ತುಸುತುಸುವೇ ಹತ್ತಿರವಾಗುವ
ಕ್ರೂರ ಸಾವಿನ ಸಂಬಂಧ
ಪಾಶವೀ ಆಕ್ರಮಣ,
ವಿರಹದ ಬಿಸಿ ಮೀರಿ
ಹೊರ ಬರುವ ಕರುಳ ಸಂಬಂಧ,
ಬದುಕು ಮುದುಡುವಂತೆ
ಬೀರುವ ಸುಡು ನೋಟ,
ಬದುಕಿನ ಆಳ – ಅಗಲ
ಏರುಪೇರಿನಲಿ ಏಕುತ್ತ
ಎಳೆದು ತಂದ ಬಾಳಬಂಡಿ
ಮನೆ ಮಂದಿಗೆಲ್ಲ ಬಡಿಸಿ,
ಬರಿಹೊಟ್ಟೆ ಖಾಲಿ ತಟ್ಟೆ
ಬರೀ ನೀರು ಗತಿಯಾಗಿ
ತೃಪ್ತಿ ಮರೀಚಿಕೆ
ಕ್ರೌರ್ಯ ಪುನರಾವರ್ತನೆ
ತಾಳದೇ ತತ್ತರಿಸಿ
ಕುಸಿದಾಗ ಭೂಮಿಗೆ,
ಸಾವು ನೋವಿನ ಸೆಣಸಾಟ,
ನಾಯಕಿಗೆ ದುರಂತದ
ಬಾಯ್ತೆರೆದ ಭೂಮಿಯಲಿ
ಹುಡಿಯಾಗಿ ಒಡಲು ಸೇರಿ
ಮೊರೆ ಹೋಗಿ ಚಿರನಿದ್ರೆ,
ಹೇಳಿದಳು ಕೊನೆ ವಿದಾಯ
ನೋವು ಕ್ರೌರ್ಯಗಳಿಗೆ
*****