯಾಮಯ ಕರುಣಾಸಾಗರ ಕ್ಷಮಾಗುಣ ಸಂಪನ್ನ, ನಾನು ನಿನ್ನ ಶರಣ ಚರಣದಾಸ, ನಿನ್ನಂತೆಯೇ ಕ್ಷಮಯಾಧರಿತ್ರಿ. ನೀ ನನಗೆ. ಕೊಟ್ಟ ಸುಖಕೆ ನಿನ್ನ ದಯೆ ಎಂದು ವೆಂದಿಸಿದೆ. ನೀ ಕೊಟ್ಟ ಕಷ್ಟ ಕೋಟಲೆಗೆ ನಿನ್ನ ದೂರದೆ ಕರ್ಮ ನನ್ನದೆಂದು ನಿಂದಿಸಿ ನನ್ನನೇ ನಿ...

ಆಡಿಸು ನನ್ನ ಜಾಡಿಸು ನನ್ನ ಒದ್ದಾಡಿಸು ನೀ ನನ್ನ ಜಾಲಾಡಿಸು ಕೊಳಕನ್ನ ಓ ಜಲಗಾರ ಬೇಯಿಸು ನನ್ನ ಕಾಯಿಸು ನನ್ನ ಕುದಿಯಿಸು ನೀ ನನ್ನ ಬೇರಾಗಿಸು ಎಲ್ಲಾ ಕಶ್ಮಲವನ್ನ ಓ ಮಡಿವಾಳ ಒಣಗಿಸು ನನ್ನ ಒಡೆಯಿಸು ನನ್ನ ಉರಿಯಿಸು ನೀ ನನ್ನ ತೆಗೆ ನನ್ನಿಂದಲು ತುಸ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...