ಇಂದು ಮಹಿಳಾ ದಿನ
ವರ್ಷಕ್ಕೊಂದು ಬಾರಿ.
ಹಾಗೆ ಬಂದು ಹೀಗೆ
ಹೋಗುವ ಈ ದಿನ
ಇಂದೆಯೂ ಬಂದಿದೆ
ಪ್ರತಿ ವರ್ಷದಂತೆ.
ಅಂದು ಮಹಿಳೆಯರಿಗೆಲ್ಲ
ಎಲ್ಲಿಲ್ಲದ ಸಂಭ್ರಮ,
ಎಲ್ಲೆಡೆಗೂ ಭಾಷಣ, ವೇದಿಕೆ,
ಆಟ, ಕೂಟ, ಸ್ಪರ್ಧೆಗಳು
ಸೊಬಗಿನ ತಳಿರು ತೋರಣ
ವರ್ಷದ ೩೬೪ ದಿನಗಳು
ಗಂಡಸರವೇ… ಆದರೆ
ನಮಗಾಗಿ ಒಂದು ದಿನ
ಆಚರಣೆ ಸಾಕಲ್ಲವೇ ?
*****