ಆಶ್ರಮದಲ್ಲಿ ಅರಳಿಯ ಮರದ ಕೆಳಗೆ ಒಂದು ಜಿಂಕೆಯ ಚರ್‍ಮದ ಮೇಲೆ ವಿಶ್ವಾಮಿತ್ರರು ಕುಳಿತಿದ್ದರು. ಆಗ ಒಬ್ಬ ಹುಡುಗನು ಏದುತ್ತಾ ಓಡಿಬಂದು ಅವರ ಕಾಲಿಗೆ ಬಿದ್ದನು. ಅವರೂ “ಯಾರು? ಶುನಶ್ಶೇಫನೇನೋ? ಎಲಾ! ಕೊನೆಗೆ ಬದುಕಿಕೂಂಡೆಯಾ? ಭಲೆ! ಸಂತೋಷ! ...

`Who breaks a butterfly upon a wheel?’ -Pope ಚಳಿಗೆ ಕಾತರಗೊಂಡು ರಾಜವೀಧಿಯಲಲೆದು ನೆಲಕಂಟಗೊಂಡ ಬಣ್ಣದ ಚಿಟ್ಟೆಯ ನಸುಕಿನಲಿ ನೋಡಿದೆನು,- ಬಂಡಿಗಾಲಿಯದುರುಳಿ ಕೊಲಲದನು ಮಾಡಿ ಮೂರಾಬಟ್ಟೆಯ. ಬಣ್ಣ ಬಣ್ಣದ ಪಕ್ಕಗಳನು ಮಣ್ಣಾಗಿಸಿದ ನರ...

೧ ಸಾಸಿರ ವಕ್ತ್ರದ ಸಾಸಿರ ನೇತ್ರದ ಸಾಸಿರ ಪದಗಳ ವ್ಯಕ್ತಿ- ಸಾಸಿರ ಚಿತ್ತದ ಸಾಸಿರ ಹೃದಯದ ಸಾಸಿರ ಬುದ್ಧಿಯ ಶಕ್ತಿ! ೨ ಈ ಶಕ್ತಿಯೆ ದಿಟವಿಂದಿನ ದೈವತ, ಪೂಜೆಯಿದಕೆ ಬೇಕು- ಪೂಜೆ ದೊರೆಯದಿರೆ ದೈವತವಲ್ಲಿದು, ದೆವ್ವವಯ್ಯೊ ! ಸಾಕು !! ೩ ಕಲ್ಲು-ಕಂಚು...

‘ಒಂದಾನೊಂದು ಊರಿನಲ್ಲಿ ಒಬ್ಬ ರಾಜ ಇದ್ದ’ (ಅಥವಾ ಇನ್ನು ಯಾರೋ ಇದ್ದರು) ಎಂಬ ಕಥಾರಂಭವನ್ನು ನಾವೆಲ್ಲರೂ ಚಿಕ್ಕಂದಿನಲ್ಲೇ ಕೇಳಿದ್ದೇವೆ. ಇಂಗ್ಲಿಷ್‌ನಲ್ಲಾದರೆ, Once upon a time ‘ಒಂದಾನೊಂದು ಕಾಲದಲ್ಲಿ’ ಎಂದು ಊರ...

  ಬಿಟ್ಟಿದ್ದೆ ಯೆಂಡ ಅಲ್ಲಿ- ನೆಟ್ಗೆ ಬಂದೆ ಇಲ್ಲಿ. ಎಲೇಲೇಲೇ ರಸ್ತೆ! ಯೇನು ಅವ್ವೆವಸ್ತೆ! ಮೈ ಕೈ ಯೆಲ್ಲ ಮುದರಿ ಯಾಕೇ ಕುಣೀತಿ ಕುದರಿ? ಕೊಟ್ಟೆ ಯಲ್ಲ ಗಸ್ತು! ಕುಡಿದ್ದೀಯ ರಸ್ತೆ! ಚಂದ್ರನ್ ಮುಕವೇಕ್ ಸೊಟ್ಟು? ಅದ್ದು! ಬಲಗಣ್ ಛಟ್ಟು! ಉಳ...

ಪರಶುರಾಮನ ಮಹೋತ್ತುಂಗ ದೋರ್‍ದಂಡ ಉ- ದ್ದಂಡ ಸಹ್ಯದಸಹ್ಯ ಸಾಮರ್‍ಥ್ಯದಲಿ ನೀಡಿ- ಕೊಂಡಿದೆ. ಇದೊ ಅಪರಜಲಧಿಯು ಪರಾಜಿತರ ನಯದೊಳಂಭೋದಕಂಭಗಳಿಂದ ರಾಜ್ಯಾಭಿ- ಷೇಕ ಮಾಡುವದು ವರ್‍ಷಕ್ಕೆ. ಸ್ವಚ್ಛಂದನಿ ರ್‍ಬಂಧ ಸ್ವಾತಂತ್ರ್ಯದೊಳು ನೀರೆ ತೀಡುವಳು ಸೀ- ಮ...

ಪ್ರತಿಯೊಬ್ಬರಲ್ಲೂ ಅಸಂಖ್ಯ ಆಸೆಗಳು ಇರುತ್ತವೆ. ಆದರೆ ಎಲ್ಲಾ ಆಸೆಗಳು ಕೈಗೂಡುತ್ತವೆ ಎನ್ನುವ ಗ್ಯಾರಂಟಿ ಮಾತ್ರ ಇಲ್ಲ. ಆಸೆಗಳೆಂಬ ಮರೀಚಿಕೆಯ ಬೆನ್ನು ಹತ್ತಿ ಓಡುತ್ತಿರುವಾಗ ಎಲ್ಲೋ ಒಂದು ಕಡೆ ನಿರಾಸೆ ಕಟ್ಟಿಟ್ಟ ಬುತ್ತಿ. ಪುರಂದರದಾಸರು ಹೇಳಿರುವ...

ಬಯಕೆ ಕಣ್ಣಿನಭ್ಯರ್ಥಿಗಳೆಷ್ಟೊಂದು ಎನ್ನ ಸುತ್ತ ಬಯ್ಕು ಬೇಕೆಂಬ ಮಗನ ಕಣ್ಣೆನ್ನತ್ತ ಬಾಯ್ಬಿಟ್ಟಂಬಾ ಎನುವ ತಾಯಿಗೇನಿಡಲಿ ತುತ್ತ ಹಾಯೆನಲು ಬಂದು ಪೋಪರೊಲೈಕೆಗಿಲ್ಲಾಗಿದೆ ಚಿತ್ತ ಮಾಯೆ ಬಯಕೆಗಳಬ್ಬರಕನ್ನ ಚಿತ್ತ ಹಾವಿನ ಹುತ್ತ – ವಿಜ್ಞಾನೇಶ್...

ದರೆ ಮೇನೆ ಮೀವದೂ ಎತ್ತು | ಅಲ್ಲಿಗೇ ಜಾರೀ ಬಿತ್ತು ನೋ ವನ್ನು ಮೂಗ್ನಲ್ಲಿ ನತ್ತೂ | ಬನವಾಸೀ ಕೆರಿಯಲ್ಲಿ ಬಿತ್ತೂ || ೧ || ಬನವಾಸೀ ಕೆರಿಯಲ್ಲಿ ಬಿತ್ತೂ | ವೈನಾಸಿ ವೈನಾಸಿ ಕೋಲೇ ಗಾಳೀ ಬೀರಾನೋಂದು ಮೇಲೇ || ೨ || ನಾಮ ನಾಮಕೇ ಬಸವಣ್ಣ | ತೇರೂ ತ...

ಇದಾದ ಸ್ವಲ್ಪ ದಿನಗಳಲ್ಲಿಯೇ ಗ್ರಾಮಾಧಿ ಕಾರಿಗೂ ಜೇವರ್ಟ ನಿಗೂ ಪ್ರಬಲವಾದ ಚರ್ಚೆಯು ನಡೆಯಿತು. ಫಾಂಟೈನ್ ಎಂಬ ಬಡ ಹೆಂಗಸು ತನ್ನನ್ನು ಬೀದಿಯಲ್ಲಿ ಅವಮಾನ ಪಡಿಸಿದ ಯಾವ ನೋ ಒಬ್ಬ ಪುರುಷನ ಮೇಲ್ಯರಿದು ಜಗಳವಾಡಿದಳೆಂಬ ತಪ್ಪಿತ ಕ್ಕಾಗಿ ಜೀವರ್ಟನು ಅವಳ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...