ತಂದೆಯೂ ಮಕ್ಕಳೂ

ತಂದೆಯೂ ಮಕ್ಕಳೂ

ಆಶ್ರಮದಲ್ಲಿ ಅರಳಿಯ ಮರದ ಕೆಳಗೆ ಒಂದು ಜಿಂಕೆಯ ಚರ್‍ಮದ ಮೇಲೆ ವಿಶ್ವಾಮಿತ್ರರು ಕುಳಿತಿದ್ದರು. ಆಗ ಒಬ್ಬ ಹುಡುಗನು ಏದುತ್ತಾ ಓಡಿಬಂದು ಅವರ ಕಾಲಿಗೆ ಬಿದ್ದನು. ಅವರೂ “ಯಾರು? ಶುನಶ್ಶೇಫನೇನೋ? ಎಲಾ! ಕೊನೆಗೆ ಬದುಕಿಕೂಂಡೆಯಾ? ಭಲೆ! ಸಂತೋಷ! ಬಾ! ಕುಳಿತುಕೋ” ಎಂದರು. ಅವನೂ ಕೈ ಮುಗಿದು ಗುರುಗಳೇ! ತಮ್ಮ ಕೃಪೆಯಿಂದ ನಾನು ಉಳಿದುಕೊಂಡೆನು. ಇನ್ನು ಮುಂದಕ್ಕೆ ತಾಯಿ, ತಂದೆ, ಬಂಧು, ಬಳಗಗಳೆಲ್ಲವೂ ತಾವೇ! ನಾನೂ ತಮ್ಮ ಮಕ್ಕಳಲ್ಲಿ ಒಬ್ಬನಾಗಿ ಸೇವೆ ಮಾಡಿಕೊಂಡು ಇರುತ್ತೇನೆ. ಅಪ್ಪಣೆಯಾಗಬೇಕು” ಎಂದು ಕೇಳಿಕೊಂಡನು. ಅವನ ಕಣ್ಣುಗಳಿಂದ ನೀರು ಹರಿಯುತ್ತ ಇತ್ತು. ಅದನ್ನು ನೋಡಿ ವಿಶ್ವಾಮಿತ್ರರಿಗೆ ಮನಸ್ಸು ಕರಗಿ ಹೋಯಿತು. “ಹೂ! ಹಾಗೆಯೇ ಆಗಲಿ ಇರು!” ಎಂದರು. ಅವನನ್ನು ಕೊಲ್ಲಬೇಕೆಂದು ಯಾರೋ ಹಿಡಿದುಕೊಂಡು ಹೋಗಿದ್ದರು. ವಿಶ್ವಾಮಿತ್ರರ ಕೃಪೆಯಿಂದ ಅವನು ಅವರ ಕಯ್ಯಿಂದ ತಪ್ಪಿಸಿಕೊಂಡು ಬದುಕಿ ಬಂದಿದ್ದನು.

ಅವರಿಗೆ ಆವೇಳೆಗಾಗಲೆ ಆರು ಜನ ಮಕ್ಕಳಿದ್ದರು. ಮೊದಲಿನ ಮೂವರು ಯಾವಾಗಲೂ ತಂದೆಯು ಹೇಳಿದಕ್ಕೆ ಪ್ರತಿಯನ್ನೇ ಹೇಳುವರು. ಕೊನೆಯ ಮೂವರು ತಂದೆಯ ಮಾತು ಎಂದರೆ, ಏನೇ ಆಗಲಿ ಎರಡು ಮಾತು ಆಡುತ್ತಿರಲಿಲ್ಲ. ಆರು ಜನರನ್ನೂ ಕರೆಸಿ “ಅಯ್ಯಾ! ಈ ಶುನಶ್ಶೇಫನು ಗುರುಹಿರಿಯರಲ್ಲಿ ಭಕ್ತಿಯುಳ್ಳವನು. ಇವನು ನಿಮ್ಮೆಲ್ಲರಿಗಿಂತಲೂ ವಿದ್ಯೆಯಲ್ಲಿಯೂ, ತಪಸ್ಸಿನಲ್ಲಿಯೂ ಹಿರಿಯನು. ಇವನೂ ನಿಮ್ಮಲ್ಲಿ ಒಬ್ಬನಾಗಿ ಇದ್ದು ಕೊಂಡಿರಲಿ” ಎಂದು ಹೇಳಿದರು.

ಮೊದಲ ಮೂವರು ಎಂದಿನಂತೆ ಎದುರು ಆಡಿದರು. ವಿಶ್ವಾಮಿತ್ರರೂ ಒಂದು ಸಲ ಹೇಳಿದರು. ಎರಡು ಸಲ ಹೇಳಿದರು. ಮೂರನೆಯ ಸಲವೂ ಹೇಳಿದರು. ಅವರು ಕೇಳಲಿಲ್ಲ. “ನಿಮ್ಮ ಮನೆಯೇ ಬೇಡ” ಎಂದು ಎಲ್ಲಿಗೋ ಹೊರಟು ಹೋದರು.

ಕೊನೆಯ ಮೂವರು “ತಂದೆಯೇ! ನೀನೇ ನಮಗೆ ದೇವರು. ನೀನು ಹೇಳಿದುದೇ ನಮಗೆ ವೇದವಾಕ್ಯವು. ನಿನ್ನ ಇಷ್ಟದಂತೆಯೇ ಆಗಲಿ. ಶುನಶ್ಶೇಫನೇ ನಮಗೆಲ್ಲ ಹಿರಿಯವನಾಗಲಿ” ಎಂದು ಒಪ್ಪಿಕೊಂಡರು. ವಿಶ್ವಾಮಿತ್ರರಿಗೆ ಸಂತೋಷವಾಯಿತು. ಆ ನಾಲ್ವರಿಗೂ ಸಕಲ ವಿದ್ಯೆಗಳನ್ನೂ ಉಪದೇಶಿಸಿ, ಸಿದ್ಧಿಯಾಗುವಂತೆ ಅನುಗ್ರಹಿಸಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಣ್ಣದ ಚಿಟ್ಟೆ
Next post ನಿನ್ನ ಪ್ರೀತಿಸಿ ನಾನು ನಿನಗಿತ್ತ ಮಾತನ್ನು

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…