ಏನೆಂದು ಹೇಳಲಿ ಅಕ್ಕ ಮುತ್ತಿನ ಕತೆಯ ಏನೆಂದು ಹೇಳಲಿ ಅದ ಕಿತ್ತವನ ಕತೆಯ ಬೃಂದಾವನ ತುಂಬ ಸುರಿಯಿತು ಮುತ್ತು ಅದು ಸುರಿದರು ಇನ್ನೂ ಮುಗಿಯದೆ ಇತ್ತು ಅತ್ತು ಕೇಳಿದ ಕೃಷ್ಣ ಮತ್ತೂ ಕೇಳಿದ ಕೃಷ್ಣ ಒತ್ತಾಯಿಸಿ ಕೇಳಿದ ಸತ್ತಾಯಿಸಿ ಕೇಳಿದ ಒಬ್ಬೊಬ್ಬ ಗೋ...

ಹಸಿರೆಲೆಗಳಂಜಲಿಯೊಳಾತು ರವಿ ತೇಜವಂ ಜೀವಕರ್ಘ್ಯವನೆರೆವ ಬನದ ನಲವು, ಕೆರೆಕೆರೆಯ ಹರಹಿನೊಳು ಜಲಹಾಸವನು ಮೆರಸಿ ತಿರೆ ಬಣ್ಣಗೊಳಿಸುವೀ ಬಿಸಿಲ ನಲವು, ಅಲೆ ಕೆದರೆ ತರು ಬೆದರೆ ನೀಲದಿಂ ಧುಮ್ಮಿಕ್ಕಿ ಕೋಡಿಗೇರುತ ಗಾಳಿ ಮೊರೆವ ನಲವು, ಬೆಳಕೆಲರು ಹಸಿರುಗ...

ಆಗಸದ ಝಗಝಗಿಸುವ ನಕ್ಷತ್ರಗಳು ಸಾಮೂಹಿಕ ರಜೆ ಹಾಕಿ ಹೋಗಿದ್ದವು. ವಸುಂಧರೆಯ ಮೇಲೆ ಚಿಗರೆಯಂತೆ ಪಟಪಟನೆ ಪುಟಿನಗೆಯುವ ಒಂದೇ ಒಂದು ನಕ್ಷತ್ರ ಮಿನುಗುತ್ತಿತ್ತು. ಪ್ರಖರವಾಗಿ ಹೊಳೆಯುತ್ತಿತ್ತು ಮೂಗುತಿ ಸುಂದರಿ ಆ ಚೆಲುವೆಯ ಆಟಕ್ಕೆ ಮನಸೋತು ತಲೆದೂಗಿ ...

ಇದು ಸೋಜಿಗದ ವಿಷಯ. ಹಾಗಾದರೆ ಕಾಡಿನಲ್ಲಿರುವ ಮರಗಳ ಅಡಿಯನ್ನು ಅಗೆದು ಖನಿಜ ಹುಡುಕಬಹುದಲ್ಲ.?! ಎನ್ನಬಹುದು. ಆದರೆ ಇದು ಹೀಗಾಗದೇ ಕೆಲವೇ ಜಾತಿಗಳ ಮರಗಳು ಬೇರೆಬೇರೆ ಜಾತಿಯ ಖನಿಜಗಳಿರುವ ಮಣ್ಣಿನ ಪದರಲ್ಲಿ ಬೇರುಬಿಟ್ಟು ಬೇರೆಬೇರೆ ಜಾತಿಯ ಮರಗಳು ಬ...

೧ ಇರುಳಲಿ ಅಗ್ನಿಯ ರಥದಲಿ ಬರುತಿರೆ ಘೋರಾರಣ್ಯದ ಮಧ್ಯದಲಿ ಅರಬೈಲೆನ್ನುವ ಗುರುತರ ವನಗಿರಿ ದರೆಯಲಿ ರಥವದು ಸಾಗದಿರೆ ೨ ಕೊರಗುತ ರೇಗುತ ಮರುಗುತ ಪೊರಮಡೆ ಬನಸಿರಿ ಬಗನಿಯ ಬನಗಳನು ಕಾಣುತ ಸನಿಹದೆ ಕುಣಿಯುವ ಮನದಿಂ ಮಾಣದೆ ಮನದಣಿಯಿಂ ನೋಡೆ ೩ ಗೊನೆಗಳ ...

ಕನಸುಗಳು ಕರೆದಾವೊ ಮನಸುಗಳು ಬೆರೆತಾವೊ ಕೆಂಬಾವುಟದಡಿಯಲ್ಲಿ ಹೊಸಹಾಡು ಕೇಳಿದವೊ || ಕತ್ತಲಲಿ ಕರಗಿದ ಸೂರ್ಯ ಇನ್ನು ಕರಗೋದಿಲ್ಲವಣ್ಣ ಕಣ್ಣೀರಲಿ ತೊಳೆದ ಬದುಕು ಇನ್ನು ಮುಂದೆ ಬೇರೆಯಣ್ಣ ಇನ್ನು ಯಾಕ ಒಳಗ ಕುಂತಿ ಎದ್ದು ಹೊರಗೆ ಬಾರಣ್ಣ… ನನಗ...

“ಜಯಂತಾ, ನೀನು ಪಾಸಾಗಿಯೇ ತೀರುವಿ; ಮುಂದೇನು ಮಾಡ ಬೇಕೆಂದಿರುವಿ ? ನಿನ್ನ ದೊಡ್ಡಣ್ಣನಂತೂ ಚಳವಳಿಯಲ್ಲಿ ಸೇರಿಕೊಂಡ. ನಿನ್ನ ಮನಸ್ಸಿನಲ್ಲೇನಿದೆ ?” ಎಂದು ಯಜಮಾನರು ವಿಚಾರಿಸಿದರು. “ಚಳವಳಿಯ ಭರವು ಕಡಿಮೆಯಾಗಿದೆ. ನನ್ನ ಲಕ್ಷ...

ಮೂಲ: ಟಿ ಎಸ್ ಎಲಿಯಟ್ “ಶಬ್ದ (ಪದ) ವೆನ್ನುವುದು ಎಲ್ಲರಿಗೂ ಒಂದೇ ಆಗಿದ್ದರೂ ಬಹಳ ಜನ ಅದರ ಬಗ್ಗೆ ತಮ್ಮದೇ ಆದ ವಿಶಿಷ್ಟ ತಿಳುವಳಿಕೆ ಉಳ್ಳವರಂತೆ ಬಾಳುತ್ತಾರೆ” “ಮೇಲೆ ಏರುವ ದಾರಿ ಮತ್ತು ಕೆಳಗೆ ಇಳಿಯುವ ದಾರಿ ಎರಡೂ ಒಂದೇ ಆ...

1...7677787980...107

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....