ಉಲಪೀ ಸುಂಗಾ ಬಿಟ್ಟೀದಾನೆ ಜನಪಿನ ಪಂಜೀ ಉಟ್ಟೀದಾನೆ ಕೈಲ ತೊವಲ ಕಟ್ಟಿಯದಾನೆ || ೧ || ವಾರ್‍ನಾಸ ಹಚ್ಚಿಯದಾನೆ ಯೇನ ಮಾಡಲೇ ಅಕ್ಕಾ ನಾನ್ ಕರೆಯಾಲೇನೆ? || ೨ || ಕರದರ ಬಂದಾನೇನೇ? ಬಂದರೆ ಜೋಲೀ ಹೋಡಿಯಾಲೇನೆ? ಯೇನಾರ ಅಂದಾನೇನೇ? || ೩ || ***** ಈ...

ಕಾರಾಪುರದ ಖೆಡಾ ಕ್ಯಾಂಫೂ ಎಂದರೆ ಜಗತ್ಪ್ರಸಿದ್ಧವಾದುದು. ಆನೆಗಳ ಹಿಂಡನ್ನು ಅಟ್ಟಿಕೊಂಡು ಬಂದು ಒಂದು ಆವರಣದಲ್ಲಿ ಸೋಲಿಗರು ಸೇರಿಸುವರು. ಕಾಡಿನಲ್ಲಿ ಅಂಕೆಶಂಕೆಗಳಿಲ್ಲದೆ ನಿರಂ ಕುಶವಾಗಿ ಸ್ವೇಚ್ಛೆಯಾಗಿ ಬೆಳೆದ ಆನೆಗಳು ಮನುಷ್ಯನ ಬುದ್ಧಿ ಶಕ್ತಿಯ...

ಕ್ಷಣ ಕ್ಷಣ ನಿನ್ನ ಬಾಳಿನಿಂದ ಉರುಳದಿರಲಿ ಕ್ಷಣ ಕಳೆದ ಹಾಗೆ ಸಾವಿನತ್ತ ಧಾವಿಸುವೆ ಮತ್ತೆ ಮತ್ತೆ ಮರೆತು ದೇವರಿಗೆ ಜೀವನವೇ ಸುಂದರವೆಂದು ಭಾವಿಸುವೆ ಆನಂದಕ್ಕಾಗಿ ಆನಂದವನ್ನು ಮರೆತಿರುವೆ ಹಗಲಿರುಳು ಚಂಚಲ ನಾಗಿರುವೆ ಅತೃಪ್ತಿ ಅಟ್ಟಹಾಸಗಳಲಿ ಮೆರೆದ...

ಇಂತೊರೆದ ಕುಡಿಕೆ ತಾಂ ಪಿಂತೊಂದು ಜನ್ಮದಲಿ ಉಸಿರಿಡುತ ಕೂರ್‍ಮೆಯಿಂ ಬಾಳ್ದುದಿರಬಹುದು; ಎನ್ನ ತುಟಿ ಸೋಂಕಿದಾ ತಣ್ಪುಳ್ಳ ನುಣ್ದುಟಿಯ ದೆನಿಸು ಮುತ್ತನು ಕೊಟ್ಟು, ಎನಿಸ ಕೊಂಡಿತ್ತೋ! *****...

ಯರಲವವೆಂಬುದು ಸತ್ಯ ಯರಲವವೆಂಬುದೆ ನಿತ್ಯ ಉಳಿದದ್ದೆಲ್ಲವು ಮಿಥ್ಯ ಹರಿ ಶಂಭೋಶಂಕರ ಅ ಆ ಇ ಈ ಮಿಥ್ಯ ಎ ಏ ಐಯೂ ಮಿಥ್ಯ ಋ ೠ ಎಂಬುದು ಮಿಥ್ಯ ಒ ಓ ಔವೂ ಮಿಥ್ಯ ಅಂ ಅಃ ಭಾರೀ ಮಿಥ್ಯ ಯರಲವವೆಂಬುದೆ ಸತ್ಯ ಉಳಿದದ್ದೆಲ್ಲವು ಮಿಥ್ಯ ಹರಿ ಶಂಭೋಶಂಕರ ಕ ಖ ಗ ...

ಬಾನ ಬಣ್ಣ ಮಾಗಿಸಿ ಶಶಿ ಮೂಡುತಿಹನದೋ. ಸಂಜೆ ಹೂವನೆರಚಿ ಸಾರೆ ನಮ್ರವಾಗಿ ತಾರೆ ತೋರೆ ಶರದದಿರುಳ ಕರವ ಪಿಡಿದು ಏರುತಿಹನದೋ. ಉದ್ಯಾನದ ಪುಷ್ಪಬೃಂದ ಲಜ್ಜೆಯ ಸಿರಿ ಹೊಂದಿದಂದ ತೆಳು ಬೆಳಕಿನ ಮೇಲುದುವನು ಧರಿಸುವಂತಿದೋ. ತಮವನುಳಿದುವೆನುವ ತೆರದಿ ನಿಡಿ...

ಬರೀ ಮಾತುಗಳು ಇವು ಕೇವಲ ಅರ್ಥಕಳಕೊಂಡ ಶಬ್ದಗಳು ಬೀಜ ನೆಲದಲ್ಲಿ ಹೂತು ಪಸೆಯೊಡೆದು ಮೊಳಕೆ ಕಟ್ಟಿ ಬೇರು ಬಿಡುವತನಕ ಇವು ಅರ್ಥವಿಲ್ಲದ ಕೇವಲ ಮಾತುಗಳು. ಬರೀ ಮಾತುಗಳು ಇವು ಉಗುಳಿನ ವಿಷಕ್ಕೆ ನಂಜೇರಿದ ಮಹಾತ್ಮನ ಶಾಂತಿ ಮಂತ್ರದ ಬೀಜ ಮೊಳಕೆಯೊಡೆಯಲಿಲ...

‘ಸಾರ್‍ಸ್’ ಎಂಬ ಸಾಂಕ್ರಾಮಿಕ ಮಾರಕ ರೋಗಕ್ಕೆ ಮದ್ದಿಲ್ಲ ಎಂಬ ಮಾತು ಇನ್ನು ಕೇಳುವಂತಿಲ್ಲ. ಚೀನಾದ ವಿಜ್ಞಾನಿಗಳು ಕೊನೆಗೂ ಸಾರ್‍ಸ್‌ಗೆ ಲಸಿಕೆ ಕಂಡು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಈ ಲಸಿಕೆಯನ್ನು ಬೀಜಿಂಗ್‌‌ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚ...

ಶ್ರೀಮದಮಲ ವಚಃಪರಿಧಿಯಾ ದೀ ಮಹಾಕೃತಿಯಿಂದೊಲವು ಮಿಗೆ ವ್ಯೋಮದಲಿ ವಿಧು ವೇಡಿಸಿದ ಪರಿವೇಷದಿಂದೆರೆವ| ಕೌಮುದಿಯೊಲೀ ಕನ್ನಡದೊಳಾ ಸೀಮಮೆನೆ ನೆಲಸಿಹುದಿದಂ ನೆಗ ಳ್ದಾ ಮಹಾಕವಿ ನಿನಗೆ ಕನಿಗಳ ಕವಿಯೆ ವಂದಿಸುವೆ ||೧|| ಮೊದಲ ಮಗನಾ ಶುಕನು ಭಾಗವ ತದ ಪುರಾ...

ಕನ್ನಡಿಗರು ನಾವು ಕನ್ನಡಿಗರು; ಕರ್ಣನಿಗೂ ಕಡಿಮೆ ಇರದ ದಾನಶೂರರು ನಾವು ಕನ್ನಡಿಗರು! ಧೀಮಂತರು ನಾವು ಕನ್ನಡಿಗರು ಕಾವೇರಿಯ ಉಳಿಸಿಕೊಳದ ಹೋದ ಶಕ್ತಿ ಗಳಿಸಿಕೊಳದ ಮಾನ ಹೋದರೂನು ಮಾನ ಉಳಿದುದಂತೆ ನಟಿಸುತಿರುವ ಧೀಮಂತರು ನಾವು ಕನ್ನಡಿಗರು! ಸ್ನೇಹಪರರ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....