ಅದೇನೋ ಮುಂಬಯಿ ಎಂದೊಡನೇ ವ್ಯಾಸರಾಯಬಲ್ಲಾಳರು ನೆನಪಾಗುತ್ತಾರೆ ಅಥವಾ ವ್ಯಾಸರಾಯ ಬಲ್ಲಾಳರೆಂದೊಡನೇ ಮುಂಬಯಿ ನೆನಪಾಗುತ್ತದೆ. ಅಂದರೆ ಅವರೆಡರ ಅವಿನಾಭಾವ ಸಂಬಂಧವನ್ನು ನಾವು ಹೇಳಿದಂತಾಯಿತು. ಉದ್ಯೋಗವನ್ನರಸಿ ತಮ್ಮ ಯೌವನದಲ್ಲಿಯೇ ಮುಂಬಯಿ ಸೇರಿದ ವ್...

ರಾಜು ಮನೆಯ ಗೋಡೆಯಲ್ಲಿ ಗುಬ್ಬಿಯ ಗೂಡು ಇರುವುದು ಹೆಣ್ಣು-ಗಂಡು ನೆಮ್ಮದಿಯಿಂದಲಿ ಬದುಕುತಿದ್ದವು ಆ ಮನೆಯಲ್ಲಿ ಅನ್ನವನ್ನು ಹುಡುಕಲು ಗುಬ್ಬಿಗಳು ಗೂಡು ತೊರೆದು ಹೋಗುವವು ಕಾಳು ಹುಳುಗಳ ಕಚ್ಚಿಕೊಳುತ ಗೂಡಿಗೆ ಮತ್ತೆ ಮರಳುವವು ದಿನಗಳು ಹೀಗೆ ಗತಿಸಿ...

ಟೀಚರ್ ಹೇಳ್ತಾರೆ ನಮ್ಗೆ ಕಲಿಬೇಕಂತೆ ಹಾಡು ಹಾಡ್ತಾ ಹಾಡ್ತಾ ನಾವು ಕಟ್ಬೇಕಂತೆ ನಾಡು ಟೀಚರ್ ಹೇಳ್ತಾರೆ ನಮ್ಗೆ ಉತ್ಬೇಕಂತೆ ನೆಲ ಎಷ್ಟೆ ಕಷ್ಟ ಬಂದ್ರೂ ಬಿಡಬಾರದಂತೆ ಛಲ ಟೀಚರ್ ಹೇಳ್ತಾರೆ ನಮ್ಗೆ ರೈತ ದೊಡ್ಡೋನಂತೆ ಎಲ್ಲಾ ಕಷ್ಟ ಸಹಿಸಿಕೊಂಡು ಅನ್ನ ...

ತುಸುತುಸುವೇ ಹತ್ತಿರವಾಗುವ ಕ್ರೂರ ಸಾವಿನ ಸಂಬಂಧ ಪಾಶವೀ ಆಕ್ರಮಣ, ವಿರಹದ ಬಿಸಿ ಮೀರಿ ಹೊರ ಬರುವ ಕರುಳ ಸಂಬಂಧ, ಬದುಕು ಮುದುಡುವಂತೆ ಬೀರುವ ಸುಡು ನೋಟ, ಬದುಕಿನ ಆಳ – ಅಗಲ ಏರುಪೇರಿನಲಿ ಏಕುತ್ತ ಎಳೆದು ತಂದ ಬಾಳಬಂಡಿ ಮನೆ ಮಂದಿಗೆಲ್ಲ ಬಡಿ...

ಸದಾ ನನ್ನ ಮನದೊಳಗೆ ಮಿಡಿಯುತಿರು ಸಾಕ್ಷಿಯೇ ಸದಾ ನನ್ನ ಕಿವಿಯೊಳಗೆ ನುಡಿಯೇ ಮನಃಸಾಕ್ಷಿಯೇ ನನ್ನ ನಾಲಿಗೆಯಲಿ ಇರು ನೀನು ನನ್ನ ನಗೆಯಲ್ಲಿ ಇರು ನೀನು ಸದಾ ನನ್ನ ಬಗೆಯಲ್ಲಿರು ಸದಾ ನನ್ನ ಬೆಳಕಾಗಿರು ಕಣ್ಗುರುಡ ನಾ ಕಾಣದೆಯೇ ತಪ್ಪು ಹೆಜ್ಜೆಯಿಡುವಾಗ...

‘ಭವ್ಯ ಭಾರತದಲ್ಲಿ ಬಾಲ್ಯ ವಿವಾಹಗಳು ಜಾಸ್ತಿ ಜರುಗುತ್ತಿವೆ. ಇದಕ್ಕೆ ಮುಖ್ಯ ಕಾರಣಗಳನ್ನು ಕೇಂದ್ರ ಸಾಂಖ್ಯಿಕ ಇಲಾಖೆ ಇತ್ತೀಚೆಗೆ ನಡೆಸಿರುವ ಜಿಲ್ಲಾ ಮಟ್ಟದ ಆರೋಗ್ಯ ಸಮೀಕ್ಷೆ (ಡಿ‌ಎಲ್‌ಎಚ್‌ಎಸ್) ಅಧ್ಯಯನ ನಡೆಸಿರುವುದು. ಮನೆಯಲ್ಲಿ ಅನಕ್ಷರತೆ, ...

“ನನ್ನ ಹೃದಯದಲುದಿಸಿದ ಕವಿತೆ ನಿನ್ನ ನೆನಪಲೆ ಹಾಡಿದೆ ಚರಿತೆ” ಗರಿಗೆದರುತ ಕುಣಿದಾ ನವಿಲು ಮಳೆ ಹನಿಸಿತು ಕರಗಿಸಿ ಮುಗಿಲು ಗಿರಿ ಕಾನನ ತಬ್ಬಿದ ಹಸಿರು ನಮ್ಮ ಪ್ರೀತಿಗೆ ತಂದಿತು ಉಸಿರು ಎಲ್ಲಾ ನದಿ ಝರಿ ಹೊನಲು ನಮ್ಮ ಪ್ರೀತಿಗೆ ಹಾಸ...

ನಿಶ್ಯಬ್ಧದ ಅಂತರಾಳದಲ್ಲಿ ನೆನಪಾಗುತ್ತವೆ ರಾತ್ರಿಯ ಏಕಾಂತದಲ್ಲಿ ಪಿಸುಗುಡುತ್ತವೆ. ಒಂಟಿತನದ ಬಯಕೆಯಲ್ಲಿ ಲಾಗ ಹಾಕುತ್ತವೆ. ಬಿದ್ದ ಬಾವಿಯಿಂದ ಮೇಲೆತ್ತಿ ತರಲು ನೀ ಎಸೆದ ಹಗ್ಗದ ಗುರುತು, ಹಿಡಿದೆತ್ತಿದ ಗುರುತು ಹಗ್ಗ ಎಸೆಯದೇ ನೀನು ಸುಮ್ಮನಿರಬಹು...

ನಸುಕಿನಲ್ಲಿ ಹಲ್ಲು ಮೂಡದ ಹಸುಳೆಯನ್ನು ಅವರು ಹೊಸಕಿ ಹಾಕಿದರು ಹಾಡು ಹಗಲೇ ಹರೆಯದ ಹುಡುಗಿಯನ್ನು ಎಳೆದಾಡಿದರು ಮುಸ್ಸಂಜೆಯಲ್ಲಿ ಮನೆಗೆ ಮರಳುತ್ತಿದ್ದ ಮುದುಕನನ್ನು ಮುಗಿಸಿದರು. ಬಲಿಯಾದವರು-ಬಲಿಗೈದವರು ಇಬ್ಬರೂ ನನ್ನ ಒಡಹುಟ್ಟುಗಳು ಅಯ್ಯೋ, ದ್ವೇ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....