ಓರ್ವ ವ್ಯಕ್ತಿ ಬಹಳ ಕಾಲದಿಂದಲೂ ಖಾಯಿಲೆಯಿಂದ ನರಳುತ್ತಿದ್ದ. ಆಸ್ಪತ್ರೆಯ ವೈದ್ಯರು ಆ ವ್ಯಕ್ತಿಯ ಪತ್ನಿಯನ್ನು ಉದ್ದೇಶಿಸಿ, “ನೋಡಿ ಅಮ್ಮಾ ನಿಮ್ಮ ಪತಿ ಬಹಳ ಕಾಲ ಬದುಕಲಾರರು. ಹೆಚ್ಚೆಂದರೆ ಇನ್ನು ಒಂದುವಾರ ಉಳಿದಿರಬಹುದು ಅಷ್ಟೆ” ಅಂದರು. ವೈದ್ಯರ ಮಾತು ಕೇಳಿದ ಆಕೆ ಉತ್ತರಿಸಿದಳು. “ನೋಡಿ ಡಾಕ್ಟರ್, ಇವರ ಜೊತೆ ಮೂವತ್ತೈದು ವರ್ಷಗಳೇ ಕಳೆದಿರುವಾಗ ಇನ್ನು ಒಂದು ವಾರ ಕಳೆಯುವುದು ಏನು ಮಹಾ? ಹೇಳಿ”. ಹಾಗೆಂದಾಗ ವೈದ್ಯ ಸುಸ್ತೋ ಸುಸ್ತು !
***