ಅವರು
ನವಿಲುಗಳನ್ನು ಕೊಂದರು
ಉದರವನು ಭರಿಸಿದರು.
ಗರಿಗಳನ್ನು ಮಾರಿದರು
ಕಂಠವನು ತಣಿಸಿದರು
ಕೇಕೆ ಹಾಕಿದರು
ಮೈದುಂಬಿ ಕುಣಿದರು.
ಇತ್ತವರಿಗೆ ನವಿಲಾಗುವ ಯೋಗ
ಅಹಾ! ಅದೇನದು ಐಭೋಗ…
ದಿನದ ಅನ್ನವ ಕರುಣಿಸಿ
ದಯೆ ತೋರಿದ ದೇವರಿಗೆ
ಧನ್ಯವಾದ ಎಂದರು.
ಮೋಡದಂತೆ ಕರಗಿತು
ದೇವರ ಹೃದಯ
ಮಿಂಚಾಗಿ ಹೊಳೆದವನ ಮುಖ
ಹನಿಗಣ್ಣಾಗಿ ನೀಡಿತು ಅಭಯ…
ಗಿರಿಯೊಲ್ಲೊಂದು ಜೀವ
ಗರಿಗೆದರಿ ನರ್ತಿಸಿತು;
ನೆಲದಲ್ಲೊಂದು ಭಾವ
ನವಿಲಂತೆ ವರ್ತಿಸಿತು.
*****