ಒಲುಮೆಯ ಹೂವು

ಹೂವು ಕೋಮಲವು ಒಲುಮೆಯೆ ನಿಶ್ಚಯವಾಗಿಯೂ ಹೂವಿನ ಬಲವು ಹೂವು- ಪ್ರಖರ ಸೂರ್ಯನನ್ನೂ ದಿಟ್ಟಿಸಿ ನೋಡುವುದು ಬಿರುಗಾಳಿಯನೂ ಬೆದರಿಸಿ ಅಟ್ಟುವುದು ಮಂಜಿಗೆ ಅಂಜದು ಮಳೆಗೂ ತಲ್ಲಣಿಸದು ದೇವರ ಕೊರಳನ್ನೂ ತಬ್ಬುವುದು ದಾಸಿಯ ಹೆರಳಲ್ಲೂ ಹಬ್ಬುವುದು ಮನುಷ್ಯನ...

ನಗ್ನ ನಕ್ಷತ್ರ

ತುಟಿಯಂಚಿನ ಜೊಲ್ಲಲ್ಲಿ ನಕ್ಷತ್ರಗಳ ನಗ್ನ ಚಿತ್ರ ಮಾಯಕದ ದಂಡೆಯೇ ಮುಡಿಗೇರಿದೆ. ಬೆರಳಿಂದ ಬೆರಳಿಗೆ ಹೊಕ್ಕಳಿಂದ ಹೊಕ್ಕಳಿಗೆ ಬೆಸೆದುಕೊಂಡ ಸ್ಮೃತಿಗೆ ಸಾವಿಲ್ಲ. ಇರುಳ ಹೊಳಪಿಗೆ ರೆಕ್ಕೆ ಜೋಡಿಸುತ್ತ ಮುಚ್ಚಿದ ನಯನಗಳು ಕಪ್ಪುರಂಧ್ರದ ಒಳಹೊಕ್ಕವು ಕಾಲದ ಅರಿವಿಲ್ಲ...

ಪ್ರಾಚೀನವೇ

ಎಲೆ ಪ್ರಾಚೀನವೇ, ನನ್ನ ಮನತುಂಬುವಂತೆ ನಿನ್ನ ನಿನಾದ ಹೀರಿದ್ದೇನೆ. ಮೇಲೆ, ಮತ್ತೂ ಮೇಲಕ್ಕೆದ್ದು ಕೆಳಗೆ ಬೀಳುತ್ತ, ಮತ್ತೆ ಹಿಂದಕ್ಕೆ ಹೊರಳುವ ಹಸಿರು ನಾಲಗೆಯ ಮೊಳಗು ಕೇಳಿದ್ದೇನೆ ಸಹಸ್ರ ಜಿಹ್ವ. ದೂರ ವಸಂತದ ನನ್ನ ಮನೆ...

ವಿಮರ್ಶಕನಾಗಿ ನಾಯಕ

ಬಿಟ್ಟರಾಯ್ತೆ ದಾಡಿ ತಲೇಲಿರೋದು ರಾಡಿ ಕವಿಯಂತೆ ಕವಿ ಬೀದಿ ಸುತ್ತೋ ರೌಡಿ ಎಂಥ ಕವಿ! ಎಂಥ ಕವಿ! ಹಿಂಡಿರವನ ಕಿವಿ! ಪದ್ಯವಂತೆ ಪದ್ಯ ಬರಿಯೋದು ಬರೀ ಗದ್ಯ ಮತ್ತಿನ್ನೇನು ಮಾಡ್ತಾನಪೋ ತಲೆಗೇರಿದರೆ ಮದ್ಯ ಎಂಥ...

ಹೂವಿನ ಭಾಷೆ

ಹೂವು ಮಿತಭಾಷಿ ಮರಿ ದುಂಬಿಯ ಜೊತೆ ಸ್ನೇಹ ಮಾಡುವುದು ಗಾಳಿಯೊಡನೆ ಲಲ್ಲೆಯಾಡುವುದು ಚಿಟ್ಟೆಯನೂ ಮಾತಿಗೆ ಎಳೆಯುವುದು ಪ್ರೀತಿಯೆ ಹೂವಿನ ಭಾಷೆ ಅದಿಲ್ಲದಿರಲು ಪೂರೈಸದು ಹೂವಿನೊಂದಿಗೆ ಮಾತಾಡುವ ಆಶೆ. *****

ಮುತ್ತು ಚೆಲ್ಲಾಪಿಲ್ಲಿ

ಮುತ್ತು ಚೆಲ್ಲಾಪಿಲ್ಲಿ. ಹಾರಕಟ್ಟಿದ ದಾರವು ಹರಿಯಿತೆ? ಮುತ್ತುಗಬನಾಯ್ದು ಕಟ್ಟಿದರೂ ಮತ್ತೆ, ಫಲವೇನು? ನೀನಿಲ್ಲ. ಪೋಣಿಸಿದ ಮುತ್ತು ಹಾರವಾಗಲು ನಿನ್ನ ಸದೃಢ ಕೊರಳು ಬೇಕೇ ಬೇಕು. ಚಳಿ ಮುಂಜಾವು, ಇರುಳಿನೊಡನೆ ಕಾದಾಡಿ ಬಳಲಿ, ಬಿಳುಪೇರಿ, ಸೂರ್ಯ...

ಪ್ರೇಮಿಯಾಗಿ ನಾಯಕ

ಎಂಥ ಹೆಣ್ಣು ಎಂಥ ಹೆಣ್ಣು ಕೆನೆ ಹಾಲಿನ ಗಿಣ್ಣು ಕವಿಗಳು ಹೇಳಿದ ದುಂಬಿಯಂತೆ ದೊಡ್ಡ ದೊಡ್ಡ ಕಣ್ಣು ಎಂಥ ರಸಿಕ ಎಂಥ ರಸಿಕ ಎಲಾ ಎಲಾ ನಾಯಕ! ತಿದ್ದಿ ತೀಡಿದ ಹುಬ್ಬು ಯಾರ ತೋಟದ...

ಹೂದುಂಬಿ

ಹೂವಿನ ದಳಗಳಂತೆ ಕಣ್ಣುಗಳನ್ನು ತೆರೆದು ಸುಗಂಧ ಜಲವ ಬೀಸಿ ಸೆಳೆದಾಗ ಬಂತು ದುಂಬಿ ದೇವ ಮೈದುಂಬಿ ಬಂದಂತೆ ಹೀರಿ ಹನಿ ಮಕರಂದ ಊರಿ ಹೂ ಮೈಯೊಳಗೆ ಹುದುಗಿ ಹಗುರಾಗಿ ಎದೆಯ ಮೇಲೊರಗೆ ಅಂದೆ: ನೀನೀಗ...

ಕುರುಡ

ಅಲ್ಲಿ, ಮುರುಕು ಗೋಡೆಯ ಪಕ್ಕದಲ್ಲಿ ನಿಂತ ಕುರುಡ, ಹೆಸರಿಲ್ಲದ ಸಾಮ್ರಾಜ್ಯದ ಗಡಿಕಲ್ಲಿನಂಥ ಮುದುಕ, ಗ್ರಹಗಳ ಗಡಿಯಾರದ ಮುಳ್ಳು ತೋರಿಸುವ ಗೊತಿಲ್ಲದ ಅಂಕಿ, ಅವನನ್ನು ಸುತ್ತಿ, ಬಳಸಿ, ಅಡ್ಡಹಾಯ್ದು ಹೋಗುವ ನಕ್ಷತ್ರ ಪಥಗಳ ನಿಶ್ಯಬ್ದ ಕೇಂದ್ರ....

ಸರಕಾರದ ಪರವಾಗಿ ನಾಯಕ

ಎಲ್ಲರಿಗೂ ನಮಸ್ಕಾರ ಜನರ ಪೂರ್ತಿ ಸಹಕಾರ ಇದ್ದರೇನೆ ಆಗೋದಪೋ ಈ ದೇಶದ ಉದ್ಧಾರ ಎಂಥ ಸರಕಾರ! ಎಂಥ ಸರಕಾರ! ಬಂಗಾರದಂಥ ಸರಕಾರ! ಪ್ರತಿ ಊರಿಗೂ ಸರೋವರ ಬೆಳೆದ ಹೆಣ್ಣಿಗೆ ವರ ತಲಿ ಮೇಲೆ ಸೂರು...