ಬೇಡ ಅಮ್ಮ ಬೇಡ ಕಾಣದೂರಿನ ಪಯಣಕೆ ತಪ್ಪೊ ನೆಪ್ಪೊ ಹೊಟ್ಟೆಗಿರಲಿ ಮರಳು ನಿನ್ನೀ ಊರಿಗೆ ಮೂಲೆಯಲ್ಲಿ ಒಂಟಿ ಹಣತೆ ಕಣ್ಣು ಸಹಿಸದಾಗಿದೆ ಸುತ್ತ ಕತ್ತಲು ಗಾಢ ಮೌನ ಬದುಕು ಮಸಣ ಆಗಿದೆ ಊರು ಸೇರಿದೆ ಬಂಧು ಬಳಗ ಮರಳಿ ಬರುವ ಖಾತ್ರಿಯಿಲ್ಲ ನಿನ್ನ ಕರುಣೆಯೆ...

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ. -ಜಾನಪದ ಗೀತೆ ೧ ಇವಳೊಂದು ಪ್ರತಿಮೆ ಇವನೊಂದು ಪ್ರತಿಮೆ ಇವಳಿಗಾಗಿ ಇವನೋ ಇವನಿಗಾಗಿ ಇವಳೋ ಋತು ಋತುವಿಗೂ ಬೇರೆ ಬೇರೆ ರೂಪ ಇವನದೇ ಬೆಳೆ ಇವನಿಗಾಗಿ ಕ...

ಅದೊಂದು ನಿರ್ಜೀವ ಊರು. ಸಂಜೆ ಯಾಗುವಾಗ ಆ ಊರಿಗೆ ರಂಗೇರುತ್ತದೆ. ಶಾಲೆಯ ಹತ್ತಿರದಲ್ಲೇ ಇರುವ ಕಳ್ಳು ಮತ್ತು ಸಾರಾಯಿ ಗಡಂಗುಗಳು ಆಗ ತುಂಬಿ ತುಳುಕುತ್ತವೆ. ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೆ ಮುಂದೆ ನೋಡುವವರೂ ಕೂಡ ಸಂಜೆ ಎಗ್ಗಿಲ್ಲದೆ ಗಡಂಗಿಗ...

ಮೊಬೈಲು ಎಸ್ಸೆಮ್ಮೆಸ್ಸು ಬಂದು ಭಾವಿಸುವರು ರದ್ದಿ ಕಾಗದದಂತೆ ಕೋರಿಯರ್ ಆನ್‌ಲೈನು ಬಂದು ಕೈಗೆ ಕೋಲು ಬಂದಂತೆ ಭಾವಿಸಿ ಸಾಲದು ಎಂಬುದಕೆ ಕಾಯಿನ್ ಬೂತು ವಕ್ಕರಿಸಿದ್ದು ಬಿಟಿ ಬದನೆ ಬಂದಂತೆ ಎನ್ನ ಕುಲಕ್ಕೆ ಆಯಿತು ಸಂಚಕಾರ ಈ ಜಗತ್ತೇ ಹಾಗೆ- ಹೊಟ್ಟೆ...

ಎಲ್ಲಿ ಮರೆಯಾಗಿ ಹೋಗಿವೆ, ಎಲ್ಲಿ ಅಡಗಿ ಕುಳಿತಿವೆ ಜೀವನದ ಅರ್ಥವನ್ನು ಗಟ್ಟಿಯಾಗಿಸಿದ, ನನ್ನ ರೂಪಿಸಿದ ಸಿಹಿಕಹಿ ನೆನಪುಗಳು? ರಜೆ ಸಿಕ್ಕಿತೆಂದರೆ ಅಜ್ಜಿ ಮನೆಗೋಡುವ ಸಂಭ್ರಮ, ತುಂಬಿದ ಮನೆಯ ಸಡಗರ; ನೂರೊಂದು ವರುಷ ಬಾಳಿದ ಪಿಜ್ಜನ ಯಜಮಾನಿಕೆಯ ದರ್...

ಅಗೊ, ಬೇಲಿಹಾರಿ ಓಡಿತು ಕೋಳಿ ಹೊರಗೆ, ಮನೆ- ಜೋಪಾನದಲಿ ನುರಿತ ಗೃಹಿಣಿ ಕಂಕುಳ ಮಗುವ ಅಲ್ಲೆ ಕೆಳಗಿಳಿಸಿ ಬೆನ್ನೆಟ್ಟಿದಳು ಸರಸರನೆ ಜಿಗಿದು ಓಡುವ ಕೋಳಿಯನ್ನು ‘ಹೋ’ ಎನುತಳುವ ಮಗು ತಾಯ ಹಿಂದೆ. ದೂರದಲೋಡಿ ಬರುತಿದೆ ಕೂಗಿ ಕರೆಯುತ್ತ ಕಣ್ಣೆದುರೆ ನೆ...

ಉಗ್ರಪ್ಪನ ವಾದ ಉಗ್ರಪ್ಪನ ಸಸ್ಪೆಂಡ್ ಆರ್ಡರ್ ಹೊರಡಿಸಿ ಹತ್ತಿರ ಹತ್ತಿರ ಒಂದು ತಿಂಗಳಾಗುತ್ತ ಬಂತು. ನಾಗೇನಹಳ್ಳಿಯ ಪಾಠ ಶಾಲೆಯ ಪ್ರಾರಂಭೋತ್ಸವದಿಂದ ಮನಸ್ಸು ಹರ್ಷಯುಕ್ತವಾಗಿದ್ದರೂ ರಂಗಣ್ಣನಿಗೆ ಆಲೋಚನೆ ತಪ್ಪಲಿಲ್ಲ. ತನಗಿರುವುದು ಒಂದು ತಿಂಗಳು ...

ಬೆಳಿಗ್ಗೆ ಬೆಳಿಗ್ಗೆ ಪೇಪರ್ ಓದುವುದೆಂದರೆ ಟಿ. ವಿ. ನೋಡುವುದೆಂದರೆ ಮೈಮೇಲೆ ಕೆಂಪಿರುವೆಗಳನ್ನು ಬಿಟ್ಟುಕೊಂಡಂತೆ ಪೇಪರ್ ಪುಟಗಳು ತೆಗೆದರೆ ಟಿ.ವಿ. ಚಾನೆಲ್‌ಗಳು ಒತ್ತಿದರೆ ಸಾಕು- ಘನಂದಾರಿ ಕೆಲಸ ಮಾಡುತ್ತೇನೆನ್ನುವವರ ಆರೋಪ ಪ್ರತ್ಯಾರೋಪ ಕೂಗಾಟ...

1...13141516

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....