Home / ಕವನ / ಕವಿತೆ / ಯೆಂಡದ್ ತೊಂದ್ರೆ

ಯೆಂಡದ್ ತೊಂದ್ರೆ

 

ಬಿಟ್ಟಿದ್ದೆ ಯೆಂಡ ಅಲ್ಲಿ-
ನೆಟ್ಗೆ ಬಂದೆ ಇಲ್ಲಿ.
ಎಲೇಲೇಲೇ ರಸ್ತೆ!
ಯೇನು ಅವ್ವೆವಸ್ತೆ!
ಮೈ ಕೈ ಯೆಲ್ಲ ಮುದರಿ
ಯಾಕೇ ಕುಣೀತಿ ಕುದರಿ?
ಕೊಟ್ಟೆ ಯಲ್ಲ ಗಸ್ತು!
ಕುಡಿದ್ದೀಯ ರಸ್ತೆ!

ಚಂದ್ರನ್ ಮುಕವೇಕ್ ಸೊಟ್ಟು?
ಅದ್ದು! ಬಲಗಣ್ ಛಟ್ಟು!
ಉಳ್ದಿರೋ ಎಡದಾಗಣ್ಣು
ಯೆಚ್ಚಿದ್ ಲಿಂಬೇ ಅಣ್ಣು!
ಏನೋ ಚಂದ್ರ! ಪೆಂಗೆ!
ನಾಚ್ಕೆ ಇಲ್ವೆ ನಿಂಗೆ!
ಕೆಟ್ಟವರ್ ಕುಡಿತಾರ್ ಅಂದ್ರೆ
ನಿಂಗ್ಯಾಕ್ ಎಂಡದ್ ತೊಂದ್ರೆ?

ನೋಡ್ ಅಲ್ಲ್ ಬೀದಿ ದೀಪ-
ಗಿರ್‍ಕಿ ವೊಡೀತ್ ಪಾಪ!
ತಿರ್ ತಿರ್ ತಿರ್ ತರ್ ತಿರ್‍ಗ್ತಾ
ತೂರಾಡ್ತದೆ ತೂಗ್ತಾ!

ಇಲ್ಲ್ ಇರೋ ಒಂದಕ್ಕಾನ
ಸೋದೀನ್ ಇಲ್ಲ ಗ್ನಾನ!
ಸಾಲಾಗ್ ನಿಂತವೆ ನಟ್ಟು-
ಯೆಂಡ ಕುಡದ್ಬುಟ್ಟು! ೩

ದೊಡ್ದು ಚಿಕ್ದು ಎಲ್ಲಾ-
ನೋಡ್ದ ಅವಗೊಳ್ ಗುಲ್ಲ!
ಇವರು ಕುಡದೊರ್ ಮದ್ಧ
ನಂಗೆ ಮಾತ್ರ ಸುದ್ಧ!
ಯೆಂಡ ಕುಡದೊರ್ ನಡಮೆ
ನಮಗೆ ಮಾನಕ್ ಕಡಮೆ!
ಯೆಂಡದ್ ಅಂಗಡೀಗಾನ
ಅದಕೇ ಇಂತಿರಗೋನ! ೪
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...