ಬಾಲ್ಯ ವಿವಾಹಗಳ ಕಥೆ

ಬಾಲ್ಯ ವಿವಾಹಗಳ ಕಥೆ

‘ಭವ್ಯ ಭಾರತದಲ್ಲಿ ಬಾಲ್ಯ ವಿವಾಹಗಳು ಜಾಸ್ತಿ ಜರುಗುತ್ತಿವೆ. ಇದಕ್ಕೆ ಮುಖ್ಯ ಕಾರಣಗಳನ್ನು ಕೇಂದ್ರ ಸಾಂಖ್ಯಿಕ ಇಲಾಖೆ ಇತ್ತೀಚೆಗೆ ನಡೆಸಿರುವ ಜಿಲ್ಲಾ ಮಟ್ಟದ ಆರೋಗ್ಯ ಸಮೀಕ್ಷೆ (ಡಿ‌ಎಲ್‌ಎಚ್‌ಎಸ್) ಅಧ್ಯಯನ ನಡೆಸಿರುವುದು.

ಮನೆಯಲ್ಲಿ ಅನಕ್ಷರತೆ, ಬಡತನ, ಮೂಢನಂಬಿಕೆ, ಕಾಯ್ದೆ, ಕಾನೂನು, ಗೊತ್ತಿಲ್ಲದೆ ಇರುವುದರಿಂದ, ಅಜ್ಜ ಅಜ್ಜಿಯರ ಒತ್ತಾಯದ ಮೇರೆಗೆ ಹೆಣ್ಣುಮಕ್ಕಳು ಮದುವೆಯಾದರೆ ಸುರಕ್ಷಿತವೆಂದು ಭಾವಿಸಿರುವುದು; ಬೇಗ ಮದುವೆಯಾದರೆ ಬೇಗ ಮಕ್ಕಳಾದರೆ ಭವಿಷ್ಯ ಉತ್ತಮವಿರುವುದೆಂದು, ಮದುವೆ ಖರ್ಚು ಉಳಿಸಲು ಐದಾರು ಜನರನ್ನು ಒಟ್ಟಿಗೆ ಸೇರಿಸಿ ಮದುವೆ ಮಾಡಿ ಕೈತೊಳೆದುಕೊಳ್ಳುವ ಉದ್ದೇಶದಿಂದ ಬಾಲ್ಯ ವಿವಾಹಗಳು ಹಳ್ಳಿಗಳಲ್ಲಿ ಹಿಂದುಳಿದ ಬಡ ಕುಟುಂಬಗಳಲ್ಲಿ ಜಾಸ್ತಿ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ೧೦ ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ.

ಕಲಬುರ್‍ಗಿಯಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು ದಾಖಲಾಗಿವೆ. ಪ್ರಪ್ರಥಮ ಸ್ಥಾನದಲ್ಲಿ ಕಲಬುರ್ಗಿ, ರಾಯಚೂರು, ಯಾದಗಿರಿ, ಬೀದರ್, ಬಳ್ಳಾರಿ ಜಿಲ್ಲೆಗಳಲ್ಲಿ ಗುಟ್ಟಾಗಿ ಬಾಲ್ಯ ವಿವಾಹಗಳು ಜರುಗುತ್ತಿವೆ.

ಕಲಬುರ್‍ಗಿಯಲ್ಲಿ ೨೦೦೭-೨೦೦೮ನೆಯ ಸಾಲಿನಲ್ಲಿ ಶೇಕಡಾ ೪೧% ೨೦೧೨-೧೩ನೆಯ ಸಾಲಿನಲ್ಲಿ ಶೇಕಡಾ ೨೮.೫%

ಉಡುಪಿಯಲ್ಲಿ ೨೦೦೭-೨೦೦೮ನೆಯ ಸಾಲಿನಲ್ಲಿ ಶೇಕಡಾ ೨.೪% ೨೦೧೨-೧೩ನೆಯ ಸಾಲಿನಲ್ಲಿ ಶೇಕಡಾ ೧.೩%ಕ್ಕೆ ಕುಸಿದಿವೆ.

ಬಾಲ್ಯ ವಿವಾಹದ ಪ್ರಮಾಣವು ೨೦೦೭-೨೦೦೮ನೆಯ ಸಾಲಿಗಿಂತ ೨೦೧೨-೨೦೧೩ನೆಯ ಸಾಲಿನಲ್ಲಿ ಒಟ್ಟು ಶೇಕಡಾ ೮.೩% ರಷ್ಟು ಕುಸಿದಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಬಾಲ್ಯವಿವಾಹದ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆಯೆಂದು (ಡಿ‌ಎಲ್‌ಎಚ್‌ಎಸ್) ಕೇ.ಸಾ.ಇ. ನಡೆಸಿರುವ ಜಿಲ್ಲಾ ಮಟ್ಟದ ಆರೋಗ್ಯ ಸಮೀಕ್ಷೆಯು ಗಮನಾರ್‍ಹವಾದ ಅಂಶಗಳನ್ನು ಬಯಲಿಗೆಳೆದಿದೆ.

ಆದ್ದರಿಂದ ಮುದ್ದಾದ ಮಕ್ಕಳೆ… ತಂದೆ-ತಾಯಿ, ಅಜ್ಜ-ಅಜ್ಜಿ, ಅಕ್ಕ-ಅಣ್ಣಂದಿರಿಗೆ ಕಾನೂನು ಅರಿವು ಮಾಡಿಸಬೇಕು. ಬಾಲ್ಯವಿವಾಹ ಅಪರಾಧ ತಪ್ಪು, ಅಪಾಯ ಅವಮಾನವೆಂದು ತಿಳಿಸಿ ಹೇಳಿ ಅವರ ಮನ ಗೆಲ್ಲ ಬೇಕು. ಬಾಲ್ಯ ವಿವಾಹಗಳು ಎಲ್ಲೇ ಜರುಗಲಿ ಎಲ್ಲರೂ ಒಟ್ಟಾಗಿ ಸೇರಿ ತಡೆಯಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೃದಯದಲುದಿಸಿದ ಕವಿತೆ
Next post ಮನಃಸ್ಸಾಕ್ಷಿ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…