ಗುಮ್ಮ ಬಂದನು ಸುಮ್ಮನಿರು ಕಂದ, ಅಬ್ಬಬ್ಬ, ಏನವನ ಕಣ್ಣು? ನಾಲಿಗೆಯೇನು ಕೆಂಪಗಿದೆ, ಕತ್ತಲಲಿ ಕೆಂಡ ಕಂಡಂತೆ ! ಮೆಲ್ಲಗೆ ಬರುವ, ಸದ್ದು ಸದ್ದೆಲೆ ಕಂದ, ಸುಮ್ಮನಿರು, ಅಳಬೇಡ ! ಕೇಳಿ ಇತ್ತಲೆ ಬರುವನೇನೊ ಗುಮ್ಮ; ನಮ್ಮಮ್ಮ ಮುಚ್ಚು ಕಣ್ಣನು, ಮಲಗು, ...

(ಒಂದು ಹೊಸ ಮಾದರಿಯ ಸಲಹೆ) ನಮ್ಮ ಬಡದೇಶದಲ್ಲಿಯ ಜನರ ಪರಿಸ್ಥಿತಿಯನ್ನು ಸುಧಾರಿಸಬೇಕೆಂಬ ಇಚ್ಛೆಯು ಸರಕಾರದ ಹೃದಯದಲ್ಲಿ ವಾಸಿಸುತ್ತಿದ್ದರೂ ಅವರಿಗೆ ಹೆಜ್ಜೆ ಹೆಜ್ಜೆಗೆ ಹಣದ ಕೊರತೆಯು ಅಡ್ಡಬರುತ್ತದೆ. ಯಾವದೇ ಕೆಲಸವನ್ನು ಕೈಕೊಳ್ಳಬೇಕಾದರೂ “ಸರ್ವಾ...

ಅತ್ತಲಾ ಹೊಟ್ಟೆಯನ್ನದ ಭಾಂಗಿಯನವರ ಬೆನ್ನಿನಲಿ ಹೊತ್ತವರು ಹೊತ್ತು ಕಳೆಯಲು ಬೆಟ್ಟವನು ಹತ್ತಿರಲಿತ್ತಲಾ ಹೊಟ್ಟೆಯನ್ನವ ಬೆಳೆವವರು ಹೊತ್ತು ಸೋತಿಹರಲಾ ವಿಷಭಾಂಡವನವರ ಬೆನ್ನಿನಲಿ ವಿತ್ತ ಚೇಷ್ಟೆಯೊಳೆಲ್ಲ ವಿಷವೆಲ್ಲರಾ ಚಿತ್ತದಲ್ಲಿ – ವಿಜ್ಞಾ...

ಎತ್ತು ಕಾಯೋ ತಮ್ಮ ಮುತ್ತಿನ ಬಿಲ್ಲವನೇ ಎತ್ತಿಗೇ ನೀರೆಲ್ಲೀ ಕೊಡಿಸಿದಿಯೋಲಾದರೇ ದೇವರ ಕೇರಿಯಲ್ಲಿ ಕುಡಿಸೀಯೋ ಕೋಲೇ ಕುಡಿಸಿದಿಯೋಲಾದಾರೆ ಎತ್ತನು ಹೊಡೀರಣ್ಣಾ ಮಾರೀ ಬೈಲಿಗೆ ಕೋಲೇ || ೧ || ಕೋಣಾ ಕಾಯೋ ತಮ್ಮ ಮುತಿನ್ತ ಬಿಲ್ಲವನೇ ಕೋಣಗೇ ನೀರೆಲ್ಲಿ...

ಮೇರಿಯಸ್ಸಸ ಕೊಠಡಿಯಲ್ಲಿರುವಾಗ ಜಾಂಡ್ರೆಟ್ಟನ ಮಗಳು ಬಂದು, ಲೇಖನಿಯನ್ನು ತೆಗೆದುಕೊಂಡು, ಒಂದು ಬರಿಯ ಕಾಗದದ ಮೇಲೆ ‘ಪೊಲೀಸಿನವರು ಬಂದಿದ್ದಾರೆ,’ ಎಂದು ಬರೆದು, ತನಗೆ ಬರೆಯುವುದಕ್ಕೆ ಬರುವುದೆಂಬುದನ್ನು ಮೇರಿಯಸ್ಸನಿಗೆ ತೋರಿಸುವುದಕ...

ರಾಮಾ ಎನ್ನ ಮನವ ಸಂತೈಸು ಕಾಮಕ್ರೋಧದೀ ಮನ ನಿತ್ಯವೂ ಮಲಿನವಾಗದಂತೆ ಮಾಡಲಿ ನಿನ್ನ ನಮನ ಎಂದಿಗಾಗೂವುದೊ ನಿನ್ನ ಆ ದಿವ್ಯ ದರುಶನ ಪ್ರಭು ನಿನ್ನ ನಿತ್ಯ ನಿತ್ಯವು ಧ್ಯಾನಿಸಿ ಹೃದಯವು ಬೆಳಗಲಿ ಪ್ರಭು ಜನುಮ ಜನುಮಗಳೆಲ್ಲ ವಿಷಯ ಸುಖಗಳಲಿ ಬೆಂದು ಕರಗಿ ಹ...

ಕಾಲದ ಸಾಗರದಲ್ಲಿ ನಮ್ಮ ಜೀವನದ ಡೋಣಿ ತೇಲುತ್ತಾ ಮುಂದೆ ಸಾಗುವಾಗ ಕಷ್ಟ ಪರಂಪರೆ ಮಾನವನಿಗೆ ಬೆನ್ನಟ್ಟಿ ಬರುತ್ತವೆ. ಹೆಜ್ಜೆ ಹೆಜ್ಜೆಗೂ ಕಷ್ಟ-ದುಃಖಗಳು ನಮ್ಮನ್ನು ಕಾಡುವಾಗ ಎದೆಗುಂದದೆ ಅವುಗಳನ್ನು ಎದುರಿಸುವ ಆತ್ಮವಿಶ್ವಾಸ, ಆತ್ಮಸ್ಥೆರ್ಯ ನಾವು ...

ಚಂದ್ರಚುಂಬಿತ ಯಾಮಿನೀ ನವವಿರಹಿ ಚಿತ್ತೋನ್ಮಾದಿನೀ, ಜಾರುತಿದೆ ಕಲನಾದಿನೀ, ಅದೊ! ಹಾಡುತಿರುವಳು ಕಾಮಿನೀ. ತರುಣಿ ವೀಣೆಯ ಮಿಡಿವಳು ತಚ್ಛ್ರುತಿಗೆ ವಾಣಿಯನೆಳೆವಳು- ಮಧುರಗೀತದ ನುಡಿಯೊಳು ತನ್ನೆದೆಯ ಭಾವವ ಮೊಗೆವಳು: ಒಲುಮೆ ಹೃದಯವ ಹೊಗಲು ಬಯಸಲು ಆರ...

ಹಣಿಯೆಂಬೊ ಭಾಂವಕ ಹೆಣಿಯಂದ ದಂಡೀಯ| ಮಗ್ಗಿ ತಿರುವಂದ ಮಲಕೀಲಿ| ಸೋ ಎನ್ನೀರೆ ||೧|| ಹುಬ್ಬಂಬು ಭಾಂವಕ ತಿದ್ದೊಂದ ದಂಡೀಯ| ಗೊನಿಯ ತಿರುವಂದ ಮಲಕೀಲಿ| ಸೋ… ||೨|| ಕಡಗಽವ ಇಡಸ್ಯಾರ ಕಡಗಣ್ಣಿಲಿ ನೋಡ್ಯಾರ| ಕೊಡವೀಗಿ ತಮಗ ವರನೆಂದ| ಸೋ…...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...