ಪಂಕಜನೇತ್ರೇ ಬಾ ಅಂಕಿತಸ್ಥಾನಕೆ

ಪಂಕಜನೇತ್ರೆ ಬಾ ಅಂಕಿತಸ್ಥಾನಕೆ
ಶಂಕ ನೀಲಾಂಜನ ಪಂಚಾರುತಿ || ಪ ||

ಕಿಂಕರತ್ವದ ತಳಗಿಯೊಳು
ಬೆಂಕಿಯನು ಬೆಳಸಿಟ್ಟು ಕರ್ಪೂರ
ಓಂಕಾರ ಪ್ರಣಮವನು ಜಪಿಸುತ
ವೆಂಕಟೇಶಾನ ಪಾದಕಮಲಕೆ || ೧ ||

ಲಕ್ಷ್ಮಿರಮಣನೆಂಬ ಸಾಕ್ಷಾತನಾಮಕ್ಕೆ
ಲಕ್ಷ ತೆರೆದುನೋಡೋ ಆತ್ಮದೊಳು
ಪಕ್ಷಿವಾಹನಗೆ ಭಕ್ತರ ರಕ್ಷಿಪಗೆ
ಈ ಕ್ಷಣ ಮೋಕ್ಷಹೊಂದುವ ತೈಲಜ್ಯೋತಿಯ
ಸಾಕ್ಷಾತಗೆ ಜಯವೆನುತ ನಮಿಸಿ || ೨ ||

ವಸುಧಿಯೊಳು ಶಿಶುನಾಳ ಅಸಮ ಶ್ರೀಶೈಲದಿ
ಕುಸುಮ ಬತ್ತಿಯ ಹೊಸೆದಿಟ್ಟು ದಿನ
ನಿಶಿಕಿರಣದಿ ಚಾಚಿ ಕುಡಿಯಲು
ವಸುಧಿಯೊಳು ಶಿಶುನಾಳಧೀಶನ
ಪೆಸರಿನೊಳು ಸುಗಂಧ ಅಕ್ಷತಿ
ರಸಿಕರಾಜ ಗೋವಿಂದನಾಜ್ಞದಿ || ೩ ||
*****

 

ಕೀಲಿಕರಣ : ಎಮ್.ಎನ್.ಎಸ್.ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಯವೆನುತ ಕೈಮುಗಿದು ನಮಿಸುವೆ
Next post ಬಾಲೆ ನೀಲಾಂಜನ ಬೆಳಗುಬಾ

ಸಣ್ಣ ಕತೆ