ಹಸಿರುಟ್ಟ ನೆಲದಲ್ಲಿ

ಹಸಿರುಟ್ಟ ನೆಲದಲ್ಲಿ
ಹೊಸತು ಬಗೆಯ ಕಂಡೆ
ಹೊಸ ಬೆಳಕಿನ ಹಗಲಲ್ಲಿ
ನಸು ನಾಚಿದ ಮೊಗವ ಕಂಡೆ ||

ಋತು ದರ್ಶನದಾ ನೆಲೆಯಲಿ
ದಿವ್ಯತೆಯ ಭಾವವ ಕಂಡೆ
ಸುಂದರ ಸ್ವಪ್ನಗಾನ ಲತಾಮಂಟಪದಲ್ಲಿ
ನಳಿನ ಮುಖಿಯರ ನರ್‍ತನ ಕಂಡೆ ||

ಮೇಘಮಾಲೆಯ ಚಿತ್ತದೋಕುಳಿಯಲಿ
ಚಿತ್ತ ಬಿಡಿಸಿ ಹಸನಾಗಿಹ ವಸಂತನ ಕಂಡೆ
ನವಯೌವನದ ಹುರುಪಿಗೆ ನಲಿದ
ಮಾಧವಿ ಮನಸಿಜನವರಿಸಿದ ಕಂಡೆ ||

ಕಾನನದೊಳು ನವ್ಯ ಭಾವದೊಲುಮೆಯಲಿ
ನಲಿಯುವ ತರುಲತೆ ಮೃಗ ಕೃಷ್ಣೆಯರ ಕಂಡೆ
ಕಾದಂಬಿನಿಯಲಿ ನೊಸೆದ ನವನೀತ
ಬೆಡಗಿಯರ ಬಳುಕಿ ನಡೆವ ಸೊಬಗ ಕಂಡೆ ||

ಜೀವದುಸಿರಾಗಿ ಶ್ರುತಿಯಾಗಿ
ಅನಂತದೊಳು ಕಲಕಲನಾದದಿಂ
ಬೆರೆತು ಕುಣಿಯುತ ಬರುವ
ಜಲಕನ್ಯೆಯರ ಕಂಡೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವ ಶರೀರ ದೇವರಿಗಾಗಿ
Next post ಅನಾವರ್ತ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…