ಕಳೆದುಕೊಂಡ ಅಮ್ಮ ನಿನ್ನ ಎಲ್ಲಿ ಹುಡುಕಲಿ ಮತ್ತೆ ಪಡೆವ ಭಾಗ್ಯ ಉಂಟೆ ನನ್ನ ಹಣೆಯಲಿ || ಧರೆಗೆ ತಂದೆ ನೀನೆ ಧರಣಿ ನೀನೆ ಮೊದಲ ಅಕ್ಷರ ಮತ್ತೆ ಬೇರೆ ಬೇಕೆ ಹೇಳು ಇಟ್ಟಿಗೆಗಳ ಮಂದಿರ! ಜಗವ ತೋರಿ ಜಗವೆ ಆದೆ ಇದು ನಿನ್ನ ವಿಲಾಸ ಕಡೆಗೆ ಕರುಣೆ ತೋರದಾದೆ...

ಕಟುಕನಾನಲ್ಲೆ ನಲ್ಲೆ ನೋಟಕೆ ಹಾಗೆ ಕಂಡು ಬಂದರೂ… ನಾನು ನಿನ್ನ ಉತ್ಕಟ ಪ್ರೇಮಿ ಅಷ್ಟೆ. ನನ್ನ ಆಟ ನಿನಗೆ ಪ್ರಾಣ ಸಂಕಟ ಆದರೂ… ಕ್ಷಮಿಸು! ಎಂಬುದು ಔಪಚಾರಿಕ. ಏನು ಮಾಡಲಿ? ನಾನು ಹತ್ತಿಕ್ಕಿ ಕೊಳ್ಳಲಾರೆ! ಎಷ್ಟಾದರೂ… ನನಗೆ ಅದ...

ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು- ನಾವು ಆಗ ತಾನೆ ಕಣ್ಣು ಬಿಟ್ಟಿದ್ದೆವು-ಪುಟ್ಟ ಸಸಿಗಳು ಸಹ್ಯಾದ್ರಿಯ ಸಂಜೆ ಐದರ ಮಳೆಯಲ್ಲಿ ತೇಲಿಬಿಟ್ಟ ಕಾಗದದ ದೋಣಿ ಕೆಸರುಗಾಲಲ್ಲೆ ಲಾಗಾ ಹಾಕಿದ್ದೆವು! ನೀವು ಕವಿಯೆಂದು, ನಿಮ್ಮ ಕರೆಯ ಮನ್ನಿಸಿ ಸುರಿದ ಮಳೆಯ...

[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ ಮನೋವೃತ್ತಿಗಳನ್ನು ಲಕ...

ಮೇಯಾಕ ಹ್ವಾದ ದನಕರುಗಳ ಹಿಂಡು ಸಂಜೆಯಾಗತ್ಲು ಊರೊಳಗ ಬರಾಕ್ಕೊಲ್ದು ಕೊರಳೆತ್ತಿ ಬಾಯ್ತೆರೆದು ಬಾಲವ ಸೆಟೆಸಿ ಹುಗಿದು ನಿಲ್ಲಿಸಿದ್ದ ಊರ ಹೊರಗಿನ ಇತಿಹಾಸವಿದ್ದ ಈ ಕಲ್ಲಿಗೆ ಉಜ್ಯಾವ ಅರೆತೆರದ ಕಣ್ಣಿನಾಗ ತಮ್ಮ ಮೈ ನವೆ ನೀಗಿಸಿಕೊಳ್ತಾ ಆನಂದದ ಪರಮಾವ...

ಎಲ್ಲಿ ಹೋಗಿವೆ ರೀತಿ ನೀತಿಗಳು ಎಲ್ಲಿ ಹೋಗಿವೆ ಮೌಲ್ಯಗಳು? ಎಲ್ಲಿ ಹೋಗಿದೆ ಸೌಜನ್ಯ ಮಾನವೀಯತೆಯ ಮೊಳಗುವ ಪಾಂಚಜನ್ಯ? ಹೆತ್ತವರಿಗಿಲ್ಲ ಮಕ್ಕಳು ಗುರುಗಳಿಗಿಲ್ಲ ಶಿಷ್ಯರು ಒಬ್ಬರಿಗಿಲ್ಲ ಇನ್ನೊಬ್ಬರು ಆಗುತ್ತಿದ್ದಾರೆ ಸ್ವಾರ್ಥಿಗಳು ಹೃದಯವಿಲ್ಲದ ಮಾ...

ಬಾಯಿ ಕಟ್ಟಿದ ನನ್ನ ವಾಣಿ ನಯವಿನಯದಲಿ ಕೇಳುವಳು ನಿನ್ನ ಶ್ರೀಮಂತ ಪ್ರಶಂಸೆಯನು ; ಹೊನ್ನಿನಕ್ಷರಗಳ ಅಮೂಲ್ಯ ಪದ ಪಂಕ್ತಿಯಲಿ ಸಿಂಗರಿಸಿ ಎಲ್ಲ ಪ್ರತಿಭೆಗಳು ರಚಿಸಿದುದನ್ನು. ಒಳ್ಳೆನುಡಿ ಅವರು ಬರೆಯಲು, ನಾನು ಮನದೊಳಗೆ ಒಳ್ಳೆಯದ ಚಿಂತಿಸುವೆ. ಸತ್ವಶ...

ಸೀತಾಪಹರಣ ಅರಮನೆಯ ಸಕಲ ಸೌಭಾಗ್ಯ ಸುಖಸಂತೋಷಗಳನ್ನು ಮರೆತು ಸೀತಾರಾಮ ಲಕ್ಷ್ಮಣರು ಕಾಡಿನಲ್ಲಿ ಪರಿಸರದ ಮಡಿಲಿನಲ್ಲಿ ಸಾಗಿಸುತ್ತಿದ್ದರೂ ಕಾಡು ಎಷ್ಟೇ ಸುಂದರವಾಗಿದ್ದರೂ ದುಷ್ಟ ಪ್ರಾಣಿಗಳ ದುಷ್ಪರಾಕ್ಷಸರ ಆವಾಸ್ಥಾನ ಕಿಡಿಗೇಡಿಗಳಾದ ರಾಕ್ಷರು ತಮ್ಮ ...

ಕಳವಳದ ಮೂರ್ತಿ ತಾ ಕಂಗೆಟ್ಟು ನಿಂತಿಹುದು ತಳಮಳಕೆ ತೀರವೆಲ್ಲಿರುವದವನ ಹುಳುವು ಹುಪ್ಪಡಿಗಿಂತ ಕೀಳಾದಬಾಳುವೆಯ ಅಳುತಬಾಳುತ್ತಿಹನು ಸಾವಬಯಸಿ ಗೇಣು ಹೊಟ್ಟೆಯ ತುಂಬೆ ಬೊಟ್ಟು ಬಟ್ಟೆಯ ಹೂರೆಯೆ ಪ್ರಾಣವನೆ ಒಪ್ಪಿಸಿಹ ಸಿರಿವಂತಗೆ ಗಾಣದೊಳು ಸಿಕ್ಕಿರುವ ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....