ಮಧುರ ನೀರವ ಚಿಂತನೆಗಳ ಅಧಿವೇಶನಕೆ
ಗತಘಟನೆ ಸ್ಮರಣೆಗಳನೆಲ್ಲ ಕರೆಕಳಿಸುವೆನು ;
ಕುದಿವೆ ಬಯಸಿದ್ದೆಷ್ಟೊ ಅಲ್ಲಿ ಇಲ್ಲದ್ದಕ್ಕೆ,
ಹಳೆವ್ಯಥೆಗೆ ಹಾಳಾದ ಕಾಲಕ್ಕೆ ಮರುಗುವೆನು.
ಗಳಿಗೆ ದಿನ ಇರದ ಸಾವಿನ ಆಳರಾತ್ರಿಯಲಿ
ಹುಗಿದ ಪ್ರಿಯಮಿತ್ರರಿಗೆ ಮರಮರಳಿ ಬೇಯುವೆನು.
ಹಿಂದೆಂದೊ ತೊರೆದ ಪ್ರೀತಿಯ ನೋವಿಗಳುವೆ, ಅಳಿ-
ದೆಷ್ಟೊ ದೃಶ್ಯಗಳ ಬರಿವೆಚ್ಚಕ್ಕೆ ನೋಯುವೆನು.
ಹಳೆಯ ದುಃಖಕ್ಕೆಲ್ಲ ಹೊಸದಾಗಿ ಕೊರಗುವೆ
ಒಂದೊಂದು ವ್ಯಥೆಯನೂ ತಿರುತಿರುಗಿ ನೆನೆಯುತ್ತ,
ಹಿಂದೆ ಅದಕೆಂದೆ ಪಟ್ಟೆಲ್ಲ ದುಃಖದ ಪರಿವೆ
ಇಲ್ಲ ಎಂಬಂತೆ ಹೊಸ ಹೊಸದಾಗಿ ಕುದಿಯುತ್ತ.
ಅದರೀ ನಡುವೆ ಪ್ರಿಯಮಿತ್ರ ನೆನೆದೆನೊ ನಿನ್ನ,
ತುಂಬುವುದು ನಷ್ಟ ಕೊನೆಗೊಳಿಸುವುದು ವ್ಯಥೆಯನ್ನ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 30
When to the sessions of sweet silent thought