ಬಯಲ ಮೇಲೆ ಮೋಡದ ನೆರಳು ಚಲಿಸತೊಡಗುವುದು ಕ್ಷೀಣವಾದ ಸಂಜೆ ಬೆಳಕು ಕ್ಷಿತಿಜದ ಹಿಂದೆ ಕಾಣುವುದು ಮುತ್ತ ಹೊತ್ತಿನ ದಣಿವ ನೆರಳು ಮೆಲ್ಲನೆ ಹುಲ್ಲ ಮೇಲಿಂದ ಸರಿಯುವುದು ಹಸಿ ತಂಗಾಳಿಯಲ್ಲಿ ನೀಲ ಘನದ ಆಭಾಸವಾಗುವುದು ಒಣ ಧೂಳು ಹದನಾಗೆದ್ದು ತನ್ನ ಸುಳಿಯ...

ಝುಳು ಝುಳು ನಡು ಬಳುಕಿಸಿ ಬಂದಳು ನೀರೆ ಯಾರಿವಳು ಹೇಳೆ || ಮೌನದಿ ತೂಗುತ ಜಾಲವ ಬೀಸುತ ಚಂಚಲೆ ಇವಳು ಯಾರಿವಳು ಹೇಳೆ || ವೈಯಾರಿ ಇವಳು ಗಯ್ಯಾಳಿ ಇವಳು ಮರ್ಮವ ತಿಳಿ ಯಾರಿವಳು ಹೇಳೆ || ಊರ ಹೊರಗೆ ಊರನಾಳ್ವಳು ಆಗರ್ಭ ಸಂಜಾತೆ ಇವಳೆ ಇವಳು ಕೇಳೆ ||...

ಮಾಘವದ್ಯನವಮಿಯ ದಿವಸ ಸಿಂಹಗಡವನ್ನು ಹಸ್ತಗತಮಾಡಿ ಕೊಳ್ಳುವೆನೆಂದು ಶಿವಾಜಿಯ ಬಳಿಯಲ್ಲಿ ಪ್ರತಿಜ್ಞೆ ಮಾಡಿ ಹೋದ ತಾನಾಜಿಮಾಲಸುರೆ ಎಂಬ ಸರದಾರನು ಸಿಂಹಗಡದ ಕಿಲ್ಲೇದಾರನಾದ ಉದಯಭಾನುವಿನಿಂದ ಮರಣಹೊಂದಿದ ಬಳಿಕ ಗಾಬರಿಗೊಂಡು ಓಡಿಹೋಗಲುದ್ಯುಕ್ತರಾದ ಅವನ...

ಬಾಳನ್ನು ಒರೆಗೆ ಹಚ್ಚಿನೋಡು ಇಂದ್ರಿಯಗಳಿಗೆ ತೊಂದ್ರೆ ಇಟ್ಟು ಕಾಡು ಮನಸ್ಸಿನ್ನು ಮುಕ್ತಿ ಮಾರ್ಗಕ್ಕೆ ದೂಡು ಆತ್ಮನ ಸಹಚರದಲಿ ಪರಮಾತ್ಮನ ಹಾಡು ಯಾವಕ್ಷಣಗಳಿವು ಮನುಜ! ಬರೀ ಮೋಜೆಂದು ಬಗೆದೆಯಾ? ಇಂದ್ರಿಯ ಗಟ್ಟಿ ಇರುವಾಗು ಸುಖ ನಂತರ ಪಾಪದ ಪರ್ವತ ಕ...

ನಿಂದಿಸದಿರು ನೀ ಕಾಲವನು ವಿಧಿಯ ನೆಪಮಾಡಿ| ದೂಷಿಸದಿರು ನೀ ಈ ಜನ್ಮವನು ಹಿಂದಿನ ಕಾಲಕರ್ಮನು ಹಗೆಮಾಡಿ|| ಕಠಿಣ ಪರಿಶ್ರಮವಿಲ್ಲದೆ ಬರಿಯ ಅದೃಷ್ಟವನೇ ನಂಬಿ ಬದುಕಲು ಸಾದ್ಯವೇನು?| ಬಿಲ್ಲನೆತ್ತಿ ಬಾಣವ ಹೂಡದೆ ಬರೀ ಠೇಂಕರಿಸಿದರೆ ಗುರಿಯತಲುಪಲು ಸಾಧ್...

ಓರ್ವ ಭಗ್ನ ಹೃದಯಿ ತನ್ನ ಪ್ರೀತಿ ಭಗ್ನವಾದ ಕತೆ ಹೇಳ ತೊಡಗಿದ. ಮೊದಲು ಕಾಲೇಜಿನಲ್ಲಿ ತಾನು ಪ್ರೀತಿಸಿದ ಹುಡುಗಿ ಕೈ ಕೊಟ್ಟು ತನ್ನ ಹೃದಯ ಮುಕ್ಕಾಯಿತು. ಮತ್ತೆ ಇನ್ನೊಂದು ಹುಡುಗಿ ಕಮರ್ಷಿಯಲ್ ಸ್ಟ್ರೀಟಿನಲ್ಲಿ ತಿರಸ್ಕರಿಸಿ ತನ್ನ ಹೃದಯ ಇನ್ನಷ್ಟು ...

ಸಾಲ ಸರ್ಪವು ಬಂದು ಸಂಸಾರ ಸೇರಿತು ಚಿತ್ತ ಚಿತ್ತವನೆಲ್ಲ ಹುತ್ತವ ಮಾಡಿತು. ಸಣ್ಣ ಸಂದೀಲಿ ತೂರಿ ಬಂದಾ ಸರ್ಪ ಹೆಡೆಯತ್ತಿ, ಸತಿಗೆ ಆಯ್ತಲ್ಲ ಸವತಿ ಸವತಿಯ ಸಂತತಿ ಬುಸುಗುಟ್ಟಿ ಬೆಳೆದಂತೆ ಸಂಸಾರದಾಗೆ ಇನ್ನೆಂಥ ಶಾಂತಿ! ಸುತ್ತಿ ಬಳಸಿದ ಸರ್ಪ, ಆಲಿಂಗ...

ಒತ್ತಾಸೆ : ದಿನಾಂಕ ೨೩, ೨೪ ನವೆಂಬರ್ ೨೦೦೨ರಂದು ಮಹಲಿಂಗಪುರದಲ್ಲಿ ನಡೆದ ೧೩ನೇ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರ ಆಶಯ ಮಾತುಗಳು/ಲೇಖನ ಬಂಡಾಯ ಇವತ್ತಿಗೂ ಜೀವಂತ. ಇದು ಅವತ್ತು ಇತ್ತು, ಇವತ್ತು ಇಲ್ಲ ಎಂದು ಹೇಳುವವರು ಬಂಡಾಯವನ್ನು...

ಮಂಗಳಂ, ಮೈಸೂರಿನರಮನೆಗೆ ಮಂಗಳಂ. ಜಯದ ಹೆಸರಿನ ಚಾಮರಾಜಂಗೆ ಮಂಗಳಂ. ಮುಮ್ಮಡಿಯ, ನಾಲ್ಮಡಿಯ ದಿವ್ಯ ತೇಜಂಗಳಂ ಒಮ್ಮುಡಿಯೊಳಾಂತೆಸೆವ ಧೀರಂಗೆ ಮಂಗಳಂ. ತಂದೆತಾಯ್ ಪಯಿರಿಟ್ಟ ಪುಣ್ಯದ ಫಲಂಗಳೇ, ಸೋದರನ ಸೌಭಾಗ್ಯದಮೃತ ಕಳಶಂಗಳೇ, ಲಾವಣ್ಯ ಲಕ್ಷ್ಮಿಯರನಾಳ...

ಸೂರ್ಯ ಅಪೂರ್ಣ ಚಂದ್ರ ಅಪೂರ್ಣ ತಾರಾಗಣ ಅಪೂರ್ಣ ಗಗನ ಅಪೂರ್ಣ ಭೂಮಿ ಅಪೂರ್ಣ ವಾರಿಧಿಯು ಅಪೂರ್ಣ ಭೂತ ಅಪೂರ್ಣ ಭವಿಷ್ಯ ಅಪೂರ್ಣ ವರ್ತಮಾನ ಅಪೂರ್ಣ ಅರಿವು ಅಪೂರ್ಣ ಆಯುಸ್ಸು ಅಪೂರ್ಣ ಯುಗ ಯುಗಾದಿ ಅಪೂರ್ಣ ಮಾತು ಅಪೂರ್ಣ ಮೌನ ಅಪೂರ್ಣ ಶಬ್ದಾರ್ಥ ಅಪೂ...

12345...13

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....