ಬಯಲ ಮೇಲೆ ಮೋಡದ ನೆರಳು ಚಲಿಸತೊಡಗುವುದು
ಕ್ಷೀಣವಾದ ಸಂಜೆ ಬೆಳಕು ಕ್ಷಿತಿಜದ ಹಿಂದೆ ಕಾಣುವುದು
ಮುತ್ತ ಹೊತ್ತಿನ ದಣಿವ ನೆರಳು
ಮೆಲ್ಲನೆ ಹುಲ್ಲ ಮೇಲಿಂದ ಸರಿಯುವುದು
ಹಸಿ ತಂಗಾಳಿಯಲ್ಲಿ
ನೀಲ ಘನದ ಆಭಾಸವಾಗುವುದು
ಒಣ ಧೂಳು ಹದನಾಗೆದ್ದು
ತನ್ನ ಸುಳಿಯಲ್ಲಿ ಸುತ್ತುತ್ತಿರುವುದು
ಮೋಡದ ನೆರಳು ಚಲಿಸುತ್ತ ಬಂದು
ನನ್ನ ಮನ ಮುಟ್ಟುವುದು
ಕಾಡನವಿಲು ಕಂಪ ಸೂಸಿ
ತಲೆದೂಗುವುದು
ಆಗ ನನ್ನ ಹೃದಯದಲ್ಲಿ
ಸೋನೆ ಮಳೆ ಸುರಿಯುವುದು.
*****
ಮೂಲ: ಶಾಂತಾ ಶೆಳ್ಕೆ
(ಮರಾಠಿ)