ಸಮಯ ಸಂದರ್ಭ

ಸಮಯ ಸಂದರ್ಭ
ಸಿಕ್ಕಾಗಲೆಲ್ಲಾ ಆ ದೇವರಿಗೊಂದು
ಕೃತಜ್ಞತೆ ಅರ್ಪಿಸುವುದೇ ಸೂಕ್ತ|
ಅವಕಾಶ ದೊರೆತಾಗಲೆಲ್ಲ
ಜನ್ಮನೀಡಿದ ತಂದೆತಾಯಿಗಳಿಗೆ
ಕೈಜೋಡಿಸಿ ನಮಿಸುವುದೇ ಸಮ್ಮತ||

ಎಂಥಹಾ ವಿಸ್ಮಯ ಈ ಜಗತ್ತು
ಇಲ್ಲಿ ಮನುಜನಾಗಿ ಜನ್ಮ
ತಳೆಯುವುದೇ ಪುಣ್ಯದ ಸ್ವತ್ತು|
ಈ ನರಜನ್ಮದ ಹಿರಿಮೆ ಅಪಾರ
ಈಜಿ ದಡಸೇರಬೇಕು ಈ ಸಂಸಾರ||

ಅತೀ ಸುಂದರ ಈ ಕರುನಾಡು
ನೀ ಜನಿಸಿರುವುದಕಿಲ್ಲಿ ಹೆಮ್ಮೆಪಡು|
ಶಾಂತಿಯ ನಾಡು ಸವೃದ್ಧಿಯಬೀಡು
ಬದುಕು ಬಲು ಸುಲಭ ಸುಂದರ
ಸರಳತೆಯಿಂದಲಿ ನೋಡಲೊಮ್ಮೆ
ತಿಳಿವುದಿದರ ಮಹಿಮೆ ಅಪಾರ||

ಬರಿಯ ತುತ್ತಿನ ಚೀಲವ
ತುಂಬುವುದೇ ಜೀವನವಲ್ಲ|
ಅದರಾಚೆಗಿನ ಜೀವನದಿ
ಪಾಪ ಕರ್ಮವ ಕಳೆಯೆ
ಸತ್ಕಾರ್ಯದಿ ಪುಣ್ಯ ಗಳಿಸುವ
ಬಾಳದಾರಿಯಲಿ ಸಾಗುವುದೇ ಜೀವನ|
ಸತ್ಯ ದರ್ಶನ, ದೈವ ಸಾಕ್ಷಾತ್ಕಾರದಿಂದಲಿ
ಈ ಜನ್ಮದ ಈ ಜೀವ ಪಾವನ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಷಣ್‍ಮುಖ
Next post ಒಲವಿನಾಟ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…