ಬರೆದವರು: Thomas Hardy / Tess of the d’Urbervilles
ಆನಂದಮ್ಮ ಕೆಂಪಮ್ಮಣ್ಣಿ ಇಬ್ಬರಿಗೂ ಎಲ್ಲಾ ಕೆಲಸ ತಾನೇ ಮಾಡಬೇಕು ಎಂದು ಉತ್ಸಾಹ. ಕೆಂಪಿ ಆನಂದದಿಂದ ಖರ್ಜಿಕಾಯಿ ಊದಿದ ಹಾಗೆ ಊದಿದ್ದಾಳೆ. ಅವಳಿಗೆ ರವಿಕೆ ತೋಳು ಪಿಟ್ಟಿನ್ನುವುದಿ ರಲಿ, ಪಟ್ಟ್ ಎನ್ನದಿರುವುದು ಆಶ್ಚರ್ಯ. ಆನಂದಮ್ಮ ಇಂದು ನಿಜವಾಗಿ ಆನಂದಮ್ಮನಾಗಿದ್ದಾಳೆ. ಆದರೆ ಅದೇನೋ ಅವಳೇ ಹೇಳಲಾರಳು. ಅಂತೂ ಅದು ಕೆಂಪಿಯ ಆನಂದದಂತೆ ತಾನೇ ತಾನಾಗಿ ಉಕ್ಕುತ್ತಿಲ್ಲ. ಉಷ್ಣದ ಸಂಸರ್ಗದಿಂದ ನೀರು ಕೂಗುತ್ತಿದೆ : ಕುದಿಯುತ್ತಿಲ್ಲ. ಕೆಂಪಿ ಗಂತೂ ಮಗಳೂ ಅಳಿಯ ಹಸೆಯ ಮೇಲೆ ಕುಳಿತಿದ್ದಾರೆ ಎಂದು ಆನಂದ. ಆನಂದಮ್ಮನಿಗೆ ಏಕೋ ಏನೋ ಗೊತ್ತಿಲ್ಲ. ಅದು ಉತ್ಸವ ದರ್ಶನದಿಂದ ಆದ ಸಂಭ್ರಮವಲ್ಲ. ಅದಕ್ಕಿಂತ ಆಚೆ ಹೋಗಿದೆ. ನಾಯಕನು ತನಗೆ ಏನೋ ಆತ್ಮೀಯನಾದಂತೆ, ಆ ಆತ್ಮೀಯತೆ ಮಲ್ಲಿಯ ಕಡೆಯಿಂದ ಬಂದ ಹಾಗೆ ಇದೆ. ಅಂತೂ ಅವಳು ಸಂತೋಷ ಪಡುತ್ತಿದ್ದಾಳೆ. ಆ ಸಂತೋಷಕ್ಕೆ ಆ ಆನಂದಕ್ಕೆ ಅವಳು ಕಾರಣವನ್ನು ಹೇಳಲಾರಳು.
ಸಂಜೆ ಆರತಕ್ಷತೆಯಾಯಿತು. ಮದುವಣಿಗರು ಬೇರೆ ಮನೆಗೆ ಹೋದರು. ಐವರು ಮುತ್ತೈದೆಯರಿಗೆ ಫಲತಾಂಬೂಲಗಳನ್ನು ಕೊಟ್ಟುದೂ ಆಯಿತು. ರಾಣಿಯು ಕೆಂಪಮ್ಮಣ್ಣಿಯನ್ನೂ ಆನಂದಮ್ಮ ನನ್ನೂ ಮತ್ತೆ ಕರಿದು ಇಬ್ಬರಿಗೂ ಒಂದೊಂದು ಕಲಾಪತ್ತಿನ ಸೀರೆ ಅದಕ್ಕೆ ತಕ್ಕ ರವಿಕೆಗಳನ್ನು ಫಲತಾಂಬೂಲ ದಕ್ಷಿಣೆಗಳನ್ನು ಕೊಡಿಸಿದಳು. ಎಲ್ಲರನ್ನೂ ಕಳುಹಿಸಿ, ರಾಣಿಯು ಬಾಗಿಲು ಮುಚ್ಚಿ ಮಂಚದ ಹತ್ತಿರ ಬಂದಳು. ನೂತನ ದಂಪತಿಗಳು ಎದ್ದು ಬಂದು ಅವಳ ಮುಂದೆ ನಿಂತರು.
ನಾಯಕನು ರಾಣಿಯನ್ನು ಆಲಂಗಿಸಿ, ಆಕೆಗೆ ಸಂತೋಷ ವಾಗುವಂತೆ ಮುತ್ತಿಟ್ಟುಕೊಂಡು, “ಏನು ಪುಣ್ಯಾತ್ಮ ಗಿತ್ತಿ, ಎಡೆ ಬಡಿಸಿದ್ದೀಯೆ… ಊಟ ಮಾಡಲಾ?” ಎಂದು ವಿಶ್ವಾಸದಿಂದ ಕೇಳಿ ದನು.
“ನನ್ನೊಡೆಯ, ಚಿನ್ನ, ನನ್ನ ಸುಖ ಪಡಿಸಿದಂತೆ ಇವಳೂ ಸುಖ ಪಡಿಸಿ ನಿನ್ನ ಸೊತ್ತು ಮಾಡಿಕೊ,” ಎಂದು ಅರ್ಧಾಲಿಂಗನದಲ್ಲಿ ಗಲ್ಲವನ್ನು ಹಿಡಿದು ಹೇಳಿದಳು.
ಮಲ್ಲಿಯು ಅಂಥಾ ದೃಶ್ಯವು ತನಗೆ ಹೊಸದಲ್ಲದಿದ್ದರೂ ಅಂದು ನಾಚಿ ರಾಣಿಗೆ ನಮಸ್ಕಾರ ಮಾಡಿದಳು. ರಾಣಿಯು ಅವಳನ್ನು ಎತ್ತಿ ಗಂಡಸಿಗಿಂತ ಹೆಚ್ಚಾಗಿ ಆಲಿಂಗಿಸಿ ಮುತ್ತುಕೊಟ್ಟು, ” ನೋಡವ್ವ, ಈ ಬಸವನ್ನ ನಾನು ಆಳಲಾರದೆ ಹೋದೆ. ನೀನಾದರೂ ಆಳು, ಜೋಡಿ ಹಗ್ಗಕ್ಕೆ ಸಿಕ್ಕಿದ ಗೂಳಿಯಂತೆ ಅಂಕೆಗೆ ಸಿಕ್ಕಲಿ ನನ್ನೊಡೆಯರು. ನಾನು ಪಟ್ಟ ಸುಖದ ಜೊತೆಗೆ ನಾನು ಪಡದಿರುವ ಸುಖವೂ ನಿನ್ನ ದಾಗಲಿ.” ಎಂದು ಹರಸಿದಳು.
ನಾಯಕನು ಏನೋ ಬಿಂಕನಿಂದ “ನೀನು ಪಟ್ಟ ಸುಖವಂತೂ ಸರಿ. ಪಡದಿದ್ದ ಸುಖ ಯಾವುದೋ ? ” ಎಂದು ಕೇಳಿದನು-
ಮಡದಿಯು ಮೋಹದಿಂದ ಮೊಖವನ್ನು ಹಿಡಿದು ಎಳೆದುಕೊಂಡು ಸಂಪೂರ್ಣ ವಿಶ್ವಾಸದಿಂದ ಚುಂಬಿಸಿ, ಸೋಟಿ ತಿವಿದು “ಗಂಡಂತೆ ಗಂಡು. ನನ್ನ ಹೊಟ್ಟೆ ಯಂತೂ ತುಂಬಲಿಲ್ಲ. ಅವಳ ಹೊಟ್ಟೆ ಯಾದರೂ ತುಂಬಿಸು.” ಎಂದು ಹೇಳಿ ಹೊರಟಳು.
ಒಳ ಬಾಗಿಲನ್ನು ತೆಗೆದು ಮಗ್ಗುಲ ಕೋಣೆಗೆ ಹೊರಟಿದ್ದವಳು ಹಿಂತಿರುಗಿ ಹಾಗೆಯೆ “ಬಾಗಿಲನ್ನು ಜಡಿದು ನಿಂತು ಸಣ್ಣ ದನಿಯಲ್ಲಿ “ಮಂಚ ಹತ್ತೀರೋ, ಸೊಳ್ಳೆ ಪರದೆ ಬಿಟ್ಟು ಹೋಗೋವಾ” ಎಂದಳು.
ದಂಪತಿಗಳು ಮಂಚನನ್ನು ಹತ್ತಿದರು.
ರಾಣಿಯು ಹಿಂತಿರುಗಿ ಬಂದು ಅಲ್ಲಿದ್ದ ಬಾದಾಮಿಯ ಹಲ್ವ ವನ್ನು ಇಬ್ಬರ ಬಾಯಿಗೂ ಅಷ್ಟಷ್ಟು ಇಟ್ಟು” ಕೆಂಪಗೆ ಕಾಯಿಸಿಟ್ಟಿದ್ದ ಬಾದಾಮಿಯ ಹಾಲನ್ನು ಬಟ್ಟಲಿಗೆ ಬೊಗ್ಗಿಸಿ ಇಬ್ಬರಿಗೂ ಕೊಟ್ಟು ತಾನೂ ಕುಡಿದು, ಕುಟ್ಟಟ್ಟಿದ್ದ ಕರ್ಪೂರ ವೀಳೆಯವನ್ನು ಅವರಿಗೂ ಕೊಟ್ಟು ತಾನೂ ಬಾಯಲ್ಲಿ ಹಾಕಿಕೊಂಡು, ” ಇನ್ನು ಬರಲಾ? ” ಎಂದು ಎದ್ದಳು.
ನಾಯಕನು ಹೋಗುತ್ತಿದ್ದವಳ ಸೆರಗು ಹಿಡಿದು. ನಿಲ್ಲಿಸಿಕೊಂಡು ಬರಸೆಳೆದು ಮೊಕದಲ್ಲಿ ಮೊಕವಿಟ್ಟು ಬಾಯಲ್ಲಿದ್ದ ತಂಬುಲದಲ್ಲಿ ಅರ್ಧ ವನ್ನು ಅವಳ ಬಾಯಿಗೆ ನೂಕಿ, ಅವಳ ಬಾಯಲ್ಲಿದ್ದ ತಂಬುಲವನ್ನು ತಾನೂ ಕಸಿದುಕೊಂಡು. ಕೆನ್ನೆಗೆ ಕೆನ್ನೆ ಕೊಟ್ಟು, “ತಾವು ಯಾವಾಗ ಮಗ್ಗುಲಿಗೆ ಬರುವುದು ! ” ಎಂದನು.
ಅವಳೂ ಅದೇ ವಿಶ್ವಾಸದಿಂದ ಅವನ ಬೆನ್ನು ಸವರುತ್ತಾ “ತಾವಿ ಬರೂ ಕರೆದಾಗ.” ಎಂದು ನಕ್ಕು ನಗಿಸಿ ಹೊರಟಳು. “ಸೊಳ್ಳೆ ಪರ ದೆಯು ಆ ನವದಂಪತಿಗಳನ್ನು ಮುಚ್ಚಿತು, ಎರಡು ಹೆಜ್ಜೆ ಇಟ್ಟಿದ್ದ ವಳು ಮತ್ತೆ ಹಿಂತಿರುಗಿ ಅವರಿಬ್ಬರನ್ನು ಕಣ್ಣು ತುಂಬಾ ನೊಡಿ ಏನೋ ಪರಮಾರ್ಥವನ್ನು ಸಾಧಿಸಿದವಳಂತೆ ತನ್ನ ಮಲಗುನ ಮನೆಗೆ ಹೋದಳು. ಯಾಕೋ. ದಾರಿಯಲ್ಲಿ ಅವಳು ಮೈಮುರಿದಳು.
ಬಾಗಿಲು ಅವಳ ಅರಿವಿಲ್ಲದೆ ಕೊಂಚ ಸದ್ದು ಮಾಡಿತು. ರಾಣಿಯು ಹಾಕಿದ ಬಾಗಿಲು ಸದ್ದಾದುದನ್ನು ಅರಿಯದೆ ನಾಯಕನು ಹಿಂತಿರುಗಿ ನೋಡಿದನು. ಆ ವೇಳೆಗೆ ರಾಣಿಯು ಮರೆಯಾಗಿದ್ದಳು. ಅವಳ ಕಣ್ಣಿನ ಕೊನೆಯಲ್ಲಿದ್ದ ಸಣ್ಣ ಹನಿಯನ್ನು ಅವನು ಕಾಣಲಿಲ್ಲ. ಅದು ಸಂತೋಷಕ್ಕೋ ಸಂಕಟಕ್ಕೋ ಅದು ಅವಳಿಗೂ ತಿಳಿಯಲಿಲ್ಲ.
ಆನಂದಮ್ಮನು ರಾಣಿಯು ತನಗೇಕೆ ಸೀರೆ ರವಿಕೆಗಳನ್ನು ಕೊಡಿಸಿ ದಳು ಎಂದು ಆಶ್ಚರಯಪಟ್ಟು ಕೊಂಡಳು. ಕೆಂಪಿಯನ್ನು ಬಿಟ್ಟು ತನ್ನ ಕೋಣೆಗೆ ಹೋದಾಗ ಅಲ್ಲಿ ಶಂಭುರಾಮಯ್ಯನು ಇನ್ನೂ ಎಚ್ಚರವಾಗಿ, ಏನೋ ಮೊಂಕು ಹಿಡಿದವನಂತೆ ಕುಳಿತಿದ್ದನು. ಬಾಯಲ್ಲಿ ತಂಬುಲ ವಿದೆ: ಅಗಿಯುತ್ತಿಲ್ಲ. ಕೈಯಲ್ಲಿ ಹೊಗೆಸೊಪ್ಪಿದೆ : ಅದನ್ನು ಬಾಯಿಗೆ ಹಾಕಿಕೊಳ್ಳುವ ಯತ್ನವಿಲ್ಲ. ಹಾಗೆಯೇ ಕುಳಿತಿದ್ದಾನೆ.
ಆನಂದಮ್ಮನು ಬಂದಳು. ಬಾಗಿಲನ್ನು ಹಾಗೆಯೇ ಸೇರಿಸಿ ಮಡಲನ್ನು ಹಾಗೆಯೇ ಹಿಡಿದುಕೊಂಡು ಬಂದು, ದೀಪವನ್ನು ಆ ಪೂರ್ಣ ಪ್ರಕಾಶದಲ್ಲಿ “ನೋಡಿದಿರಾ ಈ ವಿಚಿತ್ರ? ಕೆಂಪಮ್ಮನ ಜೊತೆಯಲ್ಲಿ ನನಗೂ ಮರ್ಯಾದೆ?” ಎಂದು ಸೀರೆ ರವಿಕೆಗಳನ್ನು ತೋರಿಸಿದಳು. ಫಲತಾಂಬೂಲದಲ್ಲಿ ದಕ್ಷಿಣೆಯಾಗಿ ಒಂದು ಹಸುರು ನೋಟಿತ್ತು.
ಗಂಡನು ತಲೆಯಲ್ಲಾಡಿಸುತ್ತಾ “ಕಾರಣವಿದೆ ” ಎಂದನು.
” ಏನು ?”
“ಏನೇನು? ನೀನು ಮರ್ಯಾದೆಗೆ ಕೆಂಪಮ್ಮನಿಗಿಂತ ಅರ್ಹಳು ಎಂದು.”
“ಹಾಗಂದರೆ ? ” ನಾವು ಆಗ ಮಗುವನ್ನು ಕೊಟ್ಟು ಬಿಟ್ಟಿವಲ್ಲ?”
” ಹೂಂ ”
“ಆ ಮಗುವೇ ಮಲ್ಲಿ!”
“ನಿಜವಾಗಿ ?”
“ಖಂಡಿತವಾಗಿ.”
ಆನಂದಮ್ಮನು ತಾಂಬೂಲಾದಿಗಳನ್ನೆಲ್ಲ ಅತ್ತಿಟ್ಟು ಬಂದು ಗಂಡನ ಮಗ್ಗುಲಲ್ಲಿ ಕುಳಿತು ಆತುರದಿಂದ ಅವನ ಉತ್ತರದ ಮೇಲೆ ಪ್ರಾಣವು ನಿಂತಿರುವುದೋ ಎಂಬಂತೆ, ಯಾರಾದರೂ ಕೇಳಿಯಾರು ಎಂಬ ದಿಗಿಲಿ ನಿಂದರೋ ಎಂಬಂತೆ ಸಣ್ಣಗೆ ” ಯಾರು ಹೇಳಿದರು?” ಎಂದು ಕೇಳಿದಳು.
“ಯಾರು ಹೇಳಬೇಕೋ ಅವನೇ ಹೇಳಿದ. ಅವೊತ್ತು ಮಗು ತೆಗೆದುಕೊಂಡು ಹೋದ ದೊಂಬರವನು ಇವೊತ್ತು ದೊಂಬಿಯಲ್ಲಿ ಸಿಕ್ಕಿದ. ಅವನು ಆ ಮಗುವನ್ನು ಕೆಂಪಿಗೆ ಒಂದು ಸೀರೆಗೆ ಮಾರಿದ ನಂತೆ.”
ಆನಂದಮ್ಮನು ಒಂದು ಗಳಿಗೆ ಹಾಗೇ ಕುಳಿತುಬಿಟ್ಟಳು. ಗಂಡನು ಅವಳನ್ನು ಮೆಲ್ಲಗೆ ಹೆತ್ತಿರಕ್ಕೆ ಎಳೆದು ಕೂರಿಸಿಕೊಂಡನು. ಅವಳು ಅವನ ಎದೆಯ ಮೇಲೆ ತಲೆಯನ್ನು ಇಟ್ಟುಕೊಂಡು ನೀರವವಾಗಿ ರೋದಿಸಿದಳು.
ಗಂಡನೂ ಕಣ್ಣಲ್ಲಿ ಉದುರುತ್ತಿರುವ ಹನಿಗಳನ್ನು ಒರೆಸಿ ಕೊಳ್ಳುತ್ತ, ಅವಳ ತಲೆಯನ್ನು ಸವರುತ್ತಾ “ಇರಲಿ ಎಂದರೆ ನನ್ನ ಮಾತು ಕೇಳದೆ ಹೋದೆ? ಎಂದು ಸಣ್ಣಗೆ ಹೇಳಿದನು.
ಒಂದು ಗಳಿಗೆಯಾದ ಮೇಲೆ ಹೆಂಡತಿಯು “ಹೋಗಲಿ ಬಿಡಿ, ನಮ್ಮಲ್ಲಿ ಇದ್ದಿದ್ದರೆ ಯಾವ ಬಡಮುಂಡೇದರ ಪಾಲಾಗುತ್ತಿತ್ತೊ ? ಚೆನ್ನಾಗಿ ಬದುಕಲಿ” ಎಂದಳು.
ಮತ್ತೆ ಒಂದು ಕ್ಷಣ ಆದಮೇಲೆ, “ಈ ಸುದ್ದಿ ಅವರಿಗೂ ತಿಳಿದಿರ ಬಹುದೇ ?” ಎಂದು ಕೇಳಿದಳು.
“ಅವರಿಗೆ ಎಂದರೆ?”
” ಕೆಂಪಮ್ಮ ಮಲ್ಲಣ್ಣನವರಿಗೆ, ನಾಯಕರಿಗೆ ??
“ಅವನು ಹೇಳಿದ್ದರಲ್ಲಿ ಮಲ್ಲಣ್ಣನಿಗೆ ಗೊತ್ತಾದಂತೆ ಇದೆ. ನಾಯಕನಿಗೂ ಗೊತ್ತಿರಬೇಕು. ಇಲ್ಲದಿದ್ದರೆ ಇದಕ್ಕೆಲ್ಲಾ ಕಾರಣ?”
” ಇರಬಹುದು. ಅಯ್ಯೋ ! ಗತಿ ?”
” ಗತಿ ಏನು? ನಾಯಕನ ಸಮೀಪ ಬಂಧುಗಳಾದರೂ ಯಾರೋ ದೂರದವರಂತೆ ಇರುವುದು.?
” ಅಯ್ಯೋ ಅದಿರಲಿ, ಅವರಿಗೆಲ್ಲಾ ಮೊಕ ತೋರಿಸುವುದು ಹೇಗೆ ಅಂದರೆ?”
ಗಂಡನು “ಹೀಗೆ !” ಎಂದು ಅವಳನ್ನು ಥಟ್ಟನೆ ತಬ್ಬಿಕೊಂಡನು.
“ದೀಪ ಅಂದರೆ ! ಬಾಗಿಲು ತೆಗೆದಿದೆ. ಅಂದರೆ!” ಎಂದು ಆನಂದಮ್ಮನು ಅಡ್ಡನುಡಿದಳು.
*****