ಪರಮ ಸುಖ

ಬಂಧನವು ಬಿಗಿದಿರಲಿ ಮಂದಿ ಹುಯ್ಲೆಬ್ಬಿಸಲಿ ರಾಮ ರಾವಣ ಯುದ್ಧ ನಡೆಯುತಿರಲಿ ಮರ್ಮಗಳು ಅಡಗಿರಲಿ ಕರ್ಮಗಳ ಕಾದಿರಲಿ ಬ್ರಹ್ಮನಿಯಮದ ಸೂತ್ರವಾಡುತಿರಲಿ ಅಕ್ಕರೆಯ ಕರೆ ಬರಲಿ ಉಕ್ಕಿರಲಿ ಆನಂದ ದಿಕ್ಕುದಿಕ್ಕಿಗು ಡಮರು ಮೊಳಗುತಿರಲಿ ಬಾಸಿಗವು ಕಟ್ಟಿರಲಿ ಬಾಜಿಸಲಿ...

ಜೇನು ನಾವು – ನೋವು ನಾವು…

ಜೇನು ನಾವು ನೋವು ನಾವು ಕೈಗೆ ಸಿಕ್ಕರೆ ಒಸಗಿ ಹಾಕುವಿರೆಂಬಾ ಶಂಕೆ! ಊದಿದಾ ಶಂಕು ಊದೂತ್ತಾ ಗಿಳಿ ಪಾಠ ಒಪ್ಪಿಸುತ್ತಾ ನಿತ್ಯ ಜಿಗಿ, ಜಿಗಿದು, ಕುಣಿ, ಕುಣಿದು, ಹಾರುತ್ತಾ ಏಳು ಕೆರೆ, ನೀರು ಕುಡಿದು...

ಮೌನ

ಇಲ್ಲಿಯ ತನಕಾ ಬಂದಿಹೆನು ಸುಳಿವೇ ಕಾಣದೆ ನಿಂದಿಹೆನು ತೋರದೆ ಮೌನವ ಧರಿಸಿಹೆನು ಮೀರಿತು ಸಹನದ ಗುಣವಿನ್ನು ನಿನ್ನನು ಕಲೆಯಲು ಕಾದಿಹೆನು ಒಳ ಒಳಗಿದ್ದೂ ಮರೆ ಏನು ಆರಿಸು ಬರುತಿಹ ತೆರೆಗಳನು ಸೇರಿಸು ಗಮ್ಯಸ್ಥಾನವನು ಮತಗಳ...

ರಾತ್ರಿಯ ತಣ್ಣನೆ ತೋಳಿನಲಿ

ರಾತ್ರಿಯ ತಣ್ಣನೆ ತೋಳಿನಲಿ ಮಲಗಿರೆ ಲೋಕವೆ ಮೌನದಲಿ ಯಾರೋ ಬಂದು, ಹೊಸಿಲಲಿ ನಿಂದು ಸಣ್ಣಗೆ ಕೊಳಲಿನ ದನಿಯಲ್ಲಿ ಕರೆದರಂತಲ್ಲೆ ಹೆಸರನ್ನು ಕರೆದವರಾರೇ ನನ್ನನ್ನು? ಬೇಗೆಗಳೆಲ್ಲಾ ಆರಿರಲು ಗಾಳಿಯು ಒಯ್ಯನೆ ಸಾಗಿರಲು ಒಳಗೂ ಹೊರಗೂ ಹುಣ್ಣಿಮೆ...

ಕುಲ

ಕುಲವು ಕುಲವು ಕುಲವು ಎಂದು ಹಾರುತಿರುವೆಯಾ? ಸುಳ್ಳೆ ಸುಳ್ಳೆ ವೇಷಗಳನು ತೋರುತಿರುವೆಯಾ? ಎಲ್ಲಿ ಬಂತು ಕುಲವು ತನ್ನ ರೂಪವಾವುದು? ಓಳ್ಳೆ ಮನಸು ಇಲ್ಲದಿರಲು ಕುಲವು ಕಾಯದು ಮಡಿಯನುಟ್ಟು ವ್ರತವ ಮಾಡಿ ಪೂಜೆಗೈದೊಡೆ ಬಿಡುವುದೇನು ದುರಿತ...

ಹೆಣ್ಣು…

ಎಲ್ಲೋ ಹುಟ್ಟಿ ನೆಲವ ಮೆಟ್ಟಿ ಈ ಜಗವ ತಲ್ಲಣಿಸಿದ ದಿಟ್ಟೆ * ಪುಟ್ಟ ಹುಡುಗಿ ಕಣ್ಣು ಬಿಟ್ಟ ಬೆಡಗಿ ಇಲ್ಲಿ ಹೊಂದಿಕೊಂಡ ಪರಿಗೆ ಬೆಕ್ಕಸ ಬೆರಗು. * ಗಂಡು ಹೆಣ್ಣು ಜಗದ ಕಣ್ಣು ಇಲ್ಲಿ...

ಭಾವನಾ ಪ್ರಪಂಚ

ಭಾವನಾ ಪ್ರಪಂಚದೊಳಗೆ ತೇಲಿ ನಲಿವುದೇ ಸುಖ ಕೋವಿದರನು ಕಮಡು ತಿಳಿದು ಸುಮ್ಮನಿರುವುದೇ ಸುಖ ಬೇಕು ಎಂಬ ಮಾತು ಬಿಟ್ಟು ಬೇಡವೆಂಬುದೇ ಸುಖ ಲೋಕದಾಟವೆಲ್ಲ ನೋಡಿ ನಗುತಲಿರುವುದೇ ಸುಖ ಉತ್ತಮರೊಳು ಸೇರಿ ಕಾಲ ಕಳೆದುಕೊಂಬುದೇ ಸುಖ...

ಯಾರು ಸೃಷ್ಟಿಯ ಹೀಗೆ ಹೂಡಿದವನು?

ಯಾರು ಸೃಷ್ಟಿಯ ಹೀಗೆ ಹೂಡಿದವನು ಅದರ ನಡಿಗೆಗೆ ತಾಳ ನೀಡಿದವನು? ಯಾರು ದೇಹದಿ ಜೀವ ಇರಿಸಿದವನು ಜೀವದಲಿ ಭಾವವ ಮೊಳೆಸಿದವನು ನೊಂದರೂ ಮಾಯುವ ಕನಸನ್ನು ನೇಯುವ ಸತ್ವವನು ಮನಸಿನಲಿ ಬೆಳೆಸಿದವನು? ನಿದ್ದೆಯಲು ನಮ್ಮನ್ನು ಕಾಯುವವನು...