ಪ್ರಕೃತಿ ಪರವಾಗದೊಡಿತ್ತ ಅಧ್ಯಾತ್ಮ ತತ್ತ್ವಜ್ಞಾನವೆಂದೊಡಂ ಸೊಕ್ಕಿನೊಳತ್ತ ವಿಜ್ಞಾನವೆಂದೊಡಂ ಏನು ಪುರುಷಾರ್ಥ? ಪ್ರಕೃತಿಪರ ಜೀವನಕಿರ್‍ಪುದದೊಂದೆ ಕೃಷಿ ಕ್ಷೇತ್ರ ಯುಕ್ತದೊಳನ್ನಾರೋಗ್ಯ ಐಶ್ವರ್‍ಯವಾರಾಮ ಇಲ್ಲಿಹುದು ಎಕ್ಕಸಕ್ಕವಾಗದಂದದೊಳಿಲ್ಲಿ ವಿ...

ವರಾ ಬಂದಾ ಸರಾ ತಂದಾ ಎತ್ತ ಹೋದಳು ರೂಪಸಿ ಯಾಕ ನಾಚಿಗಿ ಯಾಕ ಅಂಜಿಕಿ ಯಾಕ ನಿಂತಳು ದೇವಕಿ ದೂರ ಮುಗುಲಾ ಹನಿಯ ನಿಬ್ಬಣ ನೀರ ಹಬ್ಬವ ತಂದಿತ ಬಿಸಿಲು ಸತ್ತಿತ ಢಗಿಯು ಬತ್ತಿತ ಕಣ್ಣು ಶೀತಲವಾಯಿತ ಕರಿಯ ಮಾಡದಿ ರವಿಯು ಮಲಗಿದಾ ಕನಸು ಬಾಗಿಲ ತೆರೆಯಿತ ಕ...

“ಸಾವು” ಪದವೇ ಭಯಂಕರ ಭೀಕರ ಎದೆ ನಡುಗಿಸುವ ಎರಡಕ್ಷರ ಹುಡುಕಿದರೂ ಸಿಕ್ಕದು ನೀನಿಲ್ಲದ ಜಾಗ ನಿನ್ನ ನಿರ್ನಾಮಕ್ಕೆ ಮಾಡುತಿಹರು ಮಹಾಯಾಗ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ ಬುದ್ಧ ಸಂಸಾರವೇ ತೊರೆದು ಎದ್ದ ಬಯಸುವವರಾರು ನಿನಗೆ ಸ್ವ...

ಕಲಿಯಬಾರದು ಕಲಿತನವನು ಕಲಿಯಬಾರದು ವಿವೇಕಸಹಜವನು ಕಲಿಯಬಾರದು ದಾನಗುಣವನು ಕಲಿಯಬಾರದು ಸತ್ಪಥವನು ಸಕಳೇಶ್ವರದೇವಾ ನೀ ಕರುಣಿಸಿದಲ್ಲದೆ [ಕಲಿಯಬಾರದು-ಕಲಿಯಲು ಬಾರದು, ಅಸಾಧ್ಯ] ಸಕಲೇಶಮಾದರಸನ ವಚನ. ಈ ವಚನದ ಮೊದಲ ನಾಲ್ಕು ಸಾಲುಗಳಲ್ಲಿರುವ `ಕಲಿಯಬಾ...

-ಕುರುಸಾಮ್ರಾಜ್ಯದ ಅರಸುಮಕ್ಕಳಿಗೆ ಶಸ್ತ್ರವಿದ್ಯೆಗಳ ಬೋಧಿಸಲು ಕುರುಕುಲ ಪಿತಾಮಹ ಭೀಷ್ಮನಿಂದ ನೇಮಿಸಲ್ಪಟ್ಟ ದ್ರೋಣನು, ಸಕಲ ವಿದ್ಯೆಗಳನ್ನು ಅವರಿಗೆ ಕಲಿಸುತ್ತಿರಲು, ದ್ರೋಣನ ಮಗನಾದ ಅಶ್ವತ್ಥಾಮನೂ ಅವರೊಟ್ಟಿಗಿದ್ದು ತಾನೂ ವಿದ್ಯಾಪಾರಂಗತನಾದ. ಬಡ...

ಬೆಳಕಿನ ಸೂರ್ಯ ಉದುರಿಸುತ್ತಾನೆ ಆವರ್ತ ಬೀಜಗಳು ಸಾಗರದಲಿ. ತೇಲಿ ಮತ್ತೆ ಹನಿ ಆಗಿ ಆಗಸಕ್ಕೇರಿ ಬಿಳಿ ಮೋಡಗಳು ತೇಲಿದ ನೀಲಿ ಆಕಾಶ. ಎಲ್ಲಾ ಗುಟ್ಟುಗಳ ನಿನ್ನಲ್ಲೇ ಇರಿಸಿಕೊಂಡು ಅವಸ್ಥೆಯಲಿ ಒಲೆಬೆಂಕಿ ಉರಿದು, ಬೀಜಗಳ ರೊಟ್ಟಿಗಳು ಹರಡಿದ ಬದುಕು. ಗಾ...

ಹಸಿರುಟ್ಟ ನೆಲದಲ್ಲಿ ಹೊಸತು ಬಗೆಯ ಕಂಡೆ ಹೊಸ ಬೆಳಕಿನ ಹಗಲಲ್ಲಿ ನಸು ನಾಚಿದ ಮೊಗವ ಕಂಡೆ || ಋತು ದರ್ಶನದಾ ನೆಲೆಯಲಿ ದಿವ್ಯತೆಯ ಭಾವವ ಕಂಡೆ ಸುಂದರ ಸ್ವಪ್ನಗಾನ ಲತಾಮಂಟಪದಲ್ಲಿ ನಳಿನ ಮುಖಿಯರ ನರ್‍ತನ ಕಂಡೆ || ಮೇಘಮಾಲೆಯ ಚಿತ್ತದೋಕುಳಿಯಲಿ ಚಿತ್ತ...

ಮಾನವ ಶರೀರವೇ ನಮಗೊಂದವಕಾಶ ಪರಮಾತ್ಮನ ಕಾಣಲು ಆಗಲಿ ಸಾಟಿ ಭಗ್ನ ಮನಸ್ಸು, ಭಗ್ನ ಬುದ್ಧಿ ಭ್ರಮೆಗಳು ನಿನ್ನೊಂದಿಗೆ ಮಾಡುತಿಹವು ನಿತ್ಯ ಪೈ ಪೋಟಿ ಪರಶಿವ ನಮಗೆಷ್ಟು ಇಹನು ಅಂತರದಲಿ ಅದುವೆ ಆತ್ಮ ನಮಗಿರುವಷ್ಟು ದೂರ ನಮ್ ಜನುಮ ಉದ್ದರಿಸಲು ನಾವಾಗಬೇಕ...

ಮಾಧವನು ಪ್ರತಿನಿತ್ಯವೂ ಬೆಳಗ್ಗೆ ಎದ್ದ ಕೂಡಲೆ ಮುಖಮಜ್ಜ ನವಾದ್ದ ಬಳಿಕ ತಂದೆಗೆ ನಮಸ್ಕಾರವನ್ನು ಮಾಡಿ ಆತನ ಆಶೀರ್ವಾದವನ್ನು ಪಡೆದು ಅನಂತರ ಇತರ ಕೆಲಸಗಳಿಗೆ ಗಮನ ಕೊಡುತ್ತಿದ್ದನು. ಆದಿನ ಬೆಳಿಗ್ಗೆ ಏಳುಗಂಟಿಯಾದರೂ ಮಾಧವನು ಶಂಕರ ರಾಯನ ಕೊಠಡಿಗೆ ಬ...

ಮಧುಮಧುರವಾದ ಹಿರಿಹಗಲು ಒಂದು ಬೆಳಗಿತ್ತು ಅವನ ಸುತ್ತು. ಹರ್ಷಾವತರಣ ಆನಂತ್ಯದಿಂದ ಪ್ರಭೆ ಬೀರಿದಂತೆ ಇತ್ತು. ಬಂಗಾರನಗೆಯ ಹೊಂಗಾವಲಲ್ಲಿ ಮೆರೆದಿಹವು ಸುಖದ ಬೀಡು, ಬಿಡುಗಡೆಯ ಪಡೆದ ಒಳಗಡೆಯ ಎದೆಯ ಹದಹದುಳವುಳ್ಳ ನಾಡು. ಆದೇವದೇವನಾ ಸೋಮರಸವು ಮೈಗಿಳ...

1...3940414243...183

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...