ಎಲ್ಲೋ ಹುಟ್ಟಿ
ನೆಲವ ಮೆಟ್ಟಿ
ಈ ಜಗವ ತಲ್ಲಣಿಸಿದ ದಿಟ್ಟೆ
*

ಪುಟ್ಟ ಹುಡುಗಿ
ಕಣ್ಣು ಬಿಟ್ಟ ಬೆಡಗಿ
ಇಲ್ಲಿ ಹೊಂದಿಕೊಂಡ ಪರಿಗೆ
ಬೆಕ್ಕಸ ಬೆರಗು.
*

ಗಂಡು ಹೆಣ್ಣು
ಜಗದ ಕಣ್ಣು
ಇಲ್ಲಿ ಹೇಗೋ ಏಗಿಕೊಂಡು
ಜೀವಕೆ ಜೀವ ಕೊಟ್ಟುಕೊಂಡು
ಜಗದ ಸೃಷ್ಟಿಗೆ ಕಾರಣ!
*

ಹೆಣ್ಣು ಮಾಯೆಯಲ್ಲ ಶಕ್ತಿಯು
ಕಂಡ ಕಂಡವರ, ಬೆನ್ನ ಚಪ್ಪರಿಸಿ…
ಹೆಜ್ಜೆ ಹೆಜ್ಜೆಗೆ, ಬೆವರ ಹರಿಸಿ…
ಬಾಳ ಬಂಡಿ, ಎಳೆವ ಸಾರಥಿ.
*

ಜಗವ ತಿದ್ದಿ
ಬುದ್ಧಿ ಕಲಿಸಿದ ಸಿದ್ಧಿ!
ಮೊದಲ ಗುರು
ಮನೆ ವಾಳ್ತೆ
ಕತ್ತಲ ಕಳೆವ ದೀಪ ವಂಶಿ.
*

ಜೀವ ಜಗಕೆ, ಸಂಜೀವಿನಿ
ಒಡಲು ಕಡಲಾಗಿ
ಪ್ರೀತಿ ಮಡಿಲಾಗಿ
ವರ್ಷ ವರ್ಷ
ಹರ್ಷ ತುಂಬುವ
ಕಷ್ಟ ಪರಾಯಿಣೆ.
*

ಹೆಣ್ಣು… ಹೆಣ್ಣು ಜಗದ ಕಣ್ಣು
ಹೊನ್ನು, ಮಣ್ಣು, ಹಣ್ಣು… ಹೆಣ್ಣೇ.
ಜಗವನುಳಿಸಿ,
ಜಗನ್ನಾಥನಾಡಿಸಿ,
ಹನ್ನೆರೆಡು ಅವತಾರಿ-
ಮಹಿಷಾಸುರನ ಕೊಂದ-
ಚಂಡಿ ಚಾಮುಂಡಿ!!
*

ಹೆಣ್ಣಿಲ್ಲದ ಕಣ್ಣಿಲ್ಲವೋ ಅಣ್ಣಾ…
ಕೇಳಿಲ್ಲವೇ ತ್ರಿಮೂರ್ತಿಗಳ ಬಣ್ಣಾ…
ಬಾಲಬಸವರ ಬಣ್ಣಾ…
ಭಸ್ಮಾಸುರನ ಕೊಂದು
ಯಮನ ಗೆದ್ದು
ರಾವಣನ ಕೊಬ್ಬಿಳಿಸಿದ
ಈ ಬೆಳ್ಮುಗಿಲು ಹೆಣ್ಣು.
*****

Latest posts by ಡಾ || ಯಲ್ಲಪ್ಪ ಕೆ ಕೆ ಪುರ (see all)