ಬಾಳಿಗಾಹಾರ ಹೇಗೋ ಹಾಗೆ ನೀ ನನಗೆ, ಬೇಸಿಗೆಯ ನೆಲಕೆ ಮಳೆಧಾರೆ ಸುರಿದಂತೆ; ನನ್ನ ಈ ತುಯ್ತಗಳು ಎಲ್ಲವೂ ನಿನಗಾಗೇ ಜಿಪುಣನಿಗು ಅವನ ನಿಧಿಗೂ ನಡುವೆ ಇರುವಂತೆ. ನಿನ್ನ ಬಗೆಗಿನ ಹೆಮ್ಮೆ ಒಮ್ಮೆ, ಮರುಗಳಿಗೆಯೇ ಕಾಲ ನಿನ್ನೀ ಚೆಲುವ ಕದಿವನೆನ್ನುವ ಶಂಕೆ;...

ತಪ್ಪು ನೆಪ್ಪುಗಳ ನಡುವೆ “ಮಹಾರಾಜ ಮಹಾರಾಜ ರಾವಣೇಶ್ವರ” ಕರೆಗೆ ಕಿವಿಗೊಟ್ಟು ತಟ್ಟನೆ ತಿರುಗಿದೆ. ನೆನಪಿನ ತಂತುಗಳು ತುಂಡಾಗಿ ವಾಸ್ತವ ಜಗತ್ತಿಗೆ ಬಂದಾಗ ಸಖಿಯೊಬ್ಬಳು ಏನನ್ನೋ ಭಿನ್ನವಿಸುತ್ತಿದ್ದಾಳೆ. “ಏನು ವಿಷಯ”?...

ಬಾಳ ಬಳ್ಳಿ ಬಿಟ್ಟ ಹೂವು ಕೂಸು ಮುದುಮುದ್ದಿದೆ ಜೀವ ಜೀವ ಆತು ಓತು ಮೈಯ್ಯ ಮಾಟ ತಿದ್ದಿದೆ ಮೋಹ ಮಮತೆ ಕೂಡ ದಣಿದು ದೇಹ ಜಾಲ ಹೆಣೆದಿದೆ ಅಳುವ ನೋವ ಕುಂದು ಕೊರತೆ ಬಾಲರೂಪ ನೊಣೆದಿದೆ ಬಲಿದು ಬೆಳೆದು ನಲಿದು ಉಲಿದು ಹೊಂದು ಫಲವ ಕುಸುಮವೆ ಬಾಳು ಬಾಳ ಕ...

‘ದುಡಿಯುವ ಮಹಿಳೆ’ ಪಟ್ಟ – ಭದ್ರ ನನಗಿಲ್ಲ. ‘ಕಸ ಮುಸುರೆಯವಳು’ ಅನ್ನುವ ಬಿರುದು ಮಾತ್ರ ನನಗೆ. ವಾರದ ರಜಾ ದಿನದಿಂದ ಹೆರಿಗೆಯ ರಜೆಯವರೆಗೆ ಯಾವ ರಜೆಯೂ ನನಗಿಲ್ಲ. ದಿಪಾವಳಿ- ಯುಗಾದಿಗೂ ರಜೆ ಇಲ್ಲ – ಜಾಸ್ತಿ ಕೆಲಸ! ಓಟಿ ಇಲ್ಲ &#82...

ಹೆಣ್ಣಿಗೆ ಮನ ಸೋಲದ ಗಂಡುಗಳೇ……. ಇಲ್ಲ ಚಿನ್ನಕೆ ಮನ ಸೋಲದ ಹೆಣ್ಣುಗಳೇ… ಇಲ್ಲ. ಹೆಣ್ಣಿಗೆ ಆಭರಣವೇ ಅಂದ ಗಂಡಿಗೆ ಅವಳ ಸಾಂಗತ್ಯವೇ ಚಂದ ಇಬ್ಬರು ಸೇರಲು ಬಾಳೇ ಬಂಗಾರ ಜೋಡಿಯಾಗಿದ್ದರೆ ಅನುದಿನ ಜೀವನವೇ ಸುಖ-ಸಂಸಾರ ಅದುವೆ ಆನಂ...

ಮುಚ್ಚಿದ ಗೂಡಿನ ಬಾಗಿಲು, ಬಾಗಿಲಿಲ್ಲದ ಬೀದಿ ನಡುವೆ ಲೋಕವ್ಯಾಪಾರಕ್ಕೆ ಸಾಕ್ಷಿ ಒಂದು ಅಬ್ಬೇಪಾರಿ ಹೊಸಿಲು. * ಅತ್ತ ಬಾಯ್ದೆರೆದು ಬಿದ್ದುಕೊಂಡಿರುವ ಬಿನ್ನಾಣಗಿತ್ತಿ ಬೀದಿ ಆಹ್ವಾನಕ್ಕೆ ಕ್ಷಣ ಕ್ಷಣವೂ ಮರುಳಾಗಿ ಬೀಳುವ ಅಸಂಖ್ಯ ಬಡಪಾಯಿ ಜೀವಗಳು ಚ...

ಒಬ್ಬ ಸಾಹಿತಿಯ ಸಾಹಿತ್ಯ ಕೃತಿಗಳ ಮೇಲೆ ಯಾವ ರೀತಿಯ ಮಿತಿಗಳಿರುವುದು ಸಾಧ್ಯ? ವಿಲಿಯಮ್ ಫಾಲ್ಕ್‌ನರ್‌ನ ಕಥನ ಜೀವನದ ಕುರಿತಾಗಿ ಚಲೋದಾದ ಪುಸ್ತಕವೊಂದನ್ನು (Faulkner’s Career: An internal Literary History) ಬರೆದಿರುವ ಲೇಖಕ ಗ್ಯಾ...

ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ ಬಗೆ ಬಗೆಯ ಬೇಡರಿಂದಲಿ ದೂರವಾಗು. ಹೊತ್ತನ್ನು ತಿಂಬ ಸೋಮಾರಿತನ ಬೇಡ! ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ! ಕತ್ತು ಕೊಯ್ಕರ ಕೂಡೆ ನಂಟುಬೇಡತನ! ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ! ಎತ್ತಿದ್ದ ಸಾಲ...

ನಡೆಯುವೊಡೆ ಎಡವಿದೊಡದು ಸಹಜ ನೋವಿನೊಡೆ ಕಲಿವ ನಲಿವುಂಟಲ್ಲಿ ನಡೆಯದವನೆಡವಿದೊಡೆ ನಡೆವವನು ನೋಯುವಾಧುನಿಕ ಸ್ಥಿತಿಯೊಳಗೆ ಕೃಷಿ ತಜ್ಞ ನೆಡವಿನಲಿ ಕೃಷಿಕ ತಾ ನೋಯುತಿಹ – ವಿಜ್ಞಾನೇಶ್ವರಾ *****...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...