ಆರುಣಿಯ ನೋಡಿದಿರಾ
ನಮ್ಮ ಮುದ್ದು ಆರುಣಿಯ

ಗುರುಗಳ ನೆಚ್ಚಿನ ಮೆಚ್ಚಿನ ಆರುಣಿ
ಗುರುಪತ್ನಿಯ ಅತಿ ಪ್ರೀತಿಯ ಆರುಣಿ
ಗುರುಧಾಮದ ಕಣ್ಮಣಿ ಆರುಣಿ

ಹಸುಗಳ ಮೇಯಿಸುವ ಆರುಣಿ
ಹೂಗಳ ಹೆಕ್ಕುವ ಆರುಣಿ
ವೇದಗಳನೋದುವ ಆರುಣಿ
ಸೌದೆಯನೊಡೆಯುವ ಆರುಣಿ

ಮೊದಲು ಮಾತಾಡಿಸುವ ಆರುಣಿ
ಎದುರು ಮಾತಾಡದ ಆರುಣಿ
ನದಿ ದಾಟಿಸುವ ಆರುಣಿ
ಔಷಧಿಯ ತರುವ ನಮ್ಮ ಆರುಣಿ

ಸಂಜೆಯಾಯಿತು ಆರುಣಿ
ಹಸುಗಳು ಮರಳಿದುವು ಆರುಣಿ
ಆರುಣಿ ಇನ್ನೂ ಬರಲಿಲ್ಲ ಆರುಣಿ
ಆರುಣಿ ಆರುಣಿ ಎನ್ನುವರೆಲ್ಲರೂ

ಆರುಣಿಯಿಲ್ಲದೆ ಇಲ್ಲ ಹೋಮ ಹವನ
ಆರುಣಿಯಿಲ್ಲದೆ ಇಲ್ಲ ಸಂಧ್ಯಾವಂದನ
ಆರುಣಿಯಿಲ್ಲದೆ ಇಡೀ ಆಶ್ರಮ ಶೂನ್ಯ
ಆರುಣಿಗೆ ಋಣಿ ಸಮಸ್ತ ಉದ್ಯಾನವನ
ಆರುಣಿ ಆರುಣಿ ಎಂದು ಕೂಗುವುದು ಕಾನನ
ಕೂಗುವರು ಗುರು

ಅಳಲುವಳು ಗುರುಪತ್ನಿ
ಅಳಲುವುದೆಲ್ಲಾ ಉಪನಿಷತ್ತು
ಆರುಣಿಯಿಲ್ಲದೆ ಸೊರಗಿದೆ ಜಗತ್ತು
*****