ಲೋಕಾಂತ ಎನಗೆ ಬೇಡ ಬೇಕು ಏಕಾಂತ ಧ್ಯಾನ ಎನಗೆಬೇಕು ಕಾಣುವೆ ರಜನಿಕಾಂತ ಕಾಮ ಕಾಂಚನಗಳ ಬೇಡ ಮತ್ತೆ ವಿಷಯ ಸುಖ ಇಹಸುಖಗಳಲಿ ಬರೀ ಕಾಣುವೆ ದುಃಖ ಜೀವನವೊಂದು ಹೋರಾಟ ಬರಿ ಯುದ್ಧ ಇಂದ್ರಿಯಗಳೊಂದಿಗೆ ಕಾದಿದೆ ದ್ವಂದಯುದ್ಧ ಕನಸುಗಳೇ ವಾಸ್ತವ ಮರೆಸುವ ಹಾಗ...

ದುಷ್ಮಾನರು ಅಪಜಯ ಹೊಂದಿ, ಶಿಕ್ಷೆಗೆ ಪಾತ್ರರಾದರೆಂಬ ಆಹ್ಲಾದ ಕರವಾದ ವಾರ್ತೆಯು ಕಿವಿಗೆ ಬೀಳುತ್ತಲೇ ವಾಗ್ದೇವಿಯೂ ಚಂಚನೇತ್ರರೂ ಪುಳಕಿತರಾದರು. ಭೀಮಾಜಿಗೂ ಶಾಬಯ್ಯಗೂ ಸದ್ಭಶರಾದ ಗಂಡುಗಲಿ ಗಳು ಹುಟ್ಟಲೇ ಇಲ್ಲವೆಂದರು. ಸಕ್ರೆ ಪಂಚಕಜ್ಜಾಯ ದೊಡ್ಡ ದ...

ಮೋಡಗಳೊರಗಿವೆ ನಿರ್ವಾಸಿತವಾದಾಕಾಶದ ಅವಕಾಶದೊಳು ಆಲಸದಲಿ ದಣಿವಾದವೊಲು ಗತಿಸಿದ ಕಡಲಿನ ನೆರೆ ತೆರೆ ಅವಲೋಕಿಸಿ ಸುತ್ತಾಡುತ್ತಿವೆ ಖಿನ್ನ ಉರುಳುರುಳುತ್ತಿವೆ ಅವಸನ್ನ ಬರಿ ಚಿಂತೆಯೊಳೋ ಕರಿ ಕರೆ ಚಾಚಿದೆ ಶೋಕಾಕುಲತೆಯೆ ಮುಸುಕಿದೊಲು ವಾಯವ್ಯದ ಉಸಿರಾಟ...

ಕೊಳಲ ನುಡಿಸು ಕಿವಿಯೊಳನಗೆ ಚೆಲುವ ಮೋಹನಾ! ಕೊಳಲ ನುಡಿಸಿ ಪ್ರೇಮಸುಧೆಯ ಮಳೆಯ ಸುರಿಸಿ ಹೃದಯ ತಾಪ ಕಳೆದು ತಿಳಿವಿನೆಳಬಳ್ಳಿಯ ಬೆಳೆಯಿಸಿ ಬೆಳಗೆನ್ನ ಮನವ…. ಚೆಲುವ ಮೋಹನಾ! ೧ ಎಳೆಯತನದಿ ಹಸುಗಳ ಜಂ- ಗುಳಿಯ ಕಾಯಲೆಂದು ಬನಕೆ ಗೆಳೆಯರೊಡನೆ ಹೋಗ...

ಈ ಸಂಸಾರ ಸಾಗರದೊಳು ತಾವರೆ ಎಲೆಯೊಳು ನೀರಿರುವಂತೆ ಅಂಟಿರಬೇಕು, ಅಂಟದಿರಬೇಕು| ಸದಾನಗುವ ತಾವರೆಯಂತೆ ಮುಗುಳ್ನಗುತಿರಬೇಕು|| ಈ ಸಂಸಾರ ಸಾಗರ ನಾನಾ ಬಗೆಯ ಆಗರ | ಅಳೆದಷ್ಟು ಇದರ ಆಳ ಸಿಗದಿದರ ಪಾತಾಳ| ಈಗಿದು ಅತೀ ಸುಂದರ, ಸಸಾರ ಮುಂದೆ ಇದೇ ನಿಸ್ಸಾ...

ಗಿಳಿಯೊಳಗೆ ಗಿಡುಗ ಕೂತು ಊರು ಹಾಳಾಗುವವರೆಗೆ ಆಕಾಶದಲ್ಲಿ ಹಾರಾಡುತ್ತದೆ ಗಿಡುಗ, ಒಳಗೊಳಗೇ ಕುಕ್ಕುತ ರಕ್ತ ಮಾಂಸಗಳನ್ನು ಬಸಿದಾಗ ಆಯತಪ್ಪಿದ ಆಕಾಶದ ಗಿಳಿ ತಿಪ್ಪರಲಾಗ ತೂರಾಡುತ್ತದೆ. ಗಿಳಿಯೊಳಗೆ ಸಿಡಿಲು ಸ್ಫೋಟಗೊಂಡು ಚೂರು ಚೂರಾಗಿ ನೆಲಕಚ್ಚಿದಾಗ...

ಸೋಲಿರಲಿ, ಗೆಲುವಿರಲಿ, ನಗುವಿರಲಿ ಅಳುವಿರಲಿ ದಿನಗಳು ಉರುಳುತ್ತವೆ. ಉರುಳುತ್ತಿರುವ ದಿನಗಳಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಯಾರಿಗೂ ಭಾರವಾಗದೆ ಜೀವಿಸುವ ಛಲವಿದೆಯಲ್ಲ ಅದು ಜೀವನಕ್ಕೆ ಎಸೆಯುವ ಸವಾಲು. ಎಷ್ಟು ಆಡಿಸುತ್ತಿಯೋ ಅಷ್ಟು ಆಡಿಸ...

ಪುಟ್ಟನ ಹಳ್ಳಿ ಜಾತ್ರೆಯಲಿ ಸಿಗುವವು ಬಗೆ ಬಗೆ ತಿನಿಸುಗಳು ಬೆಂಡು ಬತ್ತಾಸು ಜಿಲೇಬಿಗಳು ಒಣಮಂಡಕ್ಕಿಯ ಮೂಟೆಗಳು ದಾರದ ಉಂಡೆ ರಬ್ಬರ್ ಚೆಂಡು ರಿಬ್ಬನ್ ಟೇಪು ಗಾಜಿನ ಗುಂಡು ಹೇರ್‌ಪಿನ್ ಕನ್ನಡಿ ಬಾಚಣಿಗೆ ಕುಂಕುಮ ಟಿಕಳಿ ಬೀಸಣಿಗೆ ಭಜನೆ ಸನಾದಿ ಕರಡ...

ಪೂರ್ವ ನಾರಿಯು ರವಿಗೆ ಆರತಿ ಬೆಳಗಿ ನಿಂದಿಹ ಚಲುವದೊ ಕೆಂಪು ಸೀರೆಗೆ ಚಿನ್ನದೆಳೆಗಳ ಬಣ್ಣ ಬಣ್ಣದ ಒಡಲದೊ ಕಾಳರಾತ್ರಿಯ ಜೈಸಿ ರಕ್ತದಿ ಮೈಯ ತೊಳೆಯುತ ಬಹನದೊ ಬೆಂಕಿಯುಂಡೆಯೊ ಎನುವ ಕಾಂತಿಯ ಸೂಸಿ ನೇಸರ ಬರವದೊ. ನಿಂದ ಸಂಧ್ಯಾರಾಣಿಯಪ್ಪಿದ ಚೆಲುವ ಕಿರ...

ಇಂದು ಮಹಿಳಾ ದಿನ ವರ್ಷಕ್ಕೊಂದು ಬಾರಿ. ಹಾಗೆ ಬಂದು ಹೀಗೆ ಹೋಗುವ ಈ ದಿನ ಇಂದೆಯೂ ಬಂದಿದೆ ಪ್ರತಿ ವರ್ಷದಂತೆ. ಅಂದು ಮಹಿಳೆಯರಿಗೆಲ್ಲ ಎಲ್ಲಿಲ್ಲದ ಸಂಭ್ರಮ, ಎಲ್ಲೆಡೆಗೂ ಭಾಷಣ, ವೇದಿಕೆ, ಆಟ, ಕೂಟ, ಸ್ಪರ್ಧೆಗಳು ಸೊಬಗಿನ ತಳಿರು ತೋರಣ ವರ್ಷದ ೩೬೪ ದ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....