
ಮಧುರ ನೀರವ ಚಿಂತನೆಗಳ ಅಧಿವೇಶನಕೆ ಗತಘಟನೆ ಸ್ಮರಣೆಗಳನೆಲ್ಲ ಕರೆಕಳಿಸುವೆನು ; ಕುದಿವೆ ಬಯಸಿದ್ದೆಷ್ಟೊ ಅಲ್ಲಿ ಇಲ್ಲದ್ದಕ್ಕೆ, ಹಳೆವ್ಯಥೆಗೆ ಹಾಳಾದ ಕಾಲಕ್ಕೆ ಮರುಗುವೆನು. ಗಳಿಗೆ ದಿನ ಇರದ ಸಾವಿನ ಆಳರಾತ್ರಿಯಲಿ ಹುಗಿದ ಪ್ರಿಯಮಿತ್ರರಿಗೆ ಮರಮರಳಿ ...
ನಿನ್ನ ನೋಡದೆಯೆ ನೋಡಿದೆನು ಹಲವು ಬಾರಿ ನನ್ನೆದುರು ಮಿಸುಕಿದರೆ ಎನಿತೊ ಒಂದು ಸಾರಿ ನೀನು ಸುಂದರಿಯಂತೆ ತುಂಬುಗಲ್ಲದ ಚೆಲುವಿ ಅರೆ ಬಿರಿದ ತುಟಿಯ ಒಲವಿ ನೀನು ಸಂಪಿಗೆಯ ಹೂವಂತೆ…… ನಿನ್ನ ಕಂಪನು ಹೊಗಳಿದರು ಸ್ವರದ ಇಂಪನು ಸುರುವಿದರು...
ಈ ಗತಿಶೀಲ ಜಗದಲ್ಲಿ ಅತಿಯಾಗದೆ ಇರು ಇತಿಯಾಗದೆ ಇರು ಶ್ರುತಿ ಮಾಡಿದ ವೀಣೆಯ ಹಾಗಿರು ನುಡಿಸುವ ಗಾಯಕ ನುಡಿಸುವ ವೇಳೆಗೆ ನಡೆಸುವ ಗುರು ನಡೆಸುವ ವೇಳೆಗೆ ತಡವರಿಸುವ ಭಯ ಯಾತಕೆ ಹೇಳು ಮಗುವಿನ ಸೋಜಿಗ ಅಂತೆಯೆ ಇರಲಿ ನಗುವಿನ ಚೆಲುವು ಮಾಯದೆ ಇರಲಿ ಮುಗಿ...
ವಿಧಿಯ ದುರ್ಲಕ್ಷ್ಯಕ್ಕೆ ಜನದ ನಿರ್ಲಕ್ಷ್ಯಕ್ಕೆ ತುತ್ತಾಗಿ ಕುಳಿತು ನಾನೊಬ್ಬನೇ ದುಃಖಿಸುವೆ ನನ್ನೀ ಅನಾಥತೆಗೆ. ಕಿವಿಸತ್ತ ಸ್ವರ್ಗಕ್ಕೆ ಮೊರೆಯಿಡುವೆ ಒಂದೆ ಸಮ. ಬರಿವ್ಯರ್ಥ ಚೀರಿಡುವೆ ನನ್ನ ಬಾಳನು ನಾನೆ ಶಪಿಸಿ, ಭರವಸೆ ಸುರಿವ ಯಾರ ಬಾಳನೊ ಬಯಸಿ...













