ಬಂಧನವು ಬಿಗಿದಿರಲಿ
ಮಂದಿ ಹುಯ್ಲೆಬ್ಬಿಸಲಿ
ರಾಮ ರಾವಣ ಯುದ್ಧ ನಡೆಯುತಿರಲಿ

ಮರ್ಮಗಳು ಅಡಗಿರಲಿ
ಕರ್ಮಗಳ ಕಾದಿರಲಿ
ಬ್ರಹ್ಮನಿಯಮದ ಸೂತ್ರವಾಡುತಿರಲಿ

ಅಕ್ಕರೆಯ ಕರೆ ಬರಲಿ
ಉಕ್ಕಿರಲಿ ಆನಂದ
ದಿಕ್ಕುದಿಕ್ಕಿಗು ಡಮರು ಮೊಳಗುತಿರಲಿ

ಬಾಸಿಗವು ಕಟ್ಟಿರಲಿ
ಬಾಜಿಸಲಿ ಭೇರಿ ಮೃದು
ಮಸಣಯಾತ್ರೆಯು ಮಧ್ಯ ಸಾಗುತಿರಲಿ

ಆ ಶಿವನ ಲೀಲೆಗಳ-
ನಾ ಶಿವನಿಗರ್ಪಿಸುತ
ನಲಿವುದೇ ಜನಕಜೆಗೆ ಪರಮಸುಖವು
*****

Latest posts by ಜನಕಜೆ (see all)