ಅತ್ತಿತ್ತ ನೋಡದೆ

ಅತ್ತಿತ್ತ ನೋಡದೆ ಇತ್ತಿತ್ತ ಕಾಣದೆ
ಎತ್ತ ಹೊರಟೆ ಈ ಕತ್ತಲ ಹಿಂದಾಕಿ
ಏ ಹುಡುಗಿ
ತುಸು ಮೆಲ್ಲಗೆ ಹೋಗೆ
ಮಲ್ಲಿಗೆ ಹಾಗೆ

ಕೂದಲ ಜಡೆ ಮಾಡಿದಿ ಅದಕ ಪರಿಮಳ ಹಚ್ಚಿದಿ
ಕಳ್ಳ ಹೆಜ್ಜೆಯಲಿ ಬೇಗಬೇಗನೆ ಹೊರಟಾಕಿ
ಏ ಹುಡುಗಿ
ತುಸು ಮೆಲ್ಲಗೆ ಹೋಗೆ
ಮಲ್ಲಿಗೆ ಹಾಗೆ

ಕಣ್ಣಿಗೆ ಕಾಡಿಗಿ ಹಚ್ಚಿದಿ ಕಾಲಿಗೆ ಅಂದುಗೆ ಕಟ್ಟಿದಿ
ಗೆಜ್ಜೆಯ ಕಣಕಣಕೆ ಬೆಚ್ಚಿ ಬೀಳುವಾಕಿ
ಏ ಹುಡುಗಿ
ತುಸು ಮೆಲ್ಲಗೆ ಹೋಗೆ
ಮಲ್ಲಿಗೆ ಹಾಗೆ

ಚಂದ್ರನಿಗೆ ರಜಾ ನೀಡುವವಳೆ ಚಂದ್ರಮುಖಿ
ರಜನಿಗೆ ಜತೆ ಕೊಡುವವಳೆ ಕರಿಕೂದಲಾಕಿ
ಏ ಹುಡುಗಿ
ತುಸು ಮೆಲ್ಲಗೆ ಹೋಗೆ
ಮಲ್ಲಿಗೆ ಹಾಗೆ

ಕತ್ತಲ ಹುಡುಕಿ ಬರಿ ಬೆತ್ತಲುಗೊಳಿಸಿ
ಬೆಳಕ ಹುಡುಕಿ ಮಾಯಮಾಡುವಾಕಿ
ಏ ಹುಡುಗಿ
ತುಸು ಮೆಲ್ಲಗೆ ಹೋಗೆ
ಮಲ್ಲಿಗೆ ಹಾಗೆ

ಹಗಲೆಂದರೆ ಹಗಲಲ್ಲ ಇರುಳೆಂದರು ಇರುಳಲ್ಲ-
ಹಗಲಿರುಳಿನ ನಡುವೆ
ಸಂಜೆಯಲ್ಲದೆ ನೀನಲ್ಲ ಬೇರೊಬ್ಬಾಕಿ
ಏ ಹುಡುಗಿ
ತುಸು ಮೆಲ್ಲಗೆ ಹೋಗೆ
ಮಲ್ಲಿಗೆ ಹಾಗೆ

ಸಂಜೆಯು ನೀನೆಯ ಮುಂಜಾನೆಯು ನೀನೆಯ
ನಮ್ಮ ಹಗಲಿರುಳೆಲ್ಲಾ ನೀನೆಯ
ಏ ಹುಡುಗಿ
ಇಲ್ಲಿ ತುಸು ನಿಂತಿರು ಹೀಗೆ
ಮಲ್ಲಿಗೆ ಹಾಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಳೆಗಿಡಿಗಳಿಂದ ಗೊಬ್ಬರ
Next post ಮಹಿಳಾ ದಿನ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys