ವಾಗ್ದೇವಿ – ೧೯

ವಾಗ್ದೇವಿ – ೧೯

ನೃಸಿಂಹಪುರ ಮಠದ ಪಾರುಪತ್ಯಗಾರ ರಾಧಾಕೃಷ್ಣಾಚಾರ್ಯನ ಬುದ್ಧಿವಂತಿಗೆಯು ಸಾಮಾನ್ಯವಲ್ಲ. ದೊಡ್ಡ ಕಾರ್ಯಗಳಲ್ಲಿ ಜಯಸಿಕ್ಳುವಂತೆ ವೈನಂಗಳನ್ನು ಮಾಡುವ ಸಾಮರ್ಥ್ಯ್ಯವುಳ್ಳವನು. ಮತ್ತು ಸಿಟ್ಟಿನ ವಶವಾಗದೆ ಎಂಥಾ ಮೂರ್ಖನಿಗಾದರೂ ಅನುನಯಯುಕ್ತವಾದ ವಾಕ್‌ಚಾತುರ್ಯ ದಿಂದ ತನ್ನ ಪಕ್ಷಕ್ಕೆ ಆಕರ್ಷಿಸಿಕೊಂಡು, ಅವನಿಂದ ಸಿಕ್ಕುವಷ್ಟು ಪ್ರಯೋಜನ ವನ್ನು ದೊರಕಿಸಿಕೊಳ್ಳುವ ಮತಿವಂತಪುರುಷನೇ ಸರಿ.

ಕ್ಷತ್ರಿಯಪುರ ಮಠದ ಪಾರುಪತ್ಯಗಾರ ಸೂರ್ಯನಾರಾಯಣಾ ಚಾರ್ಯನು ಬಹುಸಾಧು. ಒಳ್ಳೇ ಭೋಜನದ ಅಭಿರುಚಿಯಿರುವವನೂ ನಿಷ್ಠಾವಂತನೂ ಖರೆ. ಆದರೆ ಎತ್ತಿದವರ ಕೂಸೆಂಬ ಗಾದೆಯಂತೆ ಯಾರೇನು ಹೇಳಿದರೂ ಹೌದೆನ್ನುವವನೇ.

ವರ್ತಕಪುರ ಮಠದ ಪಾರುಪತ್ಯಗಾರ ವೆಂಕಟಿರಾಮಾಚಾರ್ಯನು ಜ್ಞಾನಿಯೂ ವೈರಾಗ್ಯಪರನೂ ನೀತಿಶೀಲನೂ ಪರಾಪೇಕ್ಷೆಯಿಲ್ಲದವನೂ ಹೌದು. ಪರಂತು ಮಿತಿಮೀರಿದ ಆಲಸ್ಯವುಳ್ಳವನು. ಸ್ವಕಾರ್ಯದಲ್ಲಿಯೂ ಹಟಸಾಧನೆ ಮಾಡತಕ್ಕವನಲ್ಲ. ದೊಡ್ಡ ಐಶ್ವರ್ಯವಂತನಾದುದರಿಂದ ಯಾರ ಬಿಸಾತು ಮಾಡುವ ಅಗತ್ಯವು ಅವನಿಗೆ ಬೀಳುತ್ತಿದ್ದಿಲ್ಲ.

ಇನ್ನು ವರ್ಣಿಸಲಿಕ್ಕೆ ಉಳಿದ ಬಾಲಮುಕುಂದಾಚಾರ್ಯನು ಶಾಂತಿ ಪುರ ಮಠದ ಪಾರುಪತ್ಯಗಾರ. ಆ ಮರದ ಹೆಸರಿಗೆ ಹೋಲುವ ಶಾಂತಗುಣ ವುಳ್ಳ ಬಹುಸುಂದರ ಪುರುಷನು. ಮಾತಿನಲ್ಲಿ ದೊಡ್ಡ ಚಮತ್ಕಾರ ಉಳ್ಳವನು. ಕೋಪವು ಅವನಿಗೆ ಸರ್ವಥಾ ಸೋಕದು; ಖರ್ಚುಗಾರ, ಹಣದಲ್ಲಿ ಕಡಿಮೆ ಯವನಲ್ಲ. ಇವನ ಮುಖವನ್ನೀಕ್ಷಿಸಿದ ಮಾತ್ರದಲ್ಲಿ ಎಂಧಾ ಕಠಿಣ ಹೃದ ಯವೂ ದ್ರವಿಸುವದು; ಎಂಥಾ ಸಿಟ್ಟಿನವನೂ ಒಮ್ಮೆಗೆ ಶಾಂತನಾಗುವನು.

ವೇದವ್ಯಾಸನ ಪ್ರಕರಣವನ್ನು ಪ್ರಥಮ ವಿಮರ್ಶೆಮಾಡುವದಕ್ಕೋ ಸ್ಕರ ಮಠಾಧಿಪತಿಗಳಿಂದ ನೇಮಿಸೋಣಾದ ಆ ನಾಲ್ವರಲ್ಲಿ ಸಭಾನಾಯಕ ನಾಗುವದಕ್ಕೆ ಬಾಲಮುಕುಂದನೊಬ್ಬನೇ ಯೋಗ್ಯನೆಂದು ಅವರು ತಮ್ಮೊ ಳಗೆ ನಿಶ್ಚಯಿಸಿ ಅವನನ್ನು ಅಧ್ಯಕ್ಷನಾಗಿ ನೇಮಿಸಿದರು. ಬಾಲಮುಕುಂದನು ತನಗಷ್ಟು ದೊಡ್ಡ ಕರ್ತವ್ಯ ನಡಿಸುವಷ್ಟು.- ಯೋಗ್ಯತೆ ಇಲ್ಲವೆಂದು ಹೆಸರು ಪೂರ್ತಿ ಆಕ್ಷೇಸ ಮಾಡಿದರೂ ಕ್ರಮೇಣ ತನ್ನ ಸಹಕಾರಿಗಳ ಅಪೇಕ್ಷೆಯಂತೆ ಅಧ್ಯಕ್ಷನಾಗಲಿಕ್ಕೆ ಒಡಂಬಟ್ಟನು.

ಸಭಾಸದರು ಒಟ್ಟಿನಲ್ಲಿಯೇ ಊಟಪಾಟ ಮಾಡಿಕೊಂಡು, ಕುಮುದಪುರದ ಅಂಜನೇಯಾಲಯದ ಹೊರಪೌಳಿಯಲ್ಲಿ ಉಳಕೊಂಡರು. ವೇದವ್ಯಾಸ ಉಪಾಧ್ಯನ ಪಕ್ಷಕ್ಕೆ ಸೇರಿದ ಭೀಮಾಚಾರ್ಯಗೂ ಬಾಲಮುಕುಂದಾಚಾ ರ್ಯಗೂ ಪರಸ್ಪರ ಸ್ನೇಹ ಮೊದಲೇ ಬಿದ್ದ ದೆಸೆಯಿಂದ ಅವರಿಬ್ಬರೂ ಒಂದೇ ಬಿಡಾರದಲ್ಲಿ ಉಳುಕೊಳ್ಳುವದಕ್ಕೆ ಆಸ್ಪದವಾಯಿತು. ಈ ಸಂಬಂಧ ವೇದ ವ್ಯಾಸಗೆ ಅಸಂತೋಷವಾಗಲಿಲ್ಲ. ಭೀಮಾಚಾರ್ಯನನ್ನು ತನ್ನ ಮನೆಯಲ್ಲಿ ರಿಸಿಕೊಂಡು, ಒಳ್ಳೇ ಊಟ ಹಾಕಬೇಕಾಗುವ ಅನಿವಾರ್ಯ ನಿವಾರಣೆ ಯಾದ ಹಾಗಾಯಿತಲ್ಲವೇ? ಬಾಯಿಯಿಂದ ಮಾತ್ರ ಬಡವನ ಮನೆಗೆ ತಮ್ಮ ಚರಣಗಳ ಮುದ್ರೆ ತಗಲುವದುಂಟೇ ಎಂಬ ಅಸಮಾಧಾನ ಸೂಚಕವಾಕ್ಕ ಗಳನ್ನು ಉಚ್ಚರಿಸಿದನು. ಭೀಮಾಚಾರ್ಯನಿಗೆ ಅಂಜನೇಯಾಲಯದಲ್ಲಿ ಮಠದವರ ಕಡೆಯಿಂದ ಸಿಕ್ಕುವ ಛಲೋ ಭೋಜನದ ಸುಖದಿಂದ ವೇದ ವ್ಯಾಸನ ಪ್ರಸಂಗವೇ ಮರೆತು ಹೋಯಿತು. ವಿನೋದರೂಪವಾಗಿ ಬಾಲ ಮುಕುಂದನು-“ಆಚಾರ್ಯರೇ, ತಮ್ಮಶಿಷ್ಯ ವೇದವ್ಯಾಸನೆಲ್ಲಿ?” ಎಂದು ಕೇಳ ದರೆ ದಂತಶೂನ್ಯನಾದ ಬಾಯಿಯನ್ನು ಪೂರಾ ತೆರೆಯದೆ, ಅರೆ ನಗೆಯಿಂದ “ಪರಾಶರಾತ್ಮಜಂ ವಂದೇ ಶುಕತಾಶತಂ ತಪೋನಿಧಿಂಗ ಎಂದು ಕೈಜೋಡಿಸಿ ಸುಮ್ಮಗಿರುವನು.

ಬಾಲಮುಕುಂದನಂತೆ ಬೇರೆ ಮಠಗಳ ಪ್ರತಿನಿಧಿಗಳಿಗೂ ಭೀಮಾಚಾ ರ್ಯನು ಅಚ್ಚುಮೆಚ್ಚಿನವನಾಗಿ ಅನರನ್ನಗಲದೆ ಆಪ್ತಭಾವವನ್ನು ಬೆಳಸಿದನು ಕುಮುದಪುರವು ವಸಂತ ನಗರದ ಪಟ್ಟಣಗಳಲ್ಲಿ ಆರೋಗ್ಯಕರವಾಗಿದ್ದು ಅತಿ ಸುಖದಾಯಕ ಪ್ರದೇಶವಾದ ಕಾರಣ ಪಾರುಪತ್ಯಗಾರರಿಲ್ಲರೂ ಪರಿವಾರ ಸಮೇತವಾಗಿ ಅಲ್ಲಿ ಹೆಚ್ಚುದಿವಸಗಳು ಉಳುಕೊಳ್ಳುವದಕ್ಕೆ ಇಚ್ಛಿತರಾದರು. ಭೀಮಾಚಾರ್ಯನು ಅವರ ಮನಸ್ಸಿಗೆ ರವಷ್ಟಾದರೂ ಕರಕರೆಯಾಗದಂತೆ ಆಗಾಗ್ಗೆ ತನ್ನ ನಾಲಿಗೆಯ ಚಮತ್ಕಾರದಿಂದ ಅವರಿಗೆ ಕರ್ಣೋಲ್ಲಾಸ ಮಾಡುತ್ತಾ, ಇನ್ನೊಂದು ಠಾವಿಗೆ ಯಾರಾದರೂ ಕರೆದರೂ ಹೋಗವಲ್ಲನು. “ದೊಡ್ಡ ಮನುಷ್ಯರ ಎಡೆಯಲ್ಲಿ ನಿಮಗೆ ಹ್ಯಾಗೆ ಪೂರೈಸುತ್ತದೆ, ಆಚಾರ್ಯರೇ! ಎಂದು ವೇದವ್ಯಾಸ ಉಪಾಧ್ಯನು ಅಪರೂಪವಾಗಿ ಕೇಳಿದರೆ- “ನೀಚಾರ್ರಯಂ ನಕರ್ತವ್ಯಂ, ಕರ್ತವ್ಯಂ ಮಹದಾತ್ರಯಂ” ಈ ವಚನ ಕೇಳರಿಯೆಯಾ ಎಂಬ ಉತ್ತರದಿಂದ ಅವನ ಬಾಯಿ ಮುಚ್ಚಿಸುವನು.

ತನ್ನ ಶೀಲವನ್ನು ಕುರಿತು ಪರಿಶೋಧನೆ ಮಾಡುವದಕ್ಕೋಸರ ಮಠಾಧಿಪತಿಗಳಿಂದ ನೇಮಿಸಲ್ಪಟ್ಟ ಪ್ರತಿನಿಧಿಗಳ ಸಭೆಯು ಯಾವಾಗ್ಗೆ ಕೂಡುವದೋ ತಿಳಿಯದೆಂದು ಚಂಚಲನೇತ್ರರು ಸ್ವಲ್ಪ ಚಿಂತೆಯಲ್ಲಿದ್ದ ಹಾಗೆ ಕಂಡು, ವೆಂಕಟಪತಿಯು ಅವಸರ ಒಳ್ಳೆದಲ್ಲವೆಂದನು. ಯತಿಗಳು ಆ ಮಾತಿಗೆ ಮೆಚ್ಚಿದರು. ಹ್ಯಾಗಾದರೂ, ಅವರು ತಮ್ಮ ಮಥಕ್ಕೆ ಬಂದು ಒಂದು ದಿವಸವಾದರೂ ತಮ್ಮನ್ನು ಕಾಣದೆ ಇದ್ದದ್ದು ಸ್ಪಲ್ಪ ಆರ್ಚರ್ಯವಲ್ಲವೋ? ಎಂದು ಚಂಚಲನೇತ್ರರು ಪ್ರಶ್ನೆಮಾಡಿದರು. ಅವರು ಮತಾಧಿಪತಿಗಳ ಪ್ರತಿ ನಿಧಿಗಳಾಗಿ ಬಂದಿರುವ ದೆಸೆಯಿಂದ ಮಠದ ಕಡೆಯಿಂದ ಮುಂದಾಗಿ ಅವ ರನ್ನು ಅಭಮಂತ್ರಣಮೂಲಕ ಕರಸಿಕೊಂಡ ವಿನಾ ಅವರ ಆಗಮನವನ್ನು ನಿರೀಕ್ಷಿಸುವದು ವ್ಯರ್ಥವೆಂದು ವೆಂಕಟಪತಿಯು ಕೊಟ್ಟ ಉತ್ತರವು ಮಾನ್ಯ ವಾಯಿತು. “ಹಾಗಾದರ ನಾಳೆ ಮಠದಲ್ಲಿ ನರಸಿಂಹಜಯಂತಿ ಆಚರಣೆ ಗದ್ದಲದಿಂದ ಆಗುವ ಹಾಗೆ ನೋಡಿಕೊಂಡು ಆಚಾರ್ಯರಿಗೆಲ್ಲಾ ಕರಿಸಿ ಕೊಳ್ಳುವ ಜಾಗ್ರತೆ ಇಡು” ಎಂದು ವೆಂಕಟಪತಿಗೆ ನಿರೂಪವಾಯಿತು. ವೆಂಕ ಟಪತಿ ಆಚಾರ್ಯನು ಅಂಜನೇಯಾಲಯಕ್ಕೆ ತೆರಳಿ, ಅಲ್ಲಿ ವಸತಿಮಾಡಿಕೊಂ ಡಿರುವ ನಾಲ್ವರು ಆಚಾರ್ಯರನ್ನೂ ಕಂಡು, ಚಂಚಲನೇತ್ರರ ಅಪೇಕ್ಷೆಯನ್ನು ವಿದಿತಮಾಡಿ, ಪ್ರತ್ಯುತ್ತರ ಕೇಳಿಕೊಂಡನು. ಶ್ರೀಪಾದಂಗಳವರ ಆಜ್ಞೆಯಂತೆ ವರ್ತಿಸದೆ ಇರುವ ಪಾಪಿ ತಮ್ಮ ಕೂಟದಲ್ಲಿ ಯಾರೂ ಇಲ್ಲವೆಂದು ಸರಸೋಕ್ತಿ ಯಿಂದ ಅವರೆಲ್ಲರ ಸಮ್ಮತವನ್ನು ಬಾಲಮುಕುಂದಾಚಾರ್ಯನು ಅವಗತ ಮಾಡಿದ್ದಕ್ಕಾಗಿ ಮಿಕ್ಕವರೆಲ್ಲರೂ ಸಂತೋಷಪಟ್ಟರು.

ಭೀಮಾಚಾರ್ಯನು ಇಂಥಾ ಸಂದುಕಟ್ಟಿನ ಸಮಯದಲ್ಲಿ ಈ ಸ್ಥಳ ದಲ್ಲಿ ಇರಬಾರದಿತ್ತು. ಅವನಿಗೆ ಪ್ರತ್ಯೇಕವಾಗಿ ಅಭಿಮಂತ್ರಣವಿಲ್ಲ. ವೆಂಕಟ ಪತಿಆಚಾರ್ಯನು ದೊಡ್ಡ ಚಮತ್ಕಾರಿ. ಮೊದಲು ನಾಲ್ಕುಮಂದಿ ಆಚಾರ್ಯ ಗೆ ವ್ಯಕ್ತವಾಗಿ ಅಭಿಮಂತ್ರಣ ಕೊಟ್ಟು ಆ ಮೇಲೆ ಸರ್ವರೂ ಭೋಜನಕ್ಕೆ ದಯಮಾಡಬೇಕಾಗಿ ಶ್ರೀಪಾದಂಗಳವರ ಅಪೇಕ್ಷೆಯೆಂಬ ಮಾತಿನ ಮೂಲಕ ಮಾಡಿದ ಸರ್ವಸಾಧಾರಣ ಹೇಳಿಕೆಯಲ್ಲಿ ಭೀಮಾಚಾರ್ಯನು ಸೇರಲಿಲ್ಲವೆನ್ನ ಕೂಡದು. ವೆಂಕಟಪತಿಯ ಯತ್ನಕ್ಕೆ ಒಂದು ಪ್ರತೀಕಾರಮಾ ಡಿ ನೋಡುವದಕ್ಕೋಸ್ಟರ ಭೀಮಾಚಾರ್ಯನು ಫಕ್ಕನೆ ಎದ್ದು ತಾನು ಆ ಬಿಡಾರವಾಸಿಯಲ್ಲವೆಂಬ ಅನ್ವಯವಾಗುವಂತೆ “ಬಾಲಮುಕುಂದಾಚಾ ರ್ಯರೇ! ನನಗೀಗ ಅಪ್ಪಣೆಯಾಗಲಿ; ಬೇರೊಂದು ಊರಿಗೆ ಹೋಗುವ ಜಂಬರವಿದೆ” ಎಂದು ಪೌಳಿಯಿಂದ ಕೆಳಗೆ ಇಳಿದನು. ವೆಂಕಟಪತಿಯು ಭೀಮಾಚಾರ್ಯನನ್ನು ಕುರಿತು–“ಸ್ವಾಮೀ! ತಮಗೆ ಪ್ರತ್ಯೇಕವಾಗಿ ಭೋಜನಕ್ಕೆ ಹೇಳಲಿಲ್ಲವೆಂಬ ವಿಕಲ್ಪ ಉಂಟಾಗಬಾರದು. ತಮ್ಮನ್ನು ಅಭಿಮಂತ್ರಣದಲ್ಲಿ ಸೇರಿಸಿರುತ್ತೇನೆ. ತಮಗೆ ತಕ್ಕ ಸಾಭಿಮಾನ ಮಾಡುವ ದಕ್ಕೆ ಶ್ರೀಪಾದಂಗಳವರಿಗೆ ತುಂಬಾ ಮನಸ್ಸು ಅದೆ. ಅವರಿಗೆ ತಮ್ಮ ಪರಿ ಚಯವಿಲ್ಲವೆಂಬ ಅನುಮಾನ ತಮ್ಮ ಮನಸ್ಸಿನಲ್ಲಿ ಅದೆಯೋ ಅರಿಯೆ” ಎಂದು ವೆಂಕಟಪತಿಆಚಾರ್ಯನು ಅಂದಾಗ ಸ್ವಾಮಿಗಳಿಗೆ ತನ್ನ ಪರಿಚರ್ಯ ವಿರಬಹುದು; ಆದರೆ ತಮ್ಮೊಳಗೆ ಹೆಚ್ಚು ಬಳಕೆ ಇಲ್ಲದೆ ತಾನು ದೂರವಾಗಿ ದ್ದೇನೆಂದು ಭೀಮಾಚಾರ್ಯನ ಪ್ರತಿವಚನವಾಯಿತು. ಆಗಲೇ ಅವನನ್ನು ಕೈ ಹಿಡುಕೊಂಡು ವೆಂಕಟಪತಿಯೇ ಮಠಕ್ಕೆ ಕರತಂದು ಮಮತಾಪೂರ್ವಕ ಮರಾಧೀಶರ ಭೇಟಿಯನ್ನು ಮಾಡಿಸಿದನು.

ಚಂಚಲನೇತ್ರರು ಭೀಮಾಚಾರ್ಯನನ್ನು ಏಕಾಂತ ಕೋಣೆಗೆ ಕರ ಕೊಂಡು ಕೊಂಚ ಸಮಯ ಅಂತರಂಗದಲ್ಲಿ ವೇದವ್ಯಾಸ ಉಪಾಧ್ಯನ ಅನ ಹತಿಯನ್ನು ಕುರಿತು ಪ್ರಸ್ತಾಪಿಸಿದರು. ಬಳಿಕ “ನಾಳೆ ಭೋಜನಕ್ಕೆ ವೆಂಕಟ ಪತಿ ಅಭಿಮಂತ್ರಣ ಕೊಟ್ಟಿರುವನಷ್ಟೆ? ಎಂದು ವಿಚಾರಿಸಲ್ಕು “ಹೌದು ಪರಾಕೆ! ನನಗೆ ಅಭಿಮಂತ್ರಣಬೇಕೇ! ನಾನು ಸತತ ಚರಣಕಮಲಗಳ ಭ್ರಮರನಲ್ಲವೇ?” ಎಂದು ಬಹು ದೀನತೆಯಿಂದ ಬಿನ್ನವಿಸಿ, ಬಿಡಾರಕ್ಕೆ ಹೋಗುವದಕ್ಕೆ ಅಪ್ಪಣೆಕೇಳಿ, ಪ್ರಣಾಮ ಮಾಡಿದನು. ಚಂಚಲನೇತ್ರರು ಕಾಶ್ಮೀರಶಾಲುಜೋಡಿಯನ್ನು ಉಡುಗೊರೆಮಾಡಿ ಭೀಮಾಚಾರ್ಯನನ್ನು ಸಾದರದಿಂದ ಕಳುಹಿಸಿ ಕೊಟ್ಟಿರು. ಉಡುಗೊರೆಯನ್ನು ಬಗಲಾಗೆ ಮಡಿಸಿ ಕೊಂಡು ಅವನು ಮರಳಿದನು. ಬಾಲಮುಕುಂದಾಚಾರ್ಯನು ನಸುನಗುತ್ತ “ಆಚಾರ್ಯರೇ! ತಮ್ಮ ಮುಖ ಉಲ್ಲಾಸದಿಂದ ಬೆಳಗುತ್ತಿದೆ” ಎಂದು ಮೋರೆ ಯನ್ನೇ ನೋಡಲು, ನಡೆದ ವೃತ್ತಾಂತವನ್ನು ವಿವರಿಸಿ, ತನಗೆ ಸಿಕ್ಕಿದ ಉಡು ಗೊರೆಯನ್ನು ತೋರಿಸಿದನು. ಭಾಪುರೆ! ತಮ್ಮ ಬುದ್ಧಿವಂತಿಗೆಗೆ ಮೆಚ್ಚಿದೆ ನೆಂದುಬಾಲಮುಕುಂದನು ಶ್ಲಾಘನೆ ಮಾಡಿದನು. ಹಾಗೂ ಹೀಗೂ ಅಂದಿನ ದಿನಕಳೆಯಿತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಣನೆ
Next post ಆರುಣಿಯ ನೋಡಿದಿರಾ

ಸಣ್ಣ ಕತೆ

 • ಜುಡಾಸ್

  "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

 • ವಿಷಚಕ್ರ

  "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys