ಅವರು ನವಿಲುಗಳನ್ನು ಕೊಂದರು ಉದರವನು ಭರಿಸಿದರು. ಗರಿಗಳನ್ನು ಮಾರಿದರು ಕಂಠವನು ತಣಿಸಿದರು ಕೇಕೆ ಹಾಕಿದರು ಮೈದುಂಬಿ ಕುಣಿದರು. ಇತ್ತವರಿಗೆ ನವಿಲಾಗುವ ಯೋಗ ಅಹಾ! ಅದೇನದು ಐಭೋಗ… ದಿನದ ಅನ್ನವ ಕರುಣಿಸಿ ದಯೆ ತೋರಿದ ದೇವರಿಗೆ ಧನ್ಯವಾದ ಎಂದ...

ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ ಅವುಗಳಲ್ಲಿ ಹುರುಳಿಲ್ಲ...

ಕೃಷ್ಣ, ಗೊಮ್ಮಟರ ಬಗ್ಗೆ ನಮಗಿಲ್ಲ ಬೇಸರ ಒಬ್ಬ ಶಿಷ್ಟ ರಕ್ಷಕ, ದುಷ್ಟಸಂಹಾರಕ! ಇನ್ನೋರ್‍ವ ತ್ಯಾಗದ ಪ್ರತೀಕ ಇವರೀರ್‍ವರು ಜಗತ್ಪ್ರಸಿದ್ಧ ಕಲ್ಲಾಗಿದ್ದರೂ ಜೀವಂತ ಛೇ, ಮರೆತಿದ್ದೆ ಅವನೇನು ಕಡಿಮೆಯೇ ಕೋಟಿ ಕೋಟಿ ನುಂಗುವ ಆ ತಿಮ್ಮಪ್ಪನ ಬಗ್ಗೆಯೂ ನಮ...

ಜೀವನದ ಮುಸ್ಸಂಜೆಯಲಿ ಜವಾಬ್ದಾರಿಗಳೆಲ್ಲವ ಕಳೆದು ನಾವೇ ನಾವಾಗಿರಬೇಕೆಂದು ನಾವೇ ಕಟ್ಟಿದ ಗೂಡಲ್ಲಿ ನೆಲೆಯೂರಿದಾಗ ನಮ್ಮನ್ನು ನಾವು ಕಳಕೊಂಡಿದ್ದೆವು. ಎದುರಿಗಿದ್ದ ಮರುಭೂಮಿಯಲಿ ಹುಡುಕಹೊರಟಾಗ ಸಿಕ್ಕಿದ್ದೆಲ್ಲ ಬರೆ ಮರುಳು! ಪ್ರೀತಿಯ ಹಸಿರಿರಲಿಲ್ಲ...

ಯಾಕೆನ್ನ ಕಾವ್ಯ ಹೊಸ ಮಿಂಚಿರದೆ ಬರಡಾಯ್ತು ? ಯಾಕಾಯ್ತು ದೂರ ವೈವಿಧ್ಯ ನಾವೀನ್ಯಕ್ಕೆ ? ಹೊಸ ಕಾಲಗತಿಗೆ ಧೋರಣೆಗೆ ಶ್ರುತಿಗೊಡದಾಯ್ತು, ಹೊಸ ಶೈಲಿ ತಂತ್ರ ಗಮನಿಸಲಿಲ್ಲ ಯಾತಕ್ಕೆ ? ಇಂದಿಗೂ ಹಿಂದಿನಂತೊಂದೆ ಥರ ಹಾಡುವುದು. ಹೊಸ ಕಾಣ್ಕೆಗೂ ಹಳೆಯ ಮಾ...

ಶಾಪಗಳ ಸುಳಿಯಲ್ಲಿ “ಛೇ ಎಂತಹ ಕೆಲಸವಾಯಿತು ನಾನಲ್ಲಿಗೆ ಹೋಗಬಾರದಿತ್ತು ಎಂದೂ ಮಾತಾಡದ ಮಂಡೋದರಿ, ಈ ದಿನ ಇಷ್ಟೊಂದು ಮಾತಾಡಿದಳಲ್ಲ. ಈ ಹೆಂಗಸರೇ ಇಷ್ಟು! ಅಸೂಯೆಗೆ ಮತ್ತೊಂದು ಹೆಸರು, ಗಂಡನಾದವನು ಅವಳ ಕಣ್ಣೆದುರಿಗೆ ಹೇಳಿದಂತೆ ಕೇಳಿಕೊಂಡು ...

ನಿನ್ನ ಕಣ್ಣ ಹನಿ ನನ್ನ ಮನಕೊರೆದು ತತ್ತರಿಸಿ ಬಿಡುವುದಮ್ಮ ಬೇಡ ಹಾಕದಿರು, ತಡೆದು ಹಿಡಿತಾಯಿ ಕಣ್ಣೀರ ಮುತ್ತನಮ್ಮ ಒಂದೆ ಹೊಟ್ಟೆಯಲಿ ಹುಟ್ಟ ಬಹುದಿತ್ತು ಎಂತೊ ತಪ್ಪಿತಕ್ಕ ಆದರೇನು ನಾವಣ್ಣ ತಂಗಿಯರು ಆಗಿ ಇರುವದಕ್ಕ ಹುಟ್ಟಿನಲ್ಲೇನು ಇಹುದು ತಂಗಿ ...

ಗಾಳಿಯ ಪಟದಂತೆ ಸಂಸಾರ ಮೇಲೆ ಹಾರಲು ಬೇಕು | ಸೂತ್ರದ ದಾರ ಎರಡೂ ಬದಿಯಿಂದ | ಎಳೆಯ ಸೇರಿಸಿ ಸಮ ಗಂಟು ಹಾಕಿದರೆ | ಸೂತ್ರವು ಸಿದ್ದ ಗಂಡು-ಹೆಣ್ಣು ಸೇರಿಸಿ ಬ್ರಹ್ಮಗಂಟು ಬೆಸೆಯಲು ಅದುವೇ | ಕುಟುಂಬ ಸಿದ್ದ ಸೂತ್ರದ ಗಂಟು | ಭದ್ರವಾಗಿರಲಷ್ಟೇ ಸುಸೂತ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....