Home / Kannada Poetry

Browsing Tag: Kannada Poetry

ಗೆದ್ದವಳು ನೀನು ಲಿಂಗಮುಖದಿಂದ ಮನದೊಳು ಭಾವ ಲಿಂಗವ ಅರಳಿಸಿ ಉಡುತಡಿಯಿಂದ ಕದಳಿಯವರೆಗೆ ಹರಡಿ ಹಾಸಿದ ಜ್ಞಾನ ಬೆಳದಿಂಗಳು ಧರೆಯಲ್ಲಾ ಪಸರಿಸಿ ಶರಣಸತಿ ನೀನು. ಜಗ ನಂಬಿದ ಲಿಂಗದ ಘನವ ನಿಮ್ಮ ನೆರೆ ನಂಬಿದ ಸದ್ಭಕ್ತರಿಗೆ ತೋರಿ ಉಭಯ ಸಂಗವ ಅರಿಯದೆ ಪರಿ...

ಅಗ್ನಿರಾಜ: ಬೆಂಕಿ ನಿಲುವಂಗಿ ತೊಟ್ಟುಕೊಂಡು ಬುವಿಯಿಂದ ಬಂದ ಜೀವ ಸಪ್ತಸ್ವರ್‍ಗಗಳ ಸುಪ್ತ ಮೌನವನು ದಾಟಿಕೊಂಡು ಯಾವ? ನೀನು ಏನು ಅಧ್ಯಾತ್ಮದೌರಸನೊ? ಅಭವ ಸ್ವಯಂಭವನು. ಪರಂಧಾಮದಾ ಅತಿಥಿಯೇನು? ಪೌರಾಣ ಕಾಲದವನು. ಮನುಕುಲ ದೂತ: ಮಾನವ್ಯಕುಲದ ಹರಿಕಾರ...

ಪ್ರೀತಿಸುವವರ ಕಂಡು ಮೃಗಗಳಾಗ ಬೇಡಿ| ಪ್ರೇಮಿಗಳ ಹೃದಯ ನೋಯಿಸಬೇಡಿ| ನಿಮಗೂ ಹೃದಯವಿದೆ ಎಂದು ತಿಳಿದು ಪ್ರೀತಿಸುತಿರುವೆವು ನಾವು|| ಲೋಕದ ಅಂತರಗಳ ಅರಿಯದೆ ಪ್ರೀತಿಸುವೆವು ನಾವು| ಸಮಾನ ಹೃದಯಿಗಳಾದ ನಾವು ಜಗದ ಅಹಂ ಅಂತಸ್ತುಗಳ ಅರಿಯೆವು| ನಮ್ಮ ಅಂತ...

ಸೌಂದರ್‍ಯಸರಸಿಯೊಳು ಕವನೀಯ ಸುಕುಮಾರ ಸಿರಿರಾಜಹಂಸವಾಗಿ ಇಂದು ಮೂಜಗ ಮೀರಿ ಅವರ ಗದ್ದುಗೆ ಏರಿ ಆಳ್ವ ಅಧಿಕಾರಿಯಾಗಿ ಋತುರಾಜ ನವತರುಣ ಮಧುವನದ ಅಭಿರಾಮ ಮೃದು ಮಂದವಾಯುವಾಗಿ ಅತಿರೂಪಲಾವಣ್ಯ ಅರೆದೆರೆದು ಬಿರಿಬಿರಿದ ಅರಳು ಹೂದುಂಬಿಯಾಗಿ ಸುರಗಂಗೆ ತೆರ...

ಮಾತುಮಾತಿಗೆ ಸಿಟ್ಟುಮಾಡಿದಿರಿ ಪಾತ್ರೆ ಪಗಡೆಗಳ ಒಡೆದುಹಾಕಿದಿರಿ ಕಂಡಕಂಡವರಿಗೆ ಕೆಂಡವಾದಿರಿ ಸಿಟ್ಟು ನಾಶಕೆ ಮೂಲವೆಂದ ನಮ್ಮ ಬುದ್ಧನ ಕೇಳಿದಿರ ಅದು ಬೇಕು ಇದು ಬೇಕು ಎಲ್ಲ ಬೇಕೆಂದಿರಿ ಎಷ್ಟು ದೊರಕಿದರು ಇನ್ನಷ್ಟು ಬೇಕೆಂದಿರಿ ಸಾಕೆಂಬ ಪದವನ್ನೆ ...

ನನಗೆ ಇಬ್ಬರು ಮಕ್ಕಳು ಒಬ್ಬ ಈಶ್ವರ ಒಬ್ಬ ಅಲ್ಲಾ ಎಲ್ಲಿರುವೆಯೋ ಕಂದಾ? ಇಲ್ಲಮ್ಮಾ ಕಾಬಾದಲ್ಲಿ ಕಲ್ಲಾಗಿ…. ಕಲ್ಲಾಗಿ ?! ಕಲ್ಲಾಗಿಯೇ ಇರದಿರು ಕಂದಾ ಸದಾ ಓಗೊಡು ಕರುಳ ಕರೆಗೆ; ಕರಗು ಅಷ್ಟಿಷ್ಟು ಕಂಗೆಟ್ಟವರ ಕಣ್ಣೀರೊರೆಸು ದರವೇಶಿಗಳಿಗೆ ದಿ...

ನಮ್ಮ ಊರಿನ ಅಕ್ಕರೆಯ ಸಕ್ಕರೆ ಗೊಂಬೆ ಕಾಂಕ್ರೀಟ್ ಕಾಡು ಬೆಂಗಳೂರು ಸೇರುತಿಹಳು ಮಲೆನಾಡು ಮೈಸಿರಿ ಉದ್ಯಮಿಯೊಬ್ಬನ ಕೈಹಿಡಿಯುತಿಹಳು ಇಲ್ಲಿನ ನಯ ವಿನಯಗಳ ಬಿತ್ತಲಲ್ಲಿಗೆ ನಡೆಯುತಿಹಳು ಪ್ರೀತಿಯ ಸಿಂಚನ ನೀಡುವಳು ಅಲ್ಲಿನ ಮರ ಗಿಡ ಬಳ್ಳಿಗಳಿಗೆ ನಮ್ಮೂ...

ನಾನಳಿದ ಮೇಲೆಯೂ ನನ್ನ ಪ್ರೀತಿಸಲಿಕ್ಕೆ ಅಂಥ ಘನವಾದುದೇನಿತ್ತು ನನ್ನಲ್ಲೆಂದು ಜಗ್ಗಿ ಕೇಳದೆ ಲೋಕ ನಿನ್ನನ್ನು ಮುಂದಕ್ಕೆ? ಅದಕೆಂದೆ ನನ್ನನ್ನು ಮರೆತುಬಿಡು ನೀ ಎಂದು ಕೇಳುತ್ತಿರುವೆ; ಅಂಥ ಗುಣವೊಂದ ನನ್ನಲ್ಲಿ ಸುಳ್ಳು ಹೇಳದೆ ಹೇಗೆ ತಾನೆ ತೋರಿಸಬಲ...

ಸುಳಿಯದಿರು ಸಂಶಯವೆ ನನ್ನವರ ಸನಿಹದಲಿ ಬೆರಸದಿರು ವಿಷವನ್ನು ಅನ್ನದಲ್ಲಿ ಬಾಳನಂದನ ವನವ ತುಳಿದು ತೊತ್ತಳಗೈದು ತುತ್ತದಿರು ಇದನಿನ್ನ ಒಡಲಿನಲ್ಲಿ ನಿನ್ನ ರಾಕ್ಷಸ ಕೃತ್ಯ ವಿಷಮತೆಗೆ ಮೊದಲಹುದು ದೂರಸರಿ ಸುಳಿಯುವುದೆ ನೀನು ಇಲ್ಲಿ? ವಿಶ್ವಾಸವೆಂಬುವದು...

ಬೆಳ್ಳಕ್ಕಿ ಹಿಂಡು ಸೂರ್‍ಯ ಕಂತುವ ಸಮಯದಲ್ಲಿ ನೆತ್ತಿ ಸವರಿ ಹಾರಿವೆ ಅವನ ನೆನಪಲ್ಲಿ ವಿಶಾದದ ಮಬ್ಬು ಆವರಿಸಿದೆ ದೇವರ ಮನೆಯಲ್ಲಿ ನಂದಾದೀಪ ಉರಿದಿದೆ. ಮರಗಳ ಮೌನಗೀತೆಯನ್ನು ಹಕ್ಕಿಗಳು ಗೂಡಿನಲ್ಲಿ ಜಪಿಸಿವೆ ಮತ್ತೆ ಪ್ರೀತಿಯ ಪಾರಿಜಾತ ಅವನ ಒಲುಮೆಯ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...