ಸರಕಾರದ ಆದಾಯವನ್ನು ಹೇಗೆ ಹೆಚ್ಚಿಸಬೇಕು

ಸರಕಾರದ ಆದಾಯವನ್ನು ಹೇಗೆ ಹೆಚ್ಚಿಸಬೇಕು

(ಒಂದು ಹೊಸ ಮಾದರಿಯ ಸಲಹೆ)
ನಮ್ಮ ಬಡದೇಶದಲ್ಲಿಯ ಜನರ ಪರಿಸ್ಥಿತಿಯನ್ನು ಸುಧಾರಿಸಬೇಕೆಂಬ ಇಚ್ಛೆಯು ಸರಕಾರದ ಹೃದಯದಲ್ಲಿ ವಾಸಿಸುತ್ತಿದ್ದರೂ ಅವರಿಗೆ ಹೆಜ್ಜೆ ಹೆಜ್ಜೆಗೆ ಹಣದ ಕೊರತೆಯು ಅಡ್ಡಬರುತ್ತದೆ. ಯಾವದೇ ಕೆಲಸವನ್ನು ಕೈಕೊಳ್ಳಬೇಕಾದರೂ “ಸರ್ವಾರಂಭಾಃ ತಂಡುಲಃ ಪ್ರಸ್ತಮೂಲಾಃ” ಎಂಬ ನಾಣ್ನುಡಿಯಂತೆ ಹಣವಿಲ್ಲದೆ ಮುಂದೆ ಹೆಜ್ಜೆ ಇಡಲಾಗದು. ಹಣವಿಲ್ಲದ ಮೂಲಕವೇ ಸರಕಾರದ ಆಕಾಂಕ್ಷೆಗಳು ಪೂರ್ತಿಗೊಳ್ಳದೆ ಮನಸಿನಲ್ಲಿಯೆ ಕರಗಹತ್ತಿವೆ. ಜನರ ಹಿತಕ್ಕಾಗಿ ಕೊರಗುವ ಇಂಥ ಸರಕಾರಕ್ಕೆ ಹಣ ದೊರಕಿಸುವ ಕೆಲ ಮಾರ್ಗಗಳನು ಸೂಚಿಸಬಯಸುತ್ತೇವೆ. ಈ ಮಾರ್ಗಗಳು ಕೆಲಜನರಿಗೆ ಹೊಸವು ಕಂಡರೂ ಸರಕಾರಕ್ಕೆ ಅವೇನು ಹೊಸವಲ್ಲ. ಆದ್ದರಿಂದ ನಾವಾದರೂ ಒಳ್ಳೇ ಧೈರ್ಯದಿಂದ ಈ ಮಾರ್ಗಗಳನ್ನು ವಿವವರಿಸುತ್ತೇವೆ.

ಈ ಸೂಚನೆಗಳನ್ನು ಓದಿ ಸರಕಾರಿ ನೋಕರಿಯಲ್ಲಿದ್ದ ನಮ್ಮ ಅನೇಕ ಮಿತ್ರರಿಗೆ ಸಿಟ್ಟು ಬರಬಹುದು. ನೋಕರಿಯಲ್ಲಿ ಸೇರಿದಂದಿನಿಂದಾ ಜನರಿಂದಾಗಲೀ, ಅನ್ಯಾಯದಿಂದಾಗಲಿ ಒಂದು ಕಾಸು ಸಹ ತಕ್ಕೊಳ್ಳದೆ ಧರ್ಮರಾಜನಂತೆ ಪ್ರಾಮಾಣಕತನದಿಂದ ನೋಕರೀ ಮಾಡುತ್ತಿದ್ದರೂ ತಮ್ಮ ಬಗ್ಗೆ ಈ ಬಗೆಯ ಲೇಖನನ್ನು ಓದಿದರೆ, ಕೆಲ ನೋಕರರಿಗೆ ಕೆಡಕನಿಸುವದು ಸಹಜವದೆ. ಇಂಥ ನೋಕರ ಜನರು ಈ ನಮ್ಮ ಕಲಿಯುಗದಲ್ಲಿ ಅಪವಾದಾತ್ಮಕವಾಗಿರುವರು. ನಿಜವಾಗಿ ಅವರು ದ್ವಾಪರ ಅಥವಾ ಕೃತಯುಗದಲ್ಲಿ ರಾಮರಾಜರ ಅಥವಾ ಧರ್ಮರಾಜರ ಸಂಸ್ಥಾನದಲ್ಲಿ ನೋಕರರಾಗಿರಬೇಕಾಗಿತ್ತು. ಈ ನಮ್ಮ ಕಲಿಯುಗದಲ್ಲಿ ಅವರಿಗೆ ಸ್ಥಾನವೇ ಇಲ್ಲ. ಅವರು ಈಗ ನೋಕರಿ ಮಾಡುವದೆಂದರೆ ಚಹಾದಲ್ಲಿ ಯಾಲಕ್ಕಿ ಕೂಡಿಸಿದಂತೆ ವಿಸಂಗತವಾಗುವದು. ಇರಲಿ.

ನಾವು ಈ ಲೇಖದಲ್ಲಿ ಸರಕಾರೀ ನೋಕರರು ಲಂಚವನ್ನು ಸಾಕಷ್ಟು ಹೊಟ್ಟೆತುಂಬಿ ಮನೆ ತುಂಬುವವರೆಗೆ ತಿಂಬುವರೆಂದು ಕಾಣಿಸಿದ್ದೇವೆ. ಜನರು ತಾವಾಗಿಯೆ ಕೊಟ್ಟರೆ ಹೇಗೆ ಬಿಡಬೇಕು? ಗಂಗಾಪ್ರವಾಹ ಹರಿದು ಕೊಂದು ಮೈಮೇಲೆ ಬಂದರೆ ಗಂಗಾಸ್ನಾನದ ಪುಣ್ಯವನ್ನು ಪಡೆಯಲಿಕ್ಕೇ ಬೇಕು. ಅಲ್ಲದೆ ಹೋದರೆ ಹೇಡಿಯೆಂದು ಹುದ್ದೆ ದೊರೆಯುವದು. ಹೀಗೆ ಎಷ್ಟೋ ಅಧಿಕಾರಿಗಳು ಅನ್ನುವದುಂಟು. ನಾವಾದರೂ ಈ ಮಾತನ್ನು ಅರಿತುಕೊಂಡೇ ಸೂಚನೆಗಳನ್ನು ಕೊಟ್ಟಿದ್ದೇವೆ.

ತಮ್ಮ ಎಲ್ಲ ನೋಕರದಾರರ ಪಗಾರವು ಪ್ರತಿ ತಿಂಗಳ ಲಕ್ಷಗಟ್ಲೆ ಆಗುವದೆಂದೂ ಮತ್ತು ತುಟ್ಟೀ ಕುಲದಲ್ಲಿ ಆ ಪಗಾರವನ್ನು ಅಷ್ಟೇ ಅಲ್ಲ ಪೆನಶನ್‌ ಜನರ ಪೆನಶನ್ ಹೆಚ್ಚಿಸಿದ್ದರಿಂದ ಪ್ರತಿ ತಿ೦ಗಳಿಗೆ ಸರಕಾರಕ್ಕೆ ಲಕ್ಷಗಟ್ಟಲೆ ವೆಚ್ಚವಾಗುವದೆಂಬುದು ನಿಜ. ಆದರೆ ಈ ಪಗಾರದ ವೆಚ್ಚವೇ ಈ ಕಾಲದಲ್ಲಿ ಸರಕಾರದ ಮೇಲೆ ಬೀಳತಕ್ಕದಲ್ಲವೆಂದು ನನ್ನ ಮತ.

ಅದು ಬೇರೆ ಬೇರೆ ಖಾತೆಗಳಲ್ಲಿಯ ಬೇರೆ ಬೇರೆ ಹುದ್ದೇದಾರರ ಯಾದೀ ಮಾಡತಕ್ಕದ್ದು. ಮತ್ತು ಆಯಾ ಹುದ್ದೆಯ ಮುಂದೆ ಅವರವರೆ ಯೋಗ್ಯತೆಯ ಪ್ರಕಾರ ದೊಡ್ಡ ಸಣ್ಣ ರಕಮು ಕಾಣಿಸಬೇಕು. ಈ ಹಣವು ಸೆರಸಿಂದಿಗಳ ಲಿಲಾವುಗಳಲ್ಲಿ ಸರಕಾರಿ ಸವಾಲದಂತೆ ಒಂದು ಅಂಕಿ ಗೊತ್ತುಮಾಡಿರುತ್ತದೆ. ಅಂದರೆ ಕನಿಷ್ಟ ಪಕ್ಷಕ್ಕೆ ಅಷ್ಟಾದರೂ ಬರಬೇಕೆಂದು ಸರಕಾರದೆ ಆಶೆಯಿರುತ್ತದೆ. ಮತ್ತು ಈ ರಕಮಿಗೆ ಬೇಡಿ, ಯಾವನು ಲಿಲಾವಿನಲ್ಲಿ ಆ ಹುದ್ದೆಯ ಮಕ್ತೆ ಹಿಡಿಯುವನೋ ಆವನಿಗೆ ಆ ಹುದ್ದೆಯ ಮಕ್ತೆ ಕೊಡತಕ್ಕದ್ದು. ಒಂದೇ ಸ್ಥಳದಿಂದ ಅಥವಾ ಒಂದೇ ಹುದ್ದೇದಿಂದ ಮೇಲಿಂದ ಮೇಲೆ ಬದಲೀ ಮಾಡಿದರೆ ಆ ಹುದ್ದೇದಾರನಿಗೆ ಅದರ ಫಾಯದೆ ಸಾಕಷ್ಟು ಮುಟ್ಟುವದಿಲ್ಲ. ಆದ್ದರಿಂದ ಈ ಮಕ್ತೆಗಳ ಲಿಲಾವುಗಳನ್ನು ಮೂರುವರ್ಷದ ಬಗ್ಗೆ ಮಾಡತಕ್ಕದ್ದು. ಮೂರು ವರ್ಷ ಕಳೆದ ಮೇಲೆ ಲಿಲಾವುದಾರನಿಗೆ ಲಿಲಾವಿನಲ್ಲಿ ಬೇರೆ ಸ್ತಳದಲ್ಲಿಯ ಬೇರೆ ಹುದ್ದೆಗಳನ್ನು ಬೇಡಲಿಕ್ಕೆ ಪರವಾನಗಿ ಕೊಡಬೇಕು. ಯಾಕೆಂದರೆ ನಮ್ಮ ಜಿಲ್ಲೆಯಲ್ಲಿಯೇ ನೋಡಿದರೆ ಜಿಲ್ಲೆಯ ಸ್ಥಳವನ್ನು ಬಿಟ್ಟು ದೂರಯಿದ್ದ ಠಾಣೆಗಳಲಿ ಫೌಜದಾರ, ಹವಾಲ್ದಾರ, ನಾಯಿಕ, ಮುಂತಾದವರು ಹೆಚ್ಚು ಸುಖದಿಂದ ಇದ್ದಾರೆ. ಅದರಂತೆ ಲಮಾಣಿ ತಾಂಡೆಗಳ ಹತ್ತರದಲ್ಲಿದ್ದ ಅಬಕಾರೀ ಇನಸ್ಪೆಕ್ಟರರು ಹೆಚ್ಚು ಆನಂದದಿಂದ ಇದ್ದಾರೆ. ಸರಕಾರದವರು ಮಾರಲಿಕ್ಕೆ ಇಟ್ಟ ಕಡಿಮೆ ಶಕ್ತಿಯ ಸರಾಯಿ ಕದಿಯುವ ಪ್ರಸಂಗವು ಅವರ ಮೇಲೆ ಬರುವದಿಲ್ಲ. ಲಮಾಣೀ ಜನರು ಭಟ್ಟಿಯಿಂದ ಮಾಡಿದ ಉತ್ತಮ ಸುರಾಪಾನ ಮಾಡಿ, ಅವರ ವ್ಯಾಪಾರದಲ್ಲಿ ಪಾಲಿಟ್ಟು ಯಾವನಾದರೂ ಮೂರು ತಿ೦ಗಳಿಗೊಮ್ಮೆ ಆ ಜನರ ಅನುಮತಿಯಿಂದಲೇ ಒಬ್ಬನನ್ನು ಹಿಡಿದು ತಮ್ಮ ಕೆಲಸದಲ್ಲಿ ಕೃತಕೃತ್ಯರಾಗುತ್ತಾರೆ. ಈ ಎಲ್ಲ ಸಂಗತಿಗಳನ್ನು ವಿಚಾರ ಮಾಡಿದರೆ ಅದೇ ಅಮಲ್ದಾರನನ್ನು ಅದೇ ಸ್ಥಳದಲ್ಲಿ ಕಾಯಂ ಇಡುವದು, ಆತನ ದೃಷ್ಟಿಯಿಂದಾಗಲಿ ಅಥವ ಸರಕಾರ ದೃಷ್ಟಿಯಿಂದಾಗಲಿ ಫಾಯದೇಸೀರ ಆಗುವದಿಲ್ಲ.

ಸರಕಾರದವರು ಹೇಗೆ ಹೇಗೆ ಹೊಸ ಖಾತೇಗಳನ್ನು ನಿರ್ಮಿಸುವರೋ ಹಾಗೆ ಲಂಚಗೂಳಿನವು ಹೆಚ್ಚಾಗಿದೆ. ಈಗ ಹೊಸದಾಗಿ ಜನಿಸಿದ ಪೂರೈಕೆ ಖಾತೆ ಮತ್ತು ಸೀದಾ ಖಾತೆಗಳನ್ನು ವಿಚಾರಿಸುವಾ. ಆ ಖಾತೆಯ ಕಾಯದೆಗಳು ಬಹಳ ಒತ್ತರದಿಂದ ಬದಲಾಗುತ್ತವೆ. ಹಿಂದಕ್ಕೆ ಬಾದಶಹನ ಕಾಲಕ್ಕೆ ತಾನು ಕೆಲಸ ಮಾಡಬೇಕಾದ ಒಂದು ಕೋಟೆಯ ಕಡೆಗೆ ಹೊರಟ ಒಬ್ಬ ಸುಬೇದಾರನು ಕುದುರೆಯ ಮೇಲೆ ಬಾಲದ ಕಡೆ ಮಾರಿ ಕುಳಿತಿದ್ದನಂತೆ. ತನ್ನ ಸ್ಥಳದ ಮೇಲೆ ಯಾರಾದರೊಬ್ಬ ಬೇರೆ ಜನರು ನೇಮಕವಾಗುವರೆಂದು ಅವನಿಗೆ ಅಂಜಿಕೆ. ಹಾಗೆಯೇ ಈಗಾದರೂ ಮೇಲಿನ ಖಾತೆಗಳಲ್ಲಿ ಒಂದು ಬಟ್ಟು ಹುಕುಂ ಹೊರಟು ಅದು ಹಳ್ಳಿಗಳಿಗೆ ಮುಟ್ಟುವದರೂಳಗಾಗಿ ಅದರ ವಿರುದ್ಧಾರ್ಥದ ಹುಕುಂಗಳು ಹೊರಡುವವು ಹೀಗಾಗಿ ಆ ಖಾತೆಯಲ್ಲಿ ಹಳ್ಳೀ ಜನರಿಗೆ, ಇಷ್ಟೇ ಅಲ್ಲ, ನಿಜವಾಗಿ ವಕೀಲರಿಗೂ ಮತ್ತು ಮ್ಯಜಸ್ಟ್ರೇಟರಿಗೂ, ಅದರಂತೆ ಮಾಮಲೇದಾರರಿಗೂ ಮೇಲಿನಿಂದ ಹೊರಟ ಹುಕುಂಗಳು ಗೊತ್ತಿರುವದಿಲ್ಲ. ಅದರಿಂದ ಲಕ್ಷ್ಮೀವಂತನಾದ ಬೇಕಾದ ರೈತನನ್ನು ತಂದು, ಆತನ ಮೇಲೆ ಆರೋಪಗಳನ್ನು ಹೂರಸಿ ಅವನನ್ನೇ ಕೋರ್ಟಿಗೆ ಎಡತಾಕ ಹಚ್ಚಲು ಅಧವಾ ಕೈದಿಯ ಕೋಣೆಯಲ್ಲಿ ಕೊಳಿಸಲು ಬಿಟ್ಟು ಬಿಡಲಿಕ್ಕೆ ಯಾವ ಅಮಲ್ದಾರನಿಗಾದರೂ ಸಹಜವಾಗಿ ಹೋಗಿದೆ. ಯಾವ ವಸ್ತುಗಳ ದೆಸೆಯಿಂದ ಯಾವ ಬಗೆಯ ಪರವಾನಗೀ ಅವಶ್ಯಕತೆಯಿಲ್ಲವೋ ಅಂಥ ವಸ್ತುಗಳನ್ನು ಕೊಳ್ಳಲಿಕ್ಕೆ ಮಾರಲಿಕ್ಕೆ ಜಿಲ್ಹೆಯ ಒಳಗೆ ತರಿಸಲಿಕ್ಕೆ ಅಥವಾ ಜಿಲ್ಹೆಯ ಹೊರಗೆ ಒಯ್ಯಲಿಕ್ಕೆ ಹೀಗೆ ಯಾವದೇ ಕೆಲಸಕ್ಕಾದರೂ ತಮ್ಮ ಅಪ್ಪಣೆ ಪಡೆಯಬೇಕೆಂದು ಹೇಳಿ ಲಕ್ಷ್ಮಿಯನ್ನೆ ವಶಮಾಡಿಕೊಳ್ಳಲು ಠಾಣೆಯ ಸಿಪಾಯಿಯಿಂದ ಮಾಮಲೇದಾರರ ವರೆಗೆ ಯಾರಿಗಾದರೂ ಬರುವದು. ಇಂಥ ಕಾಯದೆಗಳು ಅಮಲಿನಲ್ಲಿರುವಾಗ ತಮ್ಮ ನೋಕರ ಜನರ ಸಂಬಳದ ಒಗ್ಗೆ ವೆಚ್ಚ ಮಾಡುವದೆಂದರೆ ಕೇವಲ ಹುಚ್ಚುತನದ ಕೆಲಸ. ಇದರಲ್ಲಿ ಎಷ್ಟೋ ಇನಕಂಟಾಕ್ಸ ಅಮಲ್ದಾರರ ಹೇಳಿಕೆ ಲಕ್ಷ್ಯದಿಂದ ಅಭ್ಯಶಿಸುವಂಥದಿರುತ್ತದೆ. ಒಬ್ಬ ವ್ಯಾಪಾರಿಯು ತನ್ನ ವ್ಯಾಪಾರದಲ್ಲಿ ಎರಡೇ ಸಾವಿರ ಫಾಯದೆ ಅಗಿದೆ ಎಂದು ಲೆಕ್ಕದಿಂದ ತೋರಿಸಿದರೂ ಅವನಿಗೆ ಕಳ್ಳಪೇಟೆಯಲ್ಲಿ ಕನಿಷ್ಟ ಪಕ್ಷಕ್ಕೆ ಹತ್ತುಸಾವಿರವಾದರೂ ಲಾಭವಾಗಿರಬೇಕೆಂದು ಆಕಾರದ ಪ್ರಮಾಣವನ್ನು ಗೊತ್ತುಪಡಿಸುತ್ತಾರೆ. ವ್ಯಾಪಾರಸ್ಥರು ಕಳ್ಳ ಪೇಟೆಯಲ್ಲಿ ಹಣ ತಿಂದರೆ ಅಮಲ್ದಾರನು ಏಕೆ ತಿನ್ನಬಾರದು?

ಸದ್ಯಕ್ಕೆ ಇಲ್ಲಿಯ ವ್ಯಾಪಾರಸ್ಥರನ್ನು ಬದಿಗಿರಿಸಿ, ತಮ್ಮ ದೇಶದ ವ್ಯಾಪಾರಸ್ಥರಿಗೆ ಮತ್ತು ಜನರಿಗೆ ಎಲ್ಲ ಬಗೆಯ ಲಾಭ ಮುಟ್ಟಬೇಕೆಂಬ ಇಚ್ಛೆಯಿಂದ ಹಿಂದುಸ್ತಾನದಲ್ಲಿ ವ್ಯಾಪಾರ ಹೂಡಿದ ಇಂಗ್ಲಂಡದ ‘United ಕಿಂಗಡಮ್‌ ಸರಕಾರ ಕಮರ್ಶಯಲ್‌’ (U.K.C.C). ಅವರಿಗೆ ತಮ್ಮ ವ್ಯಪಾರವನ್ನು ಒಪ್ಪಿಸಿರುವದು. ಎಲ್ಲರಿಗೂ ಗೊತ್ತೇ ಇದೆ. ಆದ್ದರಿಂದ ನಾವು ಹೇಳಿದ ಸೂಚನೆಯಾದರೂ ಸರಕಾರಕ್ಕೆ ಸಲ್ಲುವದೆಂದು ಆಶೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ತೆ ವಿಷ ಹೊರುವುದನೆ ಕೌಶಲವೆನಬಹುದೇ?
Next post ಗುಮ್ಮ

ಸಣ್ಣ ಕತೆ

 • ಬಸವನ ನಾಡಿನಲಿ

  ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಸಾವು

  ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys