ಕವಿ:- ನನ್ನ ಹಾಡುಗಳನ್ನೆ ನೀನು ಕೇಳುತ ಕುಳಿತೆ, ನಿನ್ನ ಹಾಡನು ನಾನು ಕೇಳಲೆಂದು ಕುಳಿತೆ, ನನ್ನೀ ಹಿಗ್ಗು ಮರುದನಿಯ ಕೊಡುವಂತೆ ನಿನ್ನ ಕಣ್ಣಲಿ ಕಂಡೆ ಕುಣಿವುದೊಂದು. ರಸಿಕ:- ನನ್ನ ಕಂಗಳ ಕುಣಿತಗಳ ತಾಳಲಯದಲ್ಲಿ ಕಟ್ಟಿರುವೆ ನಿನ್ನ ನವ ಕಾವ್ಯವನ್ನ...

ತೋಟದ ಗಿಡದಲ್ಲಿ ಒಂದು ಜೇಡ ಬಲೆ ಕಟ್ಟಿತ್ತು. ಕವಿ ನೋಡುತ್ತಾ ನಿಂತ. ನವಿರಾದ ಎಳೆಗಳು ಬಿಸಿಲು ಕಿರಣದಲ್ಲಿ, ಬಂಗಾರದ ನೇಯ್ಗೆಯಂತೆ ಅತ್ಯಂತ ಚೆಲುವಾಗಿತ್ತು. ವರ್ತುಲ ವರ್ತುಲವಾಗಿ ಎಳೆಗಳು ಹಾದುಹಾದು ಸುಂದರ ಜಾಲ ರಚಿಸಿತ್ತು. ಕಲಾರಾಧಕನಂತಿದ್ದ ಜೇ...

ಕೃಷಿ ಬಿಟ್ಟನ್ನವನು ಕೊಂಡುಣುವ ಹಂಗ್ಯಾಕೋ ಖುಷಿಯೊಳುಂಡನ್ನದ ಶಕುತಿ ಎಮ್ಮೊಳಡಗಿರಲು ಕಹಿ ಮದ್ದು ವೈದ್ಯರಾಕೆಮಗೆ ರೋಗಿಯಾಗುವ ಮೊದಲು ಕಷ್ಟದೋದಿನ ಶಾಲೆಗಳಾಕೆಮ್ಮ ಮಕ್ಕಳಿಗೆ ಉಣಲರಿವ ಮೊದಲು ಕಷ್ಟ ಸುಖ ವ್ಯತ್ಯಾಸವರಿಯದೀ ರೋಗವನು ಅಲ್ಜಿಮಾರೆನ್ನುವರು...

“ನಿಲ್ಲು ನಿಲ್ಲಯ್ಯ ರಾಜ ನಿಜಗುಣ ನಾ ಬಲ್ಲೆ ಮಲ್ಲಿಗೆ ಸೂರಾಡಬಹುದೇನೋ || ನಿಲ್ಲಯ್ಯ ರಾಜಾ” || ೧ || ಠಾಕಠೀಕ ಜೋಕ “ನಾರೀ ಜೋರಲಿಂದ ಹೋಗುವಾಗ ಕರಗ ಬಿದ್ದಿತೆ ನಾರೀ, ಹೌದಲ್ಲೇ ರಮಣೀ || ೨ || ಹೌದಲ್ಲೇ ರಮಣೀ? ಕರಗು ಬಿದ್ದಿ...

ಬರೆದವರು: Thomas Hardy / Tess of the d’Urbervilles ಆನಂದಮ್ಮ ಕೆಂಪಮ್ಮಣ್ಣಿ ಇಬ್ಬರಿಗೂ ಎಲ್ಲಾ ಕೆಲಸ ತಾನೇ ಮಾಡಬೇಕು ಎಂದು ಉತ್ಸಾಹ. ಕೆಂಪಿ ಆನಂದದಿಂದ ಖರ್ಜಿಕಾಯಿ ಊದಿದ ಹಾಗೆ ಊದಿದ್ದಾಳೆ. ಅವಳಿಗೆ ರವಿಕೆ ತೋಳು ಪಿಟ್ಟಿನ್ನುವುದಿ ರಲಿ, ...

ಹರಿ ನಿನ್ನ ಕಂಗಳು ಬೆಳದಿಂಗಳು ಹರಿ ನಿನ್ನ ರೂಪ ಚೈತನ್ಯ ಹರಿ ನಿನ್ನ ಗಾನ ಅಮೃತವು ಹರಿ ನಿನ್ನ ಸ್ಮರಣೆ ಅನನ್ಯ ಕಣ್ಣು ಮುಚ್ಚಲಿ ತೆರೆದಿರಲಿ ನೀ ನೋರ್‍ವನೆ ಕಾಣಿರಲಿ ನನ್ನ ಎದೆಯ ಪ್ರಿಯಕರನಿ ಎಂದೆಂದೂ ನೀನಾಗಿರಲಿ ನಿನ್ನ ಮುರಲಿಗಾನ ಆಲಿಸಿರಲಿ ರಾಧ...

ಇನ್ನೊರ್‍ವನಿಂತೆಂದನ್ : “ಈ ನೆಲದ ಮಣ್ಣಿಂದೆ ಎನ್ನೊಡಲನಿಂತೆಸಗಿ ಸೊಗಸುಗೊಳಿಸಿದವಂ ಮರಳಿ ಮಣ್ಣೊಳಗೆನ್ನ ಬೆರೆವಂತೆ ಮಾಡಿದೊಡೆ ಅಚ್ಚರಿಯದೇನದರೊಳದೆ ತಕ್ಕುದಲ್ತೆ?” *****...

ಅಂಗುಲ ಹುಳವೊಂದು ತನ್ನ ಬದುಕ ಅಂಗುಲ ಅಂಗುಲ ಅಳೆಯುತಿದೆ ಯಾವುದೊ ಸಿಹಿಯೆಲೆಯಾಸೆ ಯಾವುದೊ ಇಬ್ಬನಿ ಬಯಕೆ ಈ ಹುಳವಿನ ತಲೆಯೊಳ ಹೊಕ್ಕು ಹರೆಯುಸಿತಿದೆ ತೆವಳಿಸುತಿದೆ ದಾರಿ ಸಾಗುವುದಿದೆ ಬಹಳ ದೂರ ಪಕ್ಕದಲೇ ಒಂದು ಕಾಗೆ ಎಡ ತಲೆಬಾಗಿಸಿ ಬಲ ತಲೆಬಾಗಿಸಿ...

ನನ್ನ ಜುಟ್ಟನದಾರು ಮೆಚ್ಚರು ನೋಡು ನೋಡಿದರಾವುಟ ನನ್ನ ನೇಹಿಗರೆಲ್ಲರಚ್ಚರಿ ನನ್ನ ತಲೆಯೇ ಬಾವುಟ. ‘ಭಟ್ಟವಂಶದಿ ಹುಟ್ಟ ಪಡೆದುದು ಸಾರ್ಥವೆನಿಸಿದನೀ ಭಟ ಮ್ಲೇಚ್ಛರಿದಿರೊಳು ಸ್ವೇಚ್ಛೆಯಿಂದಲಿ ಮತವ ಮೆರೆದಿಹನೇಹಟ!’ ಎಂದು ಮುತ್ತಣ್ಣಾದಿ...

ಯಾವ ಗೋರಿಯಲಿ ಯಾರ ಶವವಿದೆ ಏನು ಹೆಸರು ನನಗೇನು ಗೊತ್ತು? ಯಾವ ಚಹರೆ, ಯಾವ ಬಣ್ಣ, ಯಾರಿಗೆ ಗೊತ್ತು? ಯಾಕೆ ಕೊಲೆಯಾದೆ, ಯಾರು ಕೊಂದರು ಕೊಲೆಗಾರನ ಹೆಸರು ಗೊತ್ತಿಲ್ಲ ನನಗೆ, ಗೋರಿಗಳ ನಿಶಾನೆ ಅಳಿಸಿ ಹೋಗುತ್ತಿವೆ ಹೊದಿಸಿದ ಆ ಚಾದರದ ಮೇಲಿನ ಹೂ ತುಸ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....