ತಿದ್ದುವುದೆಂದರೆ ಸುಮ್ಮನೆ?
ತಿದ್ದಲೇ ಬೇಕಿದೆ ಈಗ ಅಕ್ಷರ
ಮಗ್ಗಿ ಬಿಟ್ಟು ಕಂಡ ಕಂಡ
ವರನ್ನು ಆಗೀಗ ಎದುರಾಗು
ವವರನ್ನು ಹೇಳದೇ ಮಾಡು
ವವರನ್ನು ಹೇಳಿಯೂ ಮಾಡದವರನ್ನು
ಬೆಲೆ ತಿಳಿಯದವರನ್ನು
ತಿಳಿದೂ ಬಿಸುಟವರನ್ನು
ಆತು ಹತ್ತಿರ ಬಂದವರನ್ನು
ಓತು ದೂರ ಸರಿದವರನ್ನು
ಒಟ್ಟಿನಲ್ಲಿ ಅವರಿವರೆನ್ನದೇ
ಎಲ್ಲರನ್ನು.
*****