ಪುಟ್ಟನ ಹಳ್ಳಿ ಜಾತ್ರೆಯಲಿ
ಸಿಗುವವು ಬಗೆ ಬಗೆ ತಿನಿಸುಗಳು
ಬೆಂಡು ಬತ್ತಾಸು ಜಿಲೇಬಿಗಳು
ಒಣಮಂಡಕ್ಕಿಯ ಮೂಟೆಗಳು

ದಾರದ ಉಂಡೆ ರಬ್ಬರ್ ಚೆಂಡು
ರಿಬ್ಬನ್ ಟೇಪು ಗಾಜಿನ ಗುಂಡು
ಹೇರ್‌ಪಿನ್ ಕನ್ನಡಿ ಬಾಚಣಿಗೆ
ಕುಂಕುಮ ಟಿಕಳಿ ಬೀಸಣಿಗೆ

ಭಜನೆ ಸನಾದಿ ಕರಡಿಮಜಲು
ತಾಳಕೆ ಕುಣಿವ ನಂದಿಕೋಲು
ಗಗನ ಮುಟ್ಟುವುದು ಜಯಘೋಷ
ಎಳೆವರು ತೇರನು ಮರೆತು ದ್ವೇಷ

ತೆಂಗು ಬಾಳೆ ಉತ್ತತ್ತಿಗಳನ್ನು
ತೇರಿಗೆ ಬೀಸಿ ಎಸೆಯುವರು
ಭಕ್ತಿಯಿಂದಲೇ ನಮಿಸುತ್ತ
ತೇರನು ಎಳೆದು ಹಿಂತಿರುಗುತ್ತ

ಜಾತ್ರೆಯ ನೆನಪಿಗೆ ಕೊಳ್ಳುವರು
ತಿಂಡಿ ತಿನಿಸಿನೊಂದಿಗೆ ನಡೆಯುವರು
ಮಕ್ಕಳಿಗೆ ಕೈತುಂಬ ಆಟಿಗೆ ವಸ್ತು
ಆಗದು ಆಡಿದರೆ ಎಷ್ಟೂ ಸುಸ್ತು

ಅತಿಥಿ ದೇವೋ ಭವ ಅವರ ಧ್ಯೇಯ
ನೆಂಟರಿಸ್ಟರ ಕರೆ ತರುವರು ನೇಹದಿ
ಊಟದಿ ಧಾರಾಳತನ ತೋರುವರು
ಅರವಟ್ಟಿಗೆ ಛತ್ರ ನೆನಪಿಗೆ ತರುವರು
*****