ಎಮ್ಮ ಪದ ಸಂಪ್ರದವಾದೊಡೆಮ್ಮ ಜೀವನ ಕ ಸೀಮ ಸಿರಿ ಸಂಪದ ಚಯನ ಬೇಕಿಲ್ಲವೆನು ತೆಮ್ಮ ಪಿರಿಯರಂದದ ಕೃಷಿಯನುಸುರಿದರು ಕಮತದೊಳೊಸರುವ ಬೆವರಿನೊಳಮ್ಮನರ್ಚನೆ ಮಾಡಿ ತಮ್ಮನ್ನದಾರ್‍ಜನೆಯ ದೋಷ ಕಳೆಯುತ ಬೆಳೆದಿಹರು – ವಿಜ್ಞಾನೇಶ್ವರಾ *****...

ಗಗನದಂಗಳ ಹಾರು ಹಕ್ಕಿಯೆ ಯಾವ ಜಾತಿಯು ನಿನ್ನದು ಶಾಂತ ಶೀತಲ ಮಧುರ ಗಾಳಿಯೆ ಯಾವ ದೇಶಾ ನಿನ್ನದು ಮನುಜ ಮನುಜನ ಜಡಿದು ಒಡೆದನು ಮನುಜ ದನುಜಾ ಅದನೆ ಆತ್ಮ ಧರ್ಮಾ ವಿಶ್ವ ಧರ್ಮಾ ಮರೆತು ಮಣ್ಣನು ತಿಂದನೆ ನನ್ನ ದೇವರು ಅವನ ದೇವರು ಇವನ ದೇವರು ಭಿನ್ನವೇ...

ಬದಲಾಗಿದೆ ಕಾಲ ಸೂಕ್ಷ್ಮಾತಿಸೂಕ್ಷ್ಮ ಸಂಕ್ರಮಣ ಕಾಲ ಅಡಿಯಿಡುವ ಮುನ್ನ ನುಡಿ ಜಾರುವ ಮುನ್ನ ಎಚ್ಚರವಿರಲಿ ಹೂವೇ ಹಾವಾಗಿ ಪ್ರಕೃತಿ ವಿಕೃತಿಯಾಗಿ ಅಮೃತವೇ ವಿಷವಾಗಿ ಜೀವ ತೆಗೆಯಬಹುದು ಎಚ್ಚರವಿರಲಿ ಮಾತು ಮುತ್ತಾಗದೇ ಮೃತ್ಯುವಾಗಿ ನಗುವ ಬೆಳದಿಂಗಳು ಕ...

ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ ಇಂತೆರಡಿಲ್ಲದೆ ಕೂಸನೆತ್ತಬಲ್ಲಡೆ ಆತನೆ ಲಿಂಗೈಕ್ಯನು ಗೊಹೇಶ್ವರ ಅಲ್ಲಮನ ವಚನ. ಮನಸ್ಸಿನಲ್ಲಿ ಹುಟ್ಟುವ ಆಸೆ ಮತ್ತು ರೋಷಗಳಿಗೆ ಇರುವುದು ತಾಯಿ ಮಕ್ಕಳ ಸಂಬಂಧ. ಒಂದನ್ನು ಬಿಟ್ಟು ಒಂ...

ಭಿಕ್ಷುಕಿ:- ಬಿಕ್ಷಾಂದೇಹಿ! ಭಿಕ್ಷಾಂದೇಹಿ! (ಅರಸನು ಬೀದಿಯಲ್ಲಿಯ ಇವಳನ್ನು ನೋಡಿ) ಅರಸ:- ಹಗಲಿರುಳು ಗಣಿಸದಲೆ, ಮಳೆಗಾಳಿಯೆಣಿಸದಲೆ ಮನೆಮಾರು ನೆನೆಯದಲೆ, ಬಳಗವನು ಕೂಡದಲೆ ಹರಕು ಸೀರೆಯನುಟ್ಟು, ಮಾಸಿದಾ ತಲೆಬಿಟ್ಟು ಕರದಿ ಜೋಳಿಗೆ ತೊಟ್ಟು, ಕಣ್ಣ...

ಮಳೆ ಸುರಿದು ಎಲೆಗಳಿಂದ ಹನಿಹನಿ ನಿನ್ನ ನೆನಪಿನ ಬಾಷ್ಪ. ಈ ತಿಳಿ ಸಂಜೆ ಆಲಿಸುತ್ತಿದೆ ಹಕ್ಕಿ ಇಳಿ ಹೊತ್ತಿನ ಹಾಡು. ಹೂವರಳಿ ಸುವಾಸನೆಯ ಗಾಳಿ ಬೀಸು. ದೇವರ ಮನೆಯಲ್ಲಿ ನಂದಾದೀಪದ ಬೆಳಕು. ಹನಿಯುವ ಆಳ ನಿರಾಳದ ಸಿಂಚನಕೆ ಅವನ ಮೃದು ಸ್ಪರ್ಶ ಸೋಕಿ ಒದ...

ನಮ್ಮ ಭಾರತವೆನ್ನಿರಿ | ವಿಶ್ವ ಚೇತನವೆನ್ನಿರಿ || ವಿಶ್ವ ಮಾತೆಗೆ ಉತ್ಸವವಿದು | ಜಯ ಜಯ ಘೋಷಣೆಯ ಮೊಳಗಿರಿ ||ನಮ್ಮ|| ವಿಶ್ವೇಶ್ವರರ ನಿರ್ಮಾಣ | ಬೃಂದಾವನ ಅಮರಗಾನ | ಜವಾಹರ ಗಾಂಧೀಜಿ ತ್ಯಾಗ ಬಲಿದಾನ | ಇತಿಹಾಸ ಉತ್ತುಂಗದ ಮಾನ ಸನ್ಮಾನ ||ನಮ್ಮ||...

ಜೀವನವೆಂಬುದು ಒಂದು ಆಶಾಗೋಪುರ ನಿತ್ಯ ಒಡ್ಡುವುದು ಕನ್ಸುಗಳ ಮಹಾಪುರ ಆಸೆಗಳಿಗೆ ಪೂರೈಸುತ್ತ ನಡೆದರಾಯ್ತು ನಿನ್ನ ದಾರಿ ತಪ್ಪಿರುವುದು ನಿಜವಾಯ್ತು ನಿನಗರಿವಿಲ್ಲದೆ ನಡೆದಿದೆ ಇಂದ್ರಿಯ ಕುತಂತ್ರ ನಿನ್ನನ್ನು ಮಾಡಲಿವೆ ನಿತ್ಯ ಪಾರತಂತ್ರ ಆತ್ಮದ ಭಾವ...

“ಆಹಾ! ಇಂತಾ ಅನ್ಯಾಯ ಈ ಊರಲ್ಲಿ ನಡೆಯುವದಾದರೆ ನಾನು ಮತ್ಯಾವ ಊರಿಗೆ ಹೋಗಲಿ! ಜೀವಧರಿಸಿ ನನ್ನ ಗಂಡನನ್ನು ಮಠದಲ್ಲಿ ಕೊಂದ ಮಾರೆಗಾರರ ಪಕ್ಷವನ್ನೇ ಸರ್ಕಾರದ ಜನರು ಹಿಡಿದ ಮೇಲೆ ಬಡ ವೆಯಾದ ನನ್ನ ಸಂಕಷ್ಟ ಯಾರಿಗೆ ಹೇಳಲಿ? ಭಗವಂತನೇ! ಹೇ ಜಿನೇಶ್ವರಾ!...

ಹೃದಯವು ದಣಿವಿಲಿ ನವೆದಿತ್ತು, | ಸ್ಪಂದಕೆ ಮರೆವೋ ಕವಿದಿತ್ತು ಎಲ್ಲವು ಇತ್ತೆಂದಾಗಿತ್ತು, | ಮುಂದಕೆ ಇನ್ನಿಲ್ಲೆನಿಸಿತ್ತು ಬಿಲ್ಲೇ ಕಳಚಿದೆ ಕೈಯಿಂದ, | ಹೆದೆ ಹರಿದಿದೆ ಒಳಹುರಿಯಿಂದ ಕೈಗಳ ಹಿಡಿತವೆ ಸಡಿಲಾಗಿ, | ಎನಿಸಿದೆ ಆಗದು ಒಂದಾಗಿ ಪ್ರಾಣಲ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...