ಸ್ವಪ್ನ ಮಂಟಪ – ೪

ಸ್ವಪ್ನ ಮಂಟಪ – ೪

ಮಂಟಪವನ್ನು ನೋಡಿ ಹೊರಡುವ ವೇಳೆಗೆ ಸಂಜೆಗತ್ತಲಾಗಿತ್ತು. ಎಲ್ಲರೂ ಮೌನವಾಗಿ ಹೋಗುತ್ತಿದ್ದರು. ಮಂಜುಳಾಗೆ ಮೌನವನ್ನು ಮುರಿಯುವ ಆಸೆ. ಆದರೆ ಯಾಕೊ ಅಳುಕು. ಕರಿಯಮ್ಮ ತಪ್ಪಾಗಿ ತಿಳಿಯಬಾರದು, ತನಗೆ ಮಾತಿನ ಚಪಲ ಎಂಬ ಅಭಿಪ್ರಾಯಕ್ಕೆ ಬರಬಾರದು. ನಾಚಿಕೆ...

ರಿಪೇರಿ

ಕಾಲಕ್ಕೆ ತಕ್ಕಂತೆ ಕೆತ್ತಿ ತುಕ್ಕು ಹಿಡಿದ ಮೊಳೆ ಕಿತ್ತು ಹೊಸದೊಂದ ಹೊಡೆದು ಗೊರ ಗೊರ ಚಾಟಿಗೆ ಸರಸರ ನೀರುಬಿಟ್ಟು ಹೊಸದು ಹುರಿಮಾಡಿ ಹೊಸೆದು ನಡೆಯುತ್ತದೆ ನಿಲ್ಲದ ರಿಪೇರಿ ತಿರುಗುತ್ತದೆ ಅನಾದಿ ಅನಂತ ಬುಗುರಿ. *****
ಸ್ವಪ್ನ ಮಂಟಪ – ೩

ಸ್ವಪ್ನ ಮಂಟಪ – ೩

ಮಂಜುಳ ಮೊದಲ ದಿನವೇ ತರಗತಿ ತೆಗೆದುಕೊಂಡಳು. ಮಕ್ಕಳಿಗೆ ಪಾಠ ಮಾಡುವಾಗ ಆಕೆಗೆ ಆದ ಆನಂದ ಅಸಾಧಾರಣವಾದದ್ದು. ಏನೋ ಸಾರ್ಥಕತೆಯ ಸಂತೋಷ ಸಂಭ್ರಮ! ಎಲ್ಲರ ಮನಸೂ ಮಗುವೇ ಆಗಿದ್ದರೆ ಅದೆಷ್ಟು ಚನ್ನ! ಮುಗ್ಧ ಕುತೂಹಲಾಸಕ್ತಿಗಳ ನೆಲೆಯಾದ...

ಉದ್ಧಾರಕ

ಎಲಾ ಇವನ, ಬೂಟಿನ ಟಪ ಟಪ ಸದ್ದಿನಲ್ಲೂ ಕನ್ನಡದ ಕಂಠವೇ ಕೇಳಿಸುತ್ತಲ್ಲ! ಅದಕ್ಕೇ ಇರಬೇಕು ನಿನ್ನ ಬೂಟು ಬಿಚ್ಚಿ ಸಿಂಹಾಸನದ ಮೇಲಿಡಲು ತಯಾರು ನಮ್ಮ ಭರತರು. ನಿನ್ನ ಬೂಟಿನ ಲೇಸು ಬಿಚ್ಚಲು ಶುರುಹಚ್ಚಿದರೆ ಸಾಕು...

ಭಸ್ಮಾಸುರ

ಸ್ಥಿತಿ: ಹಾಳೂರ ಹದ್ದುಗಳೆಲ್ಲ ಹಕ್ಕುಪುಕ್ಕ ಬಿಚ್ಚಿ ಸ್ಮಶಾನದಲ್ಲಿ ಸಂವಿಧಾನಾರ್ಚನೆ; ಬಡಪಾಯಿಗಳ ಚಟ್ಟ ಸಾಲು ಸಾಲು. ಇದ್ದ ನಾಲ್ಕು ಗಜ ಜಾಗದಲ್ಲಿ ಮದಗಜಗಳ ಪಾಲು ಮೂರು ಮುಕ್ಕಾಲು ಕಾರಣ: ಹಚ್ಚಹಸಿರು ಕಳಕಳ ಎನ್ನುತ್ತಿದ್ದಾ ಕಾಲದಲ್ಲಿ ಉಬ್ಬಿ...

ಮರೀಚಿಕೆ

ಹಾದಿ ಅಯಸ್ಕಾಂತದಲ್ಲಿ ಎಲ್ಲವೂ ಕಂಡದ್ದೆಲ್ಲವೂ ಆಹಾ! ಚಿಲುಮೆಯೆದ್ದು ಸ್ವಾಹಾ ಮಾಡಬೇಕೆಂಬ ಮಾಡಲೇಬೇಕೆಂಬ ಬಯಕೆ. ಆಗ- ಚೆಂಗು ಚೆಂಗಿನ ಚೆಲುವಾಗಿ ನೀನು ಕಂಡಿದ್ದೆ; ಮತ್ತ ಕಣ್ಣಿನ ಮುಂದೆ ಮಂದಾನಿಲದಂತೆ ಬೀಸಿ ಪನ್ನೀರು ಸೂಸಿ ಕಣ್ಣಕಾಮನ ಕಳಿಸಿ...
ಸ್ವಪ್ನ ಮಂಟಪ – ೨

ಸ್ವಪ್ನ ಮಂಟಪ – ೨

ಬೆಳಗ್ಗೆ ಎದ್ದಾಗ ಕೇರಿಗೆ ಕಳೆ ಬಂದಿತ್ತು. ಅದೊಂದು ವಿಚಿತ್ರ ಕಳೆ, ಸಿದ್ದಣ್ಣನ ಮನೆಯಲ್ಲಿ ಮಂಜುಳ ಓಡಾಡುತ್ತಿದ್ದುದೇ ಒಂದು ಕಳೆಯಾದರೆ ಈಕೆ ಯಾರು ಏನು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಉಳಿದವರಿಗೆ ಕಳೆಯೇರಿತ್ತು. ಕೆಲವರಂತೂ ಈಕೆ ಶಿವಕುಮಾರನಿಗೆ...

ಕೆಂಬಕ್ಕಿ

ಈ ಇವನು ಆಕಾಶದಲ್ಲಿ ಬೇರು ಭೂಮಿಯಲ್ಲಿ ಚಿಗುರು ಬೇವಿನ ಬುಡಕ್ಕೆ ಬೆಲ್ಲದ ನೀರು ಹಾಕುವ ನಟನಾ ಚತುರ ಬರೀ ಬೋಳುಮರ; ಕಾಂಡವೆಲ್ಲ ಪೊಟರೆ ಮೇಲೊಂದು ಎರವಲು ವರ್ಣತೆರೆ. ಆದರೇನಂತೆ- ಅರೆಬರೆ ಕಂಡದ್ದರಲ್ಲಿ ಅಷ್ಟಿಷ್ಟು ಗಿಟ್ಟಿಸಿಕೊಂಡು...
ಸ್ವಪ್ನ ಮಂಟಪ – ೧

ಸ್ವಪ್ನ ಮಂಟಪ – ೧

ಗವ್ವೆನ್ನುವ ಕತ್ತಲು; ಎತ್ತ ನೋಡಿದರೂ ಕುರುಡು ಆವರಿಸಿಕೊಂಡು ತಬ್ಬಿಬ್ಬು ಮಾಡುವ ವಾತಾವರಣ. ಆದರೂ ಹೆದರದ ಭೂಮಿ; ಕದಡದ ಕತ್ತಲು; ಮಿಂಚು ಸೀಳಿದರೂ ಮತ್ತೆ ಒಂದಾಗುವ ಜರಾಸಂಧ ಕತ್ತಲು; ಮಿಂಚು ಗುಡುಗುಗಳ ಕಣ್ಣು ಮುಚ್ಚಾಲೆಯಲ್ಲಿ ಮೈಮರೆಯದೆ...

ಶಕುನಿ

ದುರ್ಯೋಧನ ಮನಸ್ಸಿಗೆ ತಿದಿಯೊತ್ತಿ ತನ್ನ ಹೊಟ್ಟೆಕಿಚ್ಚಿನ ಕುಂಡದಲ್ಲಿ ಕಾಯಿಸಿ ಕೆಂಪುಮಾಡಿ ಕುಟ್ಟುತ್ತಾನೆ ತನಗೆ ಬೇಕಾದಂತೆ. ಪಗಡೆಪಾಕ ಪಾಂಡವ ಮಂದಿಯ ಮುಸುಡಿಯನ್ನೇ ಮುಕ್ಕಿದಾಗ ಮೀಸೆ ಕುಣಿಸಿ ಕೌರವೇಶ್ವರನ ಕಡೆ ನೋಡಿ ಕಣ್ಣಲ್ಲಿ ಕಿಚ್ಚು ಮುಕ್ಕಳಿಸಿ ತುಟಿಯಲ್ಲಿ...
cheap jordans|wholesale air max|wholesale jordans|wholesale jewelry|wholesale jerseys